Bihar Result: ತೇಜಸ್ವಿ ಸಿಎಂ ಕನಸನ್ನು ಭಗ್ನಗೊಳಿಸಿದ 'ಮೋದಿ ಮ್ಯಾಜಿಕ್', ಎನ್‌ಡಿಎ ಗೆಲುವಿಗೆ 5 ಕಾರಣಗಳಿವು

ಬಿಹಾರ ಚುನಾವಣಾ ಫಲಿತಾಂಶ 2020 ರಲ್ಲಿ 'ಮೋದಿ ಮ್ಯಾಜಿಕ್' ತೇಜಸ್ವಿ ಯಾದವ್ ಅವರ ಕನಸನ್ನು ಭಗ್ನಗೊಳಿಸಿದೆ. ಎನ್‌ಡಿಎ ವಿಜಯದ ಮನ್ನಣೆಯನ್ನು ಪಿಎಂ ನರೇಂದ್ರ ಮೋದಿ (Narendra Modi) ಅವರಿಗೆ ನೀಡಲು ಹಲವು ಕಾರಣಗಳಿವೆ.

Last Updated : Nov 11, 2020, 08:01 AM IST
  • 125 ಸ್ಥಾನಗಳೊಂದಿಗೆ ಎನ್‌ಡಿಎಗೆ ಬಹುಮತ
  • ಬಿಜೆಪಿ 74 ಮತ್ತು ಜೆಡಿಯು 43 ಸ್ಥಾನಗಳನ್ನು ಗೆದ್ದಿದೆ
  • ಮಹಾಘಟಬಂಧನ್ 110 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು
Bihar Result: ತೇಜಸ್ವಿ ಸಿಎಂ ಕನಸನ್ನು ಭಗ್ನಗೊಳಿಸಿದ 'ಮೋದಿ ಮ್ಯಾಜಿಕ್', ಎನ್‌ಡಿಎ ಗೆಲುವಿಗೆ 5 ಕಾರಣಗಳಿವು title=
File Image

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು  (Bihar election results 2020) ಹೊರಬಂದಿದ್ದು 125 ಸ್ಥಾನಗಳನ್ನು ಗೆದ್ದ ಎನ್‌ಡಿಎ ಸಂಪೂರ್ಣ ಬಹುಮತ ಪಡೆಯುವಲ್ಲಿ ಯಶಸ್ವಿಯಾದರೆ, ಮಹಾಘಟಬಂಧನ್ ಕೇವಲ 110 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಎನ್‌ಡಿಎ ವಿಜಯದ ಅತಿದೊಡ್ಡ ನಾಯಕ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು 'ಮೋದಿ ಮ್ಯಾಜಿಕ್' ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejaswi Yadav) ಮುಖ್ಯಮಂತ್ರಿಯಾಗುವ ಕನಸನ್ನು ಭಗ್ನಗೊಳಿಸಿದೆ. ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆದ್ದರೆ, ಜೆಡಿಯು 43 ಸ್ಥಾನಗಳನ್ನು ಮತ್ತು ಆರ್‌ಜೆಡಿ (RJD) 75 ಸ್ಥಾನಗಳನ್ನು ಗೆದ್ದಿದ್ದು ಅದರ ಮಿತ್ರಪಕ್ಷ ಕಾಂಗ್ರೆಸ್ 19 ಸ್ಥಾನಗಳಲ್ಲಷ್ಟೇ ಜಯಗಳಿಸಲು ಯಶಸ್ವಿಯಾಗಿದೆ.

ಮತ್ತೆ ಮೋದಿ ಮ್ಯಾಜಿಕ್ :
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡಿದೆ. ಬಿಹಾರದಲ್ಲಿ ಸತತ 15 ವರ್ಷಗಳಿಂದ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಯು ಕೇವಲ 43 ಸ್ಥಾನಗಳನ್ನು ಮಾತ್ರ ಗೆದ್ದಿರುವುದು ನಿತೀಶ್ ಕುಮಾರ್ (Nitish Kumar) ಸರ್ಕಾರದ ಮೇಲೆ ಜನತೆಯ ಅಸಮಾಧಾನಕ್ಕೆ ಹಿಡಿದ ಕನ್ನಡಿಯಂತಿದೆ. ಆದರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ (NDA)ಗೆ ಸ್ಪಷ್ಟ ಬಹುಮತ ಸಿಕ್ಕಿರುವುದು 'ಬ್ರಾಂಡ್ ಮೋದಿ' ಇಂದಾಗಿ ಎಂದರೆ ತಪ್ಪಾಗಲಾರದು.

Bihar Election Results 2020: ಮೋದಿ ಮ್ಯಾಜಿಕ್, ಎನ್‌ಡಿಎಗೆ ಸ್ಪಷ್ಟ ಬಹುಮತ

ಎನ್‌ಡಿಎ ವಿಜಯಕ್ಕೆ 5 ಕಾರಣಗಳು ಇಲ್ಲಿವೆ :-
1. ತೇಜಸ್ವಿ ಯಾದವ್ ಅವರ ರ್ಯಾಲಿಗಳನ್ನು ನೋಡಿ ಜನರು ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರ ಮಾಡುತ್ತಿದ್ದರು. ಬಿಹಾರದಲ್ಲಿ ನಡೆದ ನರೇಂದ್ರ ಮೋದಿ ಅವರ 12 ರ್ಯಾಲಿಗಳಿಂದ ಈ ಗೆಲುವು ಉತ್ತಮ ಆಡಳಿತದ ಅನುಭವವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
2. ನರೇಂದ್ರ ಮೋದಿ, ತೇಜಸ್ವಿಯನ್ನು ಜಂಗಲ್ ರಾಜ್ ಕಿರೀಟ ಹೊತ್ತ ರಾಜಕುಮಾರ ಎಂದು ಕರೆಯುವಾಗ, ಲಾಲು ಯಾದವ್ ಅವರ 15 ವರ್ಷಗಳಲ್ಲಿ ಜಂಗಲ್ ರಾಜ್ನ ಬಿಹಾರವನ್ನು ನೆನಪಿಸಿದರು ಮತ್ತು ಕುಟುಂಬವಾದದ ವಿರುದ್ಧ ಅಭಿವೃದ್ಧಿಯ ವಿಷಯಗಳ ಮೂಲಕ ಜನರ ಮನ ಮುಟ್ಟಿದರು.
3. ಪಿಎಂ ನರೇಂದ್ರ ಮೋದಿ (Narendra Modi) ಬಿಹಾರವನ್ನು ಅಭಿವೃದ್ಧಿಯ ವಿಷಯದೊಂದಿಗೆ ಸಂಪರ್ಕಿಸಿದ್ದಾರೆ. ಡಬಲ್ ಯುವರಾಜರಿಗೆ ಹೋಲಿಸಿದರೆ ಡಬಲ್ ಎಂಜಿನ್‌ನ ಘೋಷಣೆ ಸದ್ದು ಮಾಡಿತು ಮತ್ತು ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತದ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು. ಇದರೊಂದಿಗೆ ಅಹಂಕಾರದ ಸೋಲು ಮತ್ತು ಕಠಿಣ ಪರಿಶ್ರಮದ ಗೆಲುವಿನ ಘೋಷಣೆಯೊಂದಿಗೆ ಬಿಹಾರವನ್ನು ಸಂಯೋಜಿಸಲಾಗಿದೆ.
4. ನರೇಂದ್ರ ಮೋದಿ ಅವರು ಬಿಹಾರದಲ್ಲಿ ನಿತೀಶ್ ವಿರೋಧಿ ಸರ್ಕಾರದ ಅಲೆಯನ್ನು ತಟಸ್ಥಗೊಳಿಸಿದರು.
5. ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದರು ಮತ್ತು ಕೇಂದ್ರ ಯೋಜನೆಗಳ ಲಾಭದಿಂದಾಗಿ ಎನ್‌ಡಿಎ ಪರವಾಗಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾದರು.

Bihar election results 2020: ಚಿರಾಗ್ ಪಾಸ್ವಾನ್ ಹೆಣೆದ ರಣತಂತ್ರಕ್ಕೆ ಸಿಎಂ ನಿತೀಶ್ ಕುಮಾರ್ ಗಿರಗಿಟ್ಲೆ..!

ಬಿಹಾರದಲ್ಲಿ ಗೆಲುವು, ಸರ್ಕಾರದ ಕೆಲಸಕ್ಕೆ ಒತ್ತಿದ ಮುದ್ರೆ !
ಭಾರತದ ನಂಬಿಕೆ ರಾಜಕೀಯದ ಅತಿದೊಡ್ಡ ಬ್ರಾಂಡ್ ಅಂಬಾಸಿಡರ್ ನರೇಂದ್ರ ಮೋದಿ ಎಂದು ಬಿಹಾರ ಚುನಾವಣಾ ಫಲಿತಾಂಶಗಳು 2020 ಮತ್ತೆ ಸಾಬೀತುಪಡಿಸಿದೆ. ನಿತೀಶ್ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗಳನ್ನು ಹೋರಾಡಿದರೂ, ನರೇಂದ್ರ ಮೋದಿ ಇಡೀ ಚುನಾವಣೆಯಲ್ಲಿ ಮುನ್ನಡೆಸುತ್ತಿದ್ದರು. ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಕರೋನದ ಸಮಯದಲ್ಲಿ ಮೋದಿ ಸರ್ಕಾರದ ಕೆಲಸದ ಮೇಲೆ ಒಂದು ಮುದ್ರೆ ಹಾಕಿದಂತೆ ಎಂದು ಬಿಂಬಿಸಲಾಗುತ್ತಿದೆ. 
 

Trending News