ರಾಮ್ ಮಂದಿರ ನಿರ್ಮಾಣಕ್ಕೆ ೧ ಕೋಟಿ ರೂ ದೇಣಿಗೆ ನೀಡಿದ ಗೌತಮ್ ಗಂಭೀರ್

ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರೂ ದೇಣಿಗೆ ನೀಡಿದ್ದಾರೆ.ಎಲ್ಲ ಭಾರತೀಯರ ಕನಸಾಗಿರುವ ಅಯೋಧ್ಯೆಯ ಅದ್ಭುತವಾದ ದೇವಾಲಯಕ್ಕಾಗಿ ಅವರು ಮತ್ತು ಅವರ ಕುಟುಂಬವು ದೇಣಿಗೆ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ.

Last Updated : Jan 21, 2021, 04:41 PM IST
  • ದೆಹಲಿ ಬಿಜೆಪಿ ನಗರದಾದ್ಯಂತ ಕೂಪನ್‌ಗಳ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
  • ಸಾಧ್ಯವಾದಷ್ಟು ಮನೆಗಳಿಂದ ದೇಣಿಗೆ ಸಂಗ್ರಹಿಸಲು ₹ 10, 100 ಮತ್ತು 1,000 ಕೂಪನ್‌ಗಳನ್ನು ಬಳಸಲಾಗುವುದು" ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಕನ್ವೀನರ್ ಕುಲ್ಜೀತ್ ಚಹಲ್ ಹೇಳಿದರು.
ರಾಮ್ ಮಂದಿರ ನಿರ್ಮಾಣಕ್ಕೆ ೧ ಕೋಟಿ ರೂ ದೇಣಿಗೆ ನೀಡಿದ ಗೌತಮ್ ಗಂಭೀರ್ title=

ನವದೆಹಲಿ: ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರೂ ದೇಣಿಗೆ ನೀಡಿದ್ದಾರೆ.ಎಲ್ಲ ಭಾರತೀಯರ ಕನಸಾಗಿರುವ ಅಯೋಧ್ಯೆಯ ಅದ್ಭುತವಾದ ದೇವಾಲಯಕ್ಕಾಗಿ ಅವರು ಮತ್ತು ಅವರ ಕುಟುಂಬವು ದೇಣಿಗೆ ನೀಡಿದೆ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: Ram Mandira Trust - ಚಂದಾ ಸಂಗ್ರಹ ಅಭಿಯಾನ ಆರಂಭ, ರಾಷ್ಟ್ರಪತಿಗಳಿಗೆ ಟ್ರಸ್ಟ್ ಗೆ 5 ಲಕ್ಷ ರೂ. ಕೊಡುಗೆ

'ಅದ್ಭುತವಾದ ರಾಮ್ ದೇವಾಲಯ (Ram Mandirವು ಎಲ್ಲ ಭಾರತೀಯರ ಕನಸಾಗಿದೆ.ಅಂತಿಮವಾಗಿ ಈ ದೀರ್ಘಕಾಲದ ಸಮಸ್ಯೆಯನ್ನು ಬಗೆಹರಿಸಲಾಗಿದೆ.ಇದು ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡುತ್ತದೆ.ಈ ಪ್ರಯತ್ನದಲ್ಲಿ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆ ನೀಡಲಾಗಿದೆ"ಎಂದು ಗಂಭೀರ್ (Gautam Gambhir) ತಿಳಿಸಿದ್ದಾರೆ.

ದೆಹಲಿ ಬಿಜೆಪಿ ನಗರದಾದ್ಯಂತ ಕೂಪನ್‌ಗಳ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.ಸಾಧ್ಯವಾದಷ್ಟು ಮನೆಗಳಿಂದ ದೇಣಿಗೆ ಸಂಗ್ರಹಿಸಲು ₹ 10, 100 ಮತ್ತು 1,000 ಕೂಪನ್‌ಗಳನ್ನು ಬಳಸಲಾಗುವುದು" ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಕನ್ವೀನರ್ ಕುಲ್ಜೀತ್ ಚಹಲ್ ಹೇಳಿದರು.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಮುಂದಿನ ತಿಂಗಳು ಹಣ ಸಂಗ್ರಹ ಅಭಿಯಾನ

ಚೆಕ್ ಮೂಲಕ ₹ 1,000 ಕ್ಕಿಂತ ಹೆಚ್ಚಿನ ಕೊಡುಗೆ ನೀಡಲಾಗುವುದು.ತಮ್ಮ ಭಾವನೆಗಳನ್ನು ರಾಮ್ ದೇವಾಲಯದೊಂದಿಗೆ ಆಳವಾಗಿ ಸಂಬಂಧಿಸಿರುವ ಮತ್ತು ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಲು ಸಿದ್ಧರಿರುವ ಅನೇಕ ಜನರಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನಕಲಿ ಚೆಕ್‌ನಿಂದ ಹಣ ವಿತ್ ಡ್ರಾ: ಎಸ್‌ಬಿಐನಿಂದ 6 ಲಕ್ಷ ರೂ. ವಾಪಸ್ ಕೇಳಿದ ರಾಮ್ ಮಂದಿರ್ ಟ್ರಸ್ಟ್

ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಇತರರು ಸೇರಿದಂತೆ ವಿವಿಧ ಸಂಘಟನೆಗಳು ಜನರಿಂದ ಕೊಡುಗೆಗಳನ್ನು ಸಂಗ್ರಹಿಸುವ ಅಭಿಯಾನದಲ್ಲಿ ಭಾಗವಹಿಸಲಿವೆ. ಫೆಬ್ರವರಿ 1 ರಿಂದ ಕೂಪನ್‌ಗಳ ಮೂಲಕ ದೇಣಿಗೆ ಸಂಗ್ರಹಿಸಲು ಮನೆ-ಮನೆ-ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಶ್ರೀ ಚಹಲ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News