West Bengal: ಸ್ಫೋಟದ ತನಿಖೆಗೆ ತೆರಳಿದ್ದ NIA ತಂಡದ ಮೇಲೆ ದಾಳಿ..!

Bomb blast Case in West Bengal: 2022ರಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ತನಿಖೆಗಾಗಿ NIA ತಂಡವು ಪೂರ್ವ ಮಿಡ್ನಾಪುರ ಜಿಲ್ಲೆಗೆ ತೆರಳಿತ್ತು.

Written by - Puttaraj K Alur | Last Updated : Apr 6, 2024, 01:38 PM IST
  • ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತೆರಳಿದ್ದ NIA ತಂಡದ ಮೇಲೆ ದಾಳಿ
  • ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದಿರುವ ಆಘಾತಕಾರಿ ಘಟನೆ
  • NIA ಅಧಿಕಾರಿಗಳ ಕಾರುಗಳ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ ನಡೆಸಲಾಗಿದೆ
West Bengal: ಸ್ಫೋಟದ ತನಿಖೆಗೆ ತೆರಳಿದ್ದ NIA ತಂಡದ ಮೇಲೆ ದಾಳಿ..! title=
NIA ತಂಡದ ಮೇಲೆ ದಾಳಿ

ನವದೆಹಲಿ: ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ತೆರಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ ನಡೆದಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ. 2022ರಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ನಡೆದಿದ್ದ ಸ್ಫೋಟ ಪ್ರಕರಣದ ತನಿಖೆಗಾಗಿ NIA ತಂಡವು ಪೂರ್ವ ಮಿಡ್ನಾಪುರ ಜಿಲ್ಲೆಗೆ ತೆರಳಿತ್ತು.

ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ NIA ತಂಡವು ತಲುಪುತ್ತಿದ್ದಂತೆ ಕಾರುಗಳ ಮೇಲೆ ಕಲ್ಲು, ಇಟ್ಟಿಗೆಗಳನ್ನು ಎಸೆಯಲಾಗಿದೆ. ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಧಿಕಾರಿಗಳ ಕಾರಿನ ಗ್ಲಾಸುಗಳು ಒಡೆದಿವೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Daily GK Quiz: ಸೌರವ್ಯೂಹದ ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ?

2022ರ ಡಿಸೆಂಬರ್ 3ರಂದು ಭೂಪತಿನಗರದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದರು. ಈ ಸ್ಫೋಟ ಪ್ರಕರಣಕ್ಕ ಸಂಬಂಧಿಸಿದಂತೆ NIA ಕಳೆದ ತಿಂಗಳು 8 ತೃಣಮೂಲ ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಕರೆಸಿತ್ತು. ಮಾರ್ಚ್‌ 28ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ ಸಮನ್ಸ್ ಧಿಕ್ಕರಿಸಿದ್ದ ಹಿನ್ನೆಲೆ ಇಂದು ಅವರ ಮನೆಗೆ NIA ಅಧಿಕಾರಿಗಳ ತಂಡ ತೆರಳಿತ್ತು.

ಕಳೆದ 2 ತಿಂಗಳ ಹಿಂದೆಯಷ್ಟೇ ಜಾರಿ ನಿರ್ದೇಶನಾಲಯ(ED) ತಂಡದ ಮೇಲೆ ದಾಳಿ ನಡೆದಿತ್ತು. ಬಂಧಿತ ರಾಜ್ಯ ಆಹಾರ ಸಚಿವೆ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ TMC ನಾಯಕ ಶಹಜಹಾನ್ ಶೇಖ್ ಮನೆ ಮೇಲೆ ದಾಳಿ ನಡೆಸಲು ಹೋದಾಗ ED ಅಧಿಕಾರಿಗಳ ತಂಡಗಳ ಮೇಲೆ ದಾಳಿಯಾಗಿತ್ತು. ED ತಂಡದ ಜೊತೆಗಿದ್ದ ಕೇಂದ್ರ ಪಡೆ ಸಿಬ್ಬಂದಿ ಮೇಲೂ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರು ED ಅಧಿಕಾರಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು. 

ಇದನ್ನೂ ಓದಿ: Food Sequencing ಅಂದರೆ ಏನು? ಮಧುಮೇಹದಿಂದ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News