ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಯಿಸಿರುವ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ 6 ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾದ್ಯವಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಯಿಸಿರುವ ಗಡ್ಕರಿ, ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವುದು ಕಷ್ಟದ ಕೆಲಸ, ಆದ್ದರಿಂದಾಗಿ ಈಗಲೇ ಯಾವುದೇ ಭರವಸೆ ಕೊಡಲು ಸಾಧ್ಯವಿಲ್ಲ ಎಂದರು.
ನಾವು ಸುಪ್ರಿಂಕೊರ್ಟ್ ಆದೇಶವನ್ನು ಗೌರವಿಸುತ್ತೇವೆ ಅಲ್ಲದೇ ಸಮಿತಿ ರಚನೆಗೆ ಈಗಾಗಲೇ ಪ್ರಕ್ರಿಯೆಗಳು ಚಾಲನೆಯಾಗಿವೆ. ಆದರೆ ಸುಪ್ರಿಂಕೊರ್ಟ್ ನೀಡಿರುವ ಗಡುವಿನಲ್ಲಿ ಸಮಿತಿ ರಚಿಸುವುದು ಕಷ್ಟ ಎಂದು ತಿಳಿಸಿದರು.
ಇಂದು ಮುಂದುವರೆದು ಮಾತಾನಾಡಿದ ಗಡ್ಕರಿ "ನಾನು ರೈತನ ಮಗ ನನಗೆ ನೀರಿನ ಸಮಸ್ಯೆಯ ಬಗ್ಗೆ ಅರಿವಿದೆ. ಆದ್ದರಿಂದ ಈ ನೀರಿನ ಸಮಸ್ಯೆಯನ್ನು ಅತಿ ಜಾಗೃಕತೆಯಿಂದ ಬಗೆ ಹರಿಸಲಾಗುವುದು ಎಂದರು. ಕರ್ನಾಟಕ ಮತ್ತು ತಮಿಳುನಾಡು ಎರಡು ಕಣ್ಣುಗಳಿದ್ದಂತೆ, ಆದರೆ ,ಸುಪ್ರಿಂಕೋರ್ಟ್ ನೀಡಿರುವ ಕಾಲಾವಧಿಯೊಳಗೆ ಇದನ್ನು ಬಗೆಹರಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.