Coronavirus ಕಾಲಾವಧಿಯಲ್ಲಿ ನೌಕರಿ ಕಳೆದುಕೊಂಡ ಯುವಕರ ಸಂಖ್ಯೆ ಎಷ್ಟು ಗೊತ್ತಾ?

ನಿರ್ಮಾಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  

Last Updated : Aug 18, 2020, 09:42 PM IST
Coronavirus ಕಾಲಾವಧಿಯಲ್ಲಿ ನೌಕರಿ ಕಳೆದುಕೊಂಡ ಯುವಕರ ಸಂಖ್ಯೆ ಎಷ್ಟು ಗೊತ್ತಾ? title=

ನವದೆಹಲಿ: ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರ್ಮಾಣ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ  ಕೆಲಸ ಮಾಡುವ ನೌಕರರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ. ಇದನ್ನು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿ ವರದಿಯಲ್ಲಿ ತಿಳಿಸಲಾಗಿದೆ. "ಏಷ್ಯಾ ಹಾಗೂ ಪೆಸಿಫಿಕ್ನಲ್ಲಿ ಕೋವಿಡ್ -19 ಯುವ ಉದ್ಯೋಗ ಬಿಕ್ಕಟ್ಟಿನ ನಿರ್ವಹಣೆ" ಎಂಬ ಶೀರ್ಷಿಕೆಯೊಂದಿಗೆ ಮಂಗಳವಾರ ಬಿಡುಗಡೆಯಾದ ಐಎಲ್ಒ-ಎಡಿಬಿ ವರದಿಯಲ್ಲಿ, ಭಾರತದಲ್ಲಿ 41 ಲಕ್ಷ ಯುವಕರಿಗೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಏಳು ಪ್ರಮುಖ ಕ್ಷೇತ್ರಗಳಲ್ಲಿ, ನಿರ್ಮಾಣ ಮತ್ತು ಕೃಷಿದಲ್ಲಿ  ಅತಿ ಹೆಚ್ಚು ಉದ್ಯೋಗ ಕಳೆದುಕೊಂಡಿದ್ದಾರೆ " ಎಂದು ಹೇಳಲಾಗಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಉದ್ಯೋಗಾವಕಾಶದಲ್ಲಿಯೂ ಕೂಡ ಹಿನ್ನಡೆ ಅನುಭವಿಸಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ, 15 ರಿಂದ 24 ವರ್ಷ ವಯಸ್ಸಿನ ಯುವಕರಿಗಿಂತ 25 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಅತಿ ಹೆಚ್ಚು ಪ್ರಭಾವಕ್ಕೆ ಉಳಗಾಗಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಮತ್ತು ಸಾಮಾಜಿಕ ವೆಚ್ಚಗಳ ಪ್ರಕಾರ, ಈ ರಿಸ್ಕ್ ದೀರ್ಘಕಾಲಿಕ ಹಾಗೂ ವ್ಯಾಪಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಐಎಲ್ಒ-ಎಡಿಬಿಯ 'ಯುವ ಮತ್ತು ಕೋವಿಡ್ -19 ಕುರಿತ ಜಾಗತಿಕ ಸಮೀಕ್ಷೆ'ಶೀರ್ಷಿಕೆಯ ಈ ವರದಿಯು ಪ್ರಾದೇಶಿಕ ಮೌಲ್ಯಮಾಪನವನ್ನು ಆಧರಿಸಿದೆ. ವಿವಿಧ ದೇಶಗಳಲ್ಲಿ ಲಭ್ಯವಿರುವ ನಿರುದ್ಯೋಗದ ಅಂದಾಜು ಅಂಕಿ ಅಂಶಗಳನ್ನು ಆಧರಿಸಿದೆ. ಭಾರತದಲ್ಲಿ ಮಹಾಮಾರಿಯ ಕಾಲದಲ್ಲಿ ಕಂಪನಿಗಳ  ಮಟ್ಟದ ತರಬೇತಿಯಲ್ಲಿ  ಮೂರನೇ ಎರಡರಷ್ಟು  ಪರಿಣಾಮ ಉಂಟಾಗಿದೆ ಎಂದು ವರದಿ ಹೇಳಿದೆ. ಇದೇ ವೇಳೆ  'ಇಂಟರ್ನ್‌ಶಿಪ್' ನಲ್ಲಿ ಮೂರನೇ  ನಾಲ್ಕರಷ್ಟು ಪರಿಣಾಮ ಉಂಟಾಗಿದೆ ಎನ್ನಲಾಗಿದೆ.

Trending News