Coronavirus in India: ಅಕ್ಟೋಬರ್ ನಲ್ಲಿ ಮತ್ತೆ ಕೊರೊನಾ ಅಬ್ಬರ, ಮಕ್ಕಳಿಗೆ ಸಂಬಂಧಿಸಿದಂತೆ ಸಿದ್ಧತೆಗಳು ಕಾಣುತ್ತಿಲ್ಲ: MHA ಪ್ಯಾನೆಲ್

Coronavirus in India: ಒಂದು ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಗುರಿಯಾದರೆ, ಅವರಿಗಾಗಿ ಚಿಕಿತ್ಸಾ ಸೇವಗಳಾದಂತಹ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್ ಹಾಗೂ ಅಂಬ್ಯುಲೆನ್ಸ್ ಗಳಂತಹ ಸೌಕರ್ಯಗಳು ಎಲ್ಲೂ ಕಾಣಿಸುತ್ತಿಲ್ಲ. ಈ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೂ ಕೂಡ ರವಾನಿಸಲಾಗಿದೆ.

Written by - Nitin Tabib | Last Updated : Aug 23, 2021, 01:00 PM IST
  • ಕೊರೊನಾ ಮೂರನೇ ಅಲೆಯ ಕುರಿತು ಸರ್ಕಾರಿ ಸಮಿತಿ ಹೇಳಿದ್ದೇನು?
  • ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ಗುರಿಯಾದರೆ ವೈದ್ಯಕೀಯ ಸೌಲಭ್ಯಗಳಿಲ್ಲ.
  • ಬರುವ ಅಕ್ಟೋಬರ್ ನಲ್ಲಿ ಕೊರೊನಾ ಮತ್ತೆ ಉತ್ತುಂಗಕ್ಕೇರಲಿದ್ದು, ಮೂರನೇ ಅಲೆಯ ಸಾಧ್ಯತೆ ಇದೆ.
Coronavirus in India: ಅಕ್ಟೋಬರ್ ನಲ್ಲಿ ಮತ್ತೆ ಕೊರೊನಾ ಅಬ್ಬರ, ಮಕ್ಕಳಿಗೆ ಸಂಬಂಧಿಸಿದಂತೆ ಸಿದ್ಧತೆಗಳು ಕಾಣುತ್ತಿಲ್ಲ: MHA ಪ್ಯಾನೆಲ್ title=
Coronavirus in India (File Photo)

ನವದೆಹಲಿ: Coronavirus in India - ಇತ್ತೀಚೆಗಷ್ಟೇ, ನೀತಿ ಆಯೋಗವು (NITI Aayog) ಕೊರೊನಾವೈರಸ್ (Coronavirus) ಪ್ರಕರಣಗಳ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ಇದೀಗ  ಗೃಹ ಸಚಿವಾಲಯದ (Home Ministry) ನಿರ್ದೇಶನದಡಿ  ರಚಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ (NIDM) ತಜ್ಞರ ಸಮಿತಿಯು ಅತ್ಯಂತ ಆಘಾತಕಾರಿ ವರದಿಯನ್ನು ನೀಡಿದೆ. ಸಮಿತಿಯ ಪ್ರಕಾರ, ಕರೋನಾ ವೈರಸ್ ಸೋಂಕು (Covid-19) ಅಕ್ಟೋಬರ್‌ನಲ್ಲಿ ದೇಶದಲ್ಲಿ ಉತ್ತುಂಗಕ್ಕೇರಲಿದೆ. ಈ ಅವಧಿಯಲ್ಲಿ ಕರೋನಾದ ಮೂರನೇ ಅಲೆ (Coronavirus Third Wave) ಕೂಡ ಸಾಧ್ಯ. ಮೂರನೇ ಅಲೆಯ ಸಮಯದಲ್ಲಿ ಮಕ್ಕಳು ಹೆಚ್ಚಿನ ಅಪಾಯದಲ್ಲಿರುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಒಂದು ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಗುರಿಯಾದರೆ, ಅವರಿಗಾಗಿ ಚಿಕಿತ್ಸಾ ಸೇವಗಳಾದಂತಹ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರ್ ಹಾಗೂ ಅಂಬ್ಯುಲೆನ್ಸ್ ಗಳಂತಹ ಸೌಕರ್ಯಗಳು ಎಲ್ಲೂ ಕಾಣಿಸುತ್ತಿಲ್ಲ. ಈ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೂ ಕೂಡ ರವಾನಿಸಲಾಗಿದೆ.

ಭವಿಷ್ಯದಲ್ಲಿ ಒಂದು ವೇಳೆ ಕೋವಿಡ್ 19 ಪ್ರಕರಣಗಳು ಹೆಚ್ಚಾದರೆ, ಪ್ರತಿ 100 ಪ್ರಕರಣಗಳಿಗೆ 23 ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ನೇತೃತ್ವ ವಹಿಸಿಕೊಂಡಿರುವ ಸಮೂಹ ಕಳೆದ ತಿಂಗಳು ಸರ್ಕಾರಕ್ಕೆ ಸಲಹೆ ನೀಡಿತ್ತು.

ಮತ್ತೊಂದು ಆಂಗ್ಲ ಮಾಧ್ಯಮದ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇದು ಸೆಪ್ಟೆಂಬರ್ 2020ರಲ್ಲಿ ಎರಡನೆಯ ಅಲೆಗೂ ಮುನ್ನ ಸಮೂಹ ನೀಡಿದ್ದ ಅಂದಾಜಿಗಿಂತ ಹೆಚ್ಚಾಗಿದೆ.  ಈ ಗಣನೆಯ ಪ್ರಕಾರ ಗಂಭೀರ ಅಥವಾ ಮಧ್ಯಮ ಗಂಭೀರ ಲಕ್ಷಣಗಳಿರುವ ಸುಮಾರು ಶೇ.20 ರಷ್ಟು ರೋಗಿಗಳಿಗೆ ಆಸ್ಪತ್ರೆಯಲ್ಲಿ ದಾಖಲಿಸುವ ಅಗತ್ಯ ಬೀಳಲಿದೆ ಎನ್ನಲಾಗಿತ್ತು.

ಇದನ್ನೂ ಓದಿ-Aadhaar Card New Rule: ಆಧಾರ್ ಪಡೆಯುವ ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ

ಕೋವಿಡ್ -19 ರ (Covid-19 Second Wave) ಎರಡನೇ ಅಲೆಯ  ನಂತರ ಹೆಚ್ಚಿನ ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳನ್ನು ಬೇರ್ಪಡಿಸುವ ಶಿಫಾರಸು ಈ ವರ್ಷ ಏಪ್ರಿಲ್-ಜೂನ್ ನಲ್ಲಿ ಗಮನಿಸಿದ ಮಾದರಿಯನ್ನು ಆಧರಿಸಿದೆ. ರಾಷ್ಟ್ರವ್ಯಾಪಿ ಸಕ್ರಿಯ ಕೇಸ್ ಲೋಡ್ 18 ಲಕ್ಷವಾಗಿದ್ದಾಗ, ಜೂನ್ 1 ರಂದು ಅದರ ಉತ್ತುಂಗದ ಸಮಯದಲ್ಲಿ, 10 ರಾಜ್ಯಗಳಲ್ಲಿ ಶೇ.21.74 ಪ್ರಕರಣಗಳು ಗರಿಷ್ಠ ಸಂಖ್ಯೆಯ ಪ್ರಕರಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಇವರಲ್ಲಿ ಶೇ. 2.2 ರಷ್ಟು ರೋಗಿಗಳನ್ನು ಐಸಿಯುಗೆ ಸೇರಿಸಲಾಗಿದೆ.

ಇದನ್ನೂ ಓದಿ-30 ನಿಮಿಷ ಹೆಚ್ಚು ಕೆಲಸ ಮಾಡಿದರೆ ಸಿಗಲಿದೆ Over Time, ಈ ದಿನದಿಂದ ಬದಲಾಗಲಿದೆ ನಿಯಮ

ಆದರೆ ಇದೀಗ ಇನ್ನೂ ಕೆಟ್ಟ ಪರಿಸ್ಥಿತಿಗೆ ನಾವು ಸಿದ್ಧರಾಗಿರಬೇಕು ಎಂದು ನೀತಿ ಆಯೋಗ ಹೇಳಿದೆ. ಆಯೋಗವು ಒಂದು ದಿನದಲ್ಲಿ 4 ರಿಂದ 5 ಲಕ್ಷ ಕೊರೊನಾ ಪ್ರಕರಣಗಳನ್ನು ಅಂದಾಜಿಸಿದೆ. ಇದರೊಂದಿಗೆ, ಮುಂದಿನ ತಿಂಗಳೊಳಗೆ ಎರಡು ಲಕ್ಷ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಬೇಕು ಎಂದು ಹೇಳಲಾಗಿದೆ. ಇವುಗಳಲ್ಲಿ, 1.2 ಲಕ್ಷ ಐಸಿಯು ಹಾಸಿಗೆಗಳು ವೆಂಟಿಲೇಟರ್‌ಗಳೊಂದಿಗೆ, 7 ಲಕ್ಷವು ಐಸಿಯು ಆಸ್ಪತ್ರೆ ಹಾಸಿಗೆಗಳಿಲ್ಲದೆ (ಅದರಲ್ಲಿ 5 ಲಕ್ಷ ಆಮ್ಲಜನಕ ಹಾಸಿಗೆಗಳು) ಮತ್ತು 10 ಲಕ್ಷ ಕೋವಿಡ್ ಪ್ರತ್ಯೇಕತೆಯ ಆರೈಕೆ ಹಾಸಿಗೆಗಳು ಇರಬೇಕು ಎಂದೂ ಕೂಡ ಹೇಳಲಾಗಿದೆ.

ಇದನ್ನೂ ಓದಿ-ಬದಲಾಗುತ್ತಿದೆ ಬ್ಯಾಂಕ್ ಚೆಕ್ ಕ್ಲಿಯರಿಂಗ್ ಸಿಸ್ಟಂ! ಯಾವಾಗ ಜಾರಿಗೆ ಬರಲಿದೆ ತಿಳಿಯಲು ಸುದ್ದಿ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News