ಛತ್ತೀಸ್ಗಢ: ಪ್ರಧಾನಿ ಮೋದಿಯ 'ಮನ್ ಕಿ ಬಾತ್' ಕೇಳುವುದನ್ನು ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

ಫೆಬ್ರವರಿ 16 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ವಿದ್ಯಾರ್ಥಿಗಳನ್ನು ಕುರಿತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡುತ್ತಾರೆ. ಈ ಭಾಷಣದಲ್ಲಿ, ಪರೀಕ್ಷೆಗಳ ಒತ್ತಡವನ್ನು ತಗ್ಗಿಸುವುದು ಹೇಗೆ ಎಂಬುದನ್ನು ಪ್ರಧಾನಿ ತಿಳಿಸಲಿದ್ದಾರೆ.  

Updated: Feb 14, 2018 , 03:23 PM IST
ಛತ್ತೀಸ್ಗಢ: ಪ್ರಧಾನಿ ಮೋದಿಯ 'ಮನ್ ಕಿ ಬಾತ್' ಕೇಳುವುದನ್ನು ಕಡ್ಡಾಯಗೊಳಿಸಿದ ಶಿಕ್ಷಣ ಇಲಾಖೆ

ರಾಯ್ಪುರ್: ಛತ್ತೀಸ್ಗಢ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ 'ಮನ್ ಕಿ ಬಾತ್' ಕಾರ್ಯಕ್ರಮ ಕೇಳುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಾಸ್ತವವಾಗಿ ಫೆಬ್ರವರಿ 16 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ವಿದ್ಯಾರ್ಥಿಗಳನ್ನು ಕುರಿತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡುತ್ತಾರೆ. ಈ ಭಾಷಣದಲ್ಲಿ, ಪರೀಕ್ಷೆಗಳ ಒತ್ತಡವನ್ನು ತಗ್ಗಿಸುವುದು ಹೇಗೆ ಎಂಬುದನ್ನು ಪ್ರಧಾನಿ ತಿಳಿಸಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳು ಆಲಿಸುವುದು ಕಡ್ಡಾಯ ಎಂದು ರಾಜ್ಯ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಫೆಬ್ರವರಿ 16 ರಂದು 11 ಗಂಟೆಗೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಇಲಾಖೆಯು ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿಕ್ಷಕರು, ಶಾಲಾ ಆಡಳಿತ ಸಮಿತಿ, ಬಿ.ಇಡಿ ಮತ್ತು ಡಿ.ಇಡಿ ವಿದ್ಯಾರ್ಥಿಗಳೂ ಈ ಸಂದೇಶವನ್ನು ಅವರೊಂದಿಗೆ ಕೇಳಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಇಲಾಖೆ ಪತ್ರದಲ್ಲಿ ಈ ರೀತಿ ಬರೆದಿದೆ. "ಫೆಬ್ರವರಿ 16, 2018 ರಂದು ಬೆಳಿಗ್ಗೆ 11 ರಿಂದ 12 ರವರೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಮಾಧ್ಯಮಿಕ ಶಾಲೆಗಳು ಮತ್ತು ಉನ್ನತ ಮಾಧ್ಯಮಿಕ ಶಾಲೆಗಳ 6 ನೇ ತರಗತಿ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯಿಂದ ಮಕ್ಕಳಲ್ಲಿ ಪರೀಕ್ಷೆಗಳ ಒತ್ತಡವನ್ನು ಕಡಿಮೆ ಮಾಡುವುದು ಹೇಗೆ. ಈ ಸಂದರ್ಭದಲ್ಲಿ, ನೀವು ಅಂತರ್ಜಾಲ, ಟಿವಿ, ರೇಡಿಯೋ ಮೂಲಕ ನೇರ ಪ್ರಸಾರವನ್ನು ಕೇಳಬಹುದು. "ಈ ಪ್ರಸಾರವನ್ನು ಕೇಳಲು ಈ ಪತ್ರ ಬರೆಯಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಲು ಮರೆಯದಿರಿ."

By continuing to use the site, you agree to the use of cookies. You can find out more by clicking this link

Close