ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತಿತ್ತು: ಯೋಗಿ ಆದಿತ್ಯನಾಥ್

Lok Sabha Election 2024: 3 ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ 20 ಭಯೋತ್ಪಾದಕರು ಸತ್ತಿರುವ ಸುದ್ದಿ ಬಂದಿತ್ತು. ಇದು ನವಭಾರತ, ಈಗ ಭಯೋತ್ಪಾದಕರು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ ಅಂತಾ ಯೋಗಿ ಖಡಕ್‌ ಸಂದೇಶ ನೀಡಿದ್ದಾರೆ.   

Written by - Puttaraj K Alur | Last Updated : Apr 8, 2024, 09:07 PM IST
  • ಭ್ರಷ್ಟ ಕಾಂಗ್ರೆಸ್ ಪಕ್ಷವು ದೇಶಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ
  • ಕಾಂಗ್ರೆಸ್‌ ಬಡವರನ್ನು ಹಸಿವಿಗೆ ನೂಕಿ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತದೆ
  • ಕಾಂಗ್ರೆಸ್ ಆಳ್ವಿಕೆಯಲ್ಲಿ ಬಡವರ ರಕ್ತ ಹೀರುವುದೇ ಕೆಲಸವಾಗಿತ್ತು
ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತಿತ್ತು: ಯೋಗಿ ಆದಿತ್ಯನಾಥ್   title=
ಕಾಂಗ್ರೆಸ್‌ ವಿರುದ್ಧ ಯೋಗಿ ಗುಡುಗು!

Lok Sabha Election 2024: ಭ್ರಷ್ಟ ಕಾಂಗ್ರೆಸ್ ಪಕ್ಷವು ದೇಶಕ್ಕೆ ಅತಿದೊಡ್ಡ ಸಮಸ್ಯೆ. ಕರ್ಫ್ಯೂ ಹೇರಿಕೆ ಮಾಡುವುದು ಅವರ DNAನಲ್ಲಿಯೇ ಇದೆ. ಕಾಂಗ್ರೆಸ್‌ ಬಡವರನ್ನು ಹಸಿವಿಗೆ ನೂಕಿ, ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜಸ್ಥಾನದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼರಾಮನಿಗೆ ದೇವಾಲಯ ಕಟ್ಟಿಸುವುದು ಬಿಡಿ, ಕಾಂಗ್ರೆಸ್ ಪ್ರಕಾರ ರಾಮ ಮತ್ತು ಕೃಷ್ಣ ಕಾಲ್ಪನಿಕ ಪಾತ್ರಗಳು. ಕಾಂಗ್ರೆಸ್ ಆಳ್ವಿಕೆಯಲ್ಲಿ ಬಡವರ ರಕ್ತ ಹೀರುವುದೇ ಕೆಲಸವಾಗಿತ್ತು ಎಂದು ಕುಟುಕಿದ್ದಾರೆ.  

ಇದನ್ನೂ ಓದಿ: "ಚುನಾವಣೆಗೂ ಮುನ್ನ ಎಷ್ಟು ಮಂದಿಯನ್ನು ಜೈಲಿಗೆ ಹಾಕುತ್ತಿರಿ"

ಪ್ರಧಾನಿ ಮೋದಿ ಆಡಳಿತದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ ಗಡಿಭಾಗವು ಸುರಕ್ಷಿತವಾಗಿದೆ. ಇದಕ್ಕೂ ಮೊದಲು ದೇಶದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿದ್ದವು. 3 ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ 20 ಭಯೋತ್ಪಾದಕರು ಸತ್ತಿರುವ ಸುದ್ದಿ ಬಂದಿತ್ತು. ಇದು ನವಭಾರತ, ಈಗ ಭಯೋತ್ಪಾದಕರು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ ಅಂತಾ ಯೋಗಿ ಖಡಕ್‌ ಸಂದೇಶ ನೀಡಿದ್ದಾರೆ.   

ಇನ್ನು ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ತರಬೇಕಿದೆ. ಈಗ ಯಾರಿಗೂ ಭಾರತದ ವಿರುದ್ಧ ಕೆಲಸ ಮಾಡಲು ಧೈರ್ಯವಿಲ್ಲ, ಏರ್‌ಸ್ಟ್ರೈಕ್ ಆಗುವ ಭಯವಿದೆ ಎಂದು ಯೋಗಿ ಪಾಕಿಸ್ತಾನಕ್ಕೆ ಟಾಂಗ್‌ ನೀಡಿದ್ದಾರೆ.   

ಇದನ್ನೂ ಓದಿ: Daily GK Quiz: ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News