ದೆಹಲಿ ಮಸೂದೆಗೆ ರಾಷ್ಟ್ರಪತಿ ಅಂಕಿತ, ಕೇಜ್ರಿವಾಲ್ ಸರ್ಕಾರಕ್ಕೆ ತೀವ್ರ ಹಿನ್ನಡೆ

ನಗರದ ಚುನಾಯಿತ ಸರ್ಕಾರಕ್ಕಿಂತಲೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಆಧ್ಯತೆ ನೀಡುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಕೊವಿಂದ್ ಅವರು ಭಾನುವಾರದಂದು ಅಂಕಿತ ಹಾಕಿದ್ದಾರೆ.

Last Updated : Mar 29, 2021, 05:41 AM IST
  • ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಹೊರನಡೆದ ಮಧ್ಯೆ ಬುಧವಾರ ರಾಜ್ಯಸಭೆ ಮಸೂದೆಯನ್ನು ಅಂಗೀಕರಿಸಿತು.
  • ಆ ಮೂಲಕ ಮೊದಲಿನಿಂದಲೂ ಕೇಂದ್ರದ ಪಾರುಪತ್ಯವನ್ನು ಪ್ರಶ್ನಿಸುತ್ತಿದ್ದ ಕೇಜ್ರಿವಾಲ್ ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.
ದೆಹಲಿ ಮಸೂದೆಗೆ ರಾಷ್ಟ್ರಪತಿ ಅಂಕಿತ, ಕೇಜ್ರಿವಾಲ್ ಸರ್ಕಾರಕ್ಕೆ ತೀವ್ರ ಹಿನ್ನಡೆ   title=
file photo

ನವದೆಹಲಿ: ನಗರದ ಚುನಾಯಿತ ಸರ್ಕಾರಕ್ಕಿಂತಲೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಆಧ್ಯತೆ ನೀಡುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಕೊವಿಂದ್ ಅವರು ಭಾನುವಾರದಂದು ಅಂಕಿತ ಹಾಕಿದ್ದಾರೆ.

ಆ ಮೂಲಕ ಈಗ ಈ ಮಸೂದೆ ಕಾನೂನಾಗಿ ಮಾರ್ಪಟ್ಟಿದೆ.ಇದು ಯಾವಾಗ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈಗ ಘೋಷಿಸುತ್ತದೆ.ಕಾಂಗ್ರೆಸ್ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಹೊರನಡೆದ ಮಧ್ಯೆ ಬುಧವಾರ ರಾಜ್ಯಸಭೆ ಮಸೂದೆಯನ್ನು ಅಂಗೀಕರಿಸಿತು. ಆ ಮೂಲಕ ಮೊದಲಿನಿಂದಲೂ ಕೇಂದ್ರದ ಪಾರುಪತ್ಯವನ್ನು ಪ್ರಶ್ನಿಸುತ್ತಿದ್ದ ಕೇಜ್ರಿವಾಲ್ ಸರ್ಕಾರಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.

ಇದನ್ನೂ ಓದಿ : AIIMS ಭದ್ರತಾ ಸಿಬ್ಬಂಧಿ ಮೇಲೆ ಹಲ್ಲೆ: AAP ಶಾಸಕ ಸೋಮನಾಥ ಭಾರತಿಗೆ 2 ವರ್ಷ ಜೈಲು ಶಿಕ್ಷೆ

ದೆಹಲಿಯಲ್ಲಿ ಸರ್ಕಾರ ಎಂಬ ಪದವು ಲೆಫ್ಟಿನೆಂಟ್ ಗವರ್ನರ್ ಎಂದರ್ಥ ಮತ್ತು ದೆಹಲಿ ಸರ್ಕಾರವು ಯಾವುದೇ ಕಾರ್ಯಕಾರಿ ಕ್ರಮ ತೆಗೆದುಕೊಳ್ಳುವ ಮೊದಲು ಅವರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ದೆಹಲಿಯ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ ಸ್ಪಷ್ಟಪಡಿಸುತ್ತದೆ.

ಮೇಲ್ಮನೆಯಲ್ಲಿ ಎರಡು ದಿನಗಳ ಅವ್ಯವಸ್ಥೆಯ ನಂತರ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು,ರಾಜ್ಯಸಭೆಯಲ್ಲಿ ಈ ಶಾಸನವನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಸರ್ಕಾರವು ಮಸೂದೆಯನ್ನು ಪರಿಗಣನೆಗೆ ಮುಂದಾದಾಗ ಪ್ರತಿಪಕ್ಷಗಳು ವಿಭಜನೆ ಕೋರಿವೆ. ಮತದಾನದ ವೇಳೆ 83 ಸದಸ್ಯರು ಪರವಾಗಿದ್ದರೆ, 45 ಮಂದಿ ಮಸೂದೆಯನ್ನು ವಿರೋಧಿಸಿದರು. ಮಸೂದೆ ಅಂಗೀಕಾರಗೊಳ್ಳುವ ಮುನ್ನವೇ ಕಾಂಗ್ರೆಸ್ ಕೂಡ ಹೊರನಡೆದಿದೆ.

ದೆಹಲಿಯ ಎಎಪಿ ಸರ್ಕಾರ ಲೆಫ್ಟಿನೆಂಟ್-ಗವರ್ನರ್ ಮೂಲಕ ಪ್ರಾಕ್ಸಿ ಮೂಲಕ ದೆಹಲಿಯನ್ನು ಆಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಿಯಮಿತವಾಗಿ ಆರೋಪಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News