ಬಿಹಾರ : ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 27ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಿಹಾರದ ಮೊತಿಹಾರಿ ಪ್ರದೇಶದಲ್ಲಿ ನಡೆದಿದೆ.
ಬಿಹಾರದ ಮೊತಿಹಾರಿಯ ಬೆಲ್ವಾ ಗ್ರಾಮದ ಬಳಿ NH-28ರಲ್ಲಿ ಚಲಿಸುತ್ತಿದ್ದ ಬಸ್ ಅಪಘಾತಕ್ಕೊಳಗಾಗಿ ಮೊಗುಚಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿದ್ದು, ಕಾರ್ಯಾಚರಣೆ ಆರಂಭಿಸಿವೆ. ಈ ಬಸ್ ಮುಜಾಫರ್ ಪುರದಿಂದ ನವದೆಹಲಿಗೆ ಚಲಿಸುತ್ತಿತ್ತು ಎನ್ನಲಾಗಿದೆ.
#SpotVisuals: Bihar: 12 people dead due to fire in a bus after it overturned, in Motihari; Death toll expected to rise, more details awaited. pic.twitter.com/SNyMYUYmih
— ANI (@ANI) May 3, 2018
ಈ ಮಧ್ಯೆ, ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಧನ ನೀಡುವುದಾಗಿ ಬಿಹಾರ ಸರ್ಕಾರದ ವಿಪತ್ತು ನಿರ್ವಹಣಾ ಮತ್ತು ಪರಿಹಾರ ಇಲಾಖೆ ಸಚಿವರು ತಿಳಿಸಿದ್ದಾರೆ.
It is a really sad incident. There is a provision to give compensation of Rs 4 lakh to the next of kin of dead in such cases and it will be given: Bihar Disaster Management and Relief Minister on Motihari bus accident #Bihar pic.twitter.com/rS20bHej61
— ANI (@ANI) May 3, 2018
ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತಷ್ಟು ಏರುವ ನಿರೀಕ್ಷೆಯಿದೆ.