Bank Recruitment 2020: ಕೇವಲ ಸಂದರ್ಶನದ ಮೂಲಕ ಈ ಬ್ಯಾಂಕ್ ನಲ್ಲಿ ನೌಕರಿ ಪಡೆಯಲು ಇಂದೇ ಅಪ್ಪ್ಲೈ ಮಾಡಿ

ಬ್ಯಾಂಕ್ ಆಫ್ ಇಂಡಿಯಾ ಹಲವು ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ . ಈ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕವಾಗಿದೆ.

Last Updated : Aug 16, 2020, 12:54 PM IST
Bank Recruitment 2020: ಕೇವಲ ಸಂದರ್ಶನದ ಮೂಲಕ ಈ ಬ್ಯಾಂಕ್ ನಲ್ಲಿ ನೌಕರಿ ಪಡೆಯಲು ಇಂದೇ ಅಪ್ಪ್ಲೈ ಮಾಡಿ title=

ನವದೆಹಲಿ: ಬ್ಯಾಂಕ್ ಆಫ್ ಇಂಡಿಯಾ ಹಲವು ಹುದ್ದೆಗಳ ನೇಮಕಾತಿಗಾಗಿ (Recruitment) ಅರ್ಜಿ ಆಹ್ವಾನಿಸಿದೆ. 10 ನೇ ತರಗತಿ ಪಾಸಾದವರಿಂದ ಹಿಡಿದು ಪದವೀಧರರವರೆಗೆ  ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಕೆಲವೇ ಗಂಟೆಗಳು ಬಾಳೋ ಉಳಿದಿವೆ. ಏಕೆಂದರೆ, ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕವನ್ನು 16 ಆಗಸ್ಟ್ 2020 ಕ್ಕೆ ನಿಗದಿಪಡಿಸಲಾಗಿದೆ. ಈ ಹುದ್ದೆಗಳಲ್ಲಿ ಕೆಲಸ ಮಾಡಲು ಒಂದು ವೇಳೆ ನೀವು ಸಿದ್ಧರಿದ್ದರೆ, ಶೀಘ್ರದಲ್ಲೇ ಅರ್ಜಿ ಸಲ್ಲಿಸಿ.

ಒಟ್ಟು ಹುದ್ದೆಗಳ ಸಂಖ್ಯೆ- ಆಫೀಸರ್ -16, ಕ್ಲರ್ಕ್-14

ವಿದ್ಯಾರ್ಹತೆ- ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು. ಇದಲ್ಲದೆ,  A,B ಹಾಗೂ C ಕೆಟಗರಿಯ ಸ್ಪೋರ್ಟಿಂಗ್ ಇವೆಂಟ್/ಚಾಂಪಿಯನ್ ಷಿಪ್ ಸರ್ಟಿಫಿಕೆಟ್ ಹೊಂದಿರಬೇಕು. ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು ಹಾಗೂ D ಕೆಟಗರಿ ಸ್ಪೋರ್ಟಿಂಗ್ ಇವೆಂಟ್/ಚಾಂಪಿಯನ್ ಷಿಪ್ ಸರ್ಟಿಫಿಕೆಟ್ ಹೊಂದಿರಬೇಕು.

ವಯೋಮಿತಿ- ಕನಿಷ್ಠ 18ವರ್ಷ ಹಾಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ.

ಶುಲ್ಕ-SC/ST/PWD ವರ್ಗದ ಅಭ್ಯರ್ಥಿಗಳು ರೂ.50 ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳು ರೂ.200 ಪಾವತಿಸಬೇಕು.

ವೇತನ ಶ್ರೇಣಿ- ಆಫೀಸರ್ : 23700 ನಿಂದ  42020 ರೂ.ಗಳು, ಕ್ಲರ್ಕ್: 11765 ನಿಂದ 31540 ರೂ. ಮಾಸಿಕ ಇರಲಿದೆ.

ಅರ್ಹ ಅಭ್ಯರ್ಥಿಗಳು ಆಗಸ್ಟ್ 2020 ವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

Trending News