ಲೈಂಗಿಕ ಕಾರ್ಯಕರ್ತರ ಬಗ್ಗೆ ಕೀಳು ಡೈಲಾಗ್, ರಣಬೀರ್, ಅನುಷ್ಕಾ ಶರ್ಮಾ ವಿರುದ್ದ ದೂರು

    

Last Updated : Jun 27, 2018, 08:03 PM IST
ಲೈಂಗಿಕ ಕಾರ್ಯಕರ್ತರ ಬಗ್ಗೆ ಕೀಳು ಡೈಲಾಗ್, ರಣಬೀರ್, ಅನುಷ್ಕಾ ಶರ್ಮಾ ವಿರುದ್ದ ದೂರು  title=

ನವದೆಹಲಿ: ಇದೇ ಜೂನ್ 29 ರಂದು ಬಿಡುಗಡೆಯಾಗುತ್ತಿರುವ ಸಂಜಯ್ ದತ್ ಜೀವನ ಆಧಾರಿತ ಸಂಜು ಚಲನಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತರ ಬಗ್ಗೆ ಕೀಳು ಸಂಭಾಷಣೆ ಇರುವ ಕಾರಣದಿಂದಾಗಿ ರಣಬೀರ್ ಕಪೂರ್ ಮತ್ತು  ಅನುಷ್ಕಾ ಶರ್ಮಾ ವಿರುದ್ದ ದೂರು ದಾಖಲಿಸಲಾಗಿದೆ.

ಪಿಟಿಐ ವರದಿಯಂತೆ ರಾಷ್ಟ್ರೀಯ ಮಹಿಳಾ ಆಯೋಗ ಈ ಕುರಿತಾಗಿ ದೂರನ್ನು ಇಬ್ಬರು ನಟ ನಟಿಯರು ಹಾಗೂ ನಿರ್ದೇಶಕ ರಾಜಕುಮಾರ್ ಹಿರಾನಿ ವಿರುದ್ದ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಚಿತ್ರದ ಡೈಲಾಗ್ ಒಂದರಲ್ಲಿ ಸಂಜಯ ದತ್ ಪಾತ್ರ ನಿರ್ವಹಿಸಿರುವ ರಣಬೀರ್ ಕಪೂರ್  ತಾನು ಇದುವರೆಗೂ ಸುಮಾರು 300 ಮಹಿಳೆಯರ ಜೊತೆ ಮಲಗಿದ್ದೇನೆ ಎಂದು ಹೇಳುತ್ತಾನೆ ಇದರಲ್ಲಿ ತಾನು ವೈಶ್ಯೇರನ್ನು ಸೇರಿಸಿ ಹೇಳಲೇ ಎಂದು ಪ್ರಶ್ನಿಸುತ್ತಾನೆ.

ಈ ವಿಚಾರವನ್ನು ಇಎಮ್ಎಮ್ಸಿಗೆ ವಹಿಸಲಾಗಿದೆ. ಇದನ್ನು ಪೂರ್ಣ ಪರಿಶೀಲಿಸಿದ ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Trending News