ದೆಹಲಿ ಫಲಿತಾಂಶವನ್ನು ಮೂರೇ ಪದಗಳಲ್ಲಿ ಬಣ್ಣಿಸಿದ ನಿತೀಶ್ ಕುಮಾರ್...!

ದೆಹಲಿ ಚುನಾವಣೆಯಲ್ಲಿ ಇಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೆಗಾ ವಿಜಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಜನತಾ ಮಲಿಕ್ ಹೈ ಎಂದು ವಾಖ್ಯಾನಿಸಿದ್ದಾರೆ.

Last Updated : Feb 11, 2020, 03:02 PM IST
 ದೆಹಲಿ ಫಲಿತಾಂಶವನ್ನು ಮೂರೇ ಪದಗಳಲ್ಲಿ ಬಣ್ಣಿಸಿದ ನಿತೀಶ್ ಕುಮಾರ್...!    title=

ನವದೆಹಲಿ: ದೆಹಲಿ ಚುನಾವಣೆಯಲ್ಲಿ ಇಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೆಗಾ ವಿಜಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಜನತಾ ಮಲಿಕ್ ಹೈ ಎಂದು ವಾಖ್ಯಾನಿಸಿದ್ದಾರೆ.

ನಿತೀಶ್ ಕುಮಾರ್ ಅವರ ಜೆಡಿಯು ದೆಹಲಿಯ 70 ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತು, ದೆಹಲಿಯಲ್ಲಿ ಅಮಿತ್ ಶಾ ಅವರೊಂದಿಗಿನ ರ್ಯಾಲಿಯಲ್ಲಿ, ನಿತೀಶ್ ಕುಮಾರ್ ಅವರು ಕೇಜ್ರಿವಾಲ್ ಅವರನ್ನು ತೀವ್ರವಾಗಿ ಗುರಿಯಾಗಿಸಿಕೊಂಡು "ದೆಹಲಿಯಲ್ಲಿ ಅವರು ಉಚಿತ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ, ಆದರೆ ಯಾವುದೇ ನೈಜ ಅಭಿವೃದ್ಧಿಯನ್ನು ಮಾಡಿಲ್ಲ' ಎಂದು ಟೀಕಿಸಿದ್ದರು.

ದೆಹಲಿ ಫಲಿತಾಂಶದ ಬಗ್ಗೆ ನಿತೀಶ್ ಕುಮಾರ್ ಹೆಚ್ಚಿನ ಉತ್ಸಾಹವಿರದಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಆಮ್ ಆದ್ಮಿ ಪಕ್ಷದ ಚುನಾವಣಾ ರಣತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕಳೆದ ತಿಂಗಳು ಜೆಡಿಯು ನಿಂದ ವಜಾಗೋಳಿಸಲಾಗಿತ್ತು, ದೆಹಲಿ ಚುನಾವಣೆಯಲ್ಲಿ ಬಿಹಾರವನ್ನು ಮೀರಿ ಬಿಜೆಪಿಯೊಂದಿಗಿನ ಜೆಡಿಯು ಮೈತ್ರಿಯನ್ನು ವಿಸ್ತರಿಸುವ ವಿರುದ್ಧ ಪ್ರಶಾಂತ್ ಕಿಶೋರ್ ನಿತೀಶ್ ಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದರು.

 

Trending News