CAA ಹಾಗೂ NRC ಸಮರ್ಥಿಸಿ ಮುದ್ರಿಸಲಾದ ಈ ಮದುವೆಯ ಕರೆಯೋಲೆ ನೀವು ನೋಡಿ

CAA ಹಾಗೂ NRCಯನ್ನು ಸಮರ್ಥಿಸಿ ಜೋಡಿಯೊಂದು ತಮ್ಮ ಮದುವೆಯ ಮಮತೆಯ ಕರೆಯೋಲೆಯೊಂದನ್ನು ಮುದ್ರಿಸಿದ್ದು, ಅವರು ಮುದ್ರಿಸಿರುವ ಈ ಕರೆಯೋಲೆಯ ಚಿತ್ರ ಇದೀಗ ಭಾರಿ ವೈರಲ್ ಆಗುತ್ತಿದೆ.

Last Updated : Jan 17, 2020, 08:44 PM IST
CAA ಹಾಗೂ NRC ಸಮರ್ಥಿಸಿ ಮುದ್ರಿಸಲಾದ ಈ ಮದುವೆಯ ಕರೆಯೋಲೆ ನೀವು ನೋಡಿ title=

ಸಂಭಲ್(ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಕಾಯ್ದೆ(CAA) ಹಾಗೂ ನಾಗರಿಕರ ರಾಷ್ಟ್ರೀಯ ರಜಿಸ್ಟರ್(NRC)ಗೆ ಬೆಂಬಲ ನೀಡುವ ಉದ್ದೇಶದಿಂದ ಉತ್ತರ ಪ್ರದೇಶದ ಸಂಭಲ್ ನಲ್ಲಿನ ಜೋಡಿಯೊಂದು ವಿನೂತನ ಹೆಜ್ಜೆ ಇಟ್ಟಿದೆ. ಮೋಹಿತ್ ಮಿಶ್ರಾ ಹಾಗೂ ಸೋನಂ ಪಾಠಕ್ ಫೆಬ್ರುವರಿ 3ರಂದು ಹಸೆಮಣೆ ಏರಲಿದ್ದಾರೆ. ಅವರ ಮದುವೆಗಾಗಿ ಮುದ್ರಿಸಲಾಗಿರುವ ಕರೆಯೋಲೆಗಳಲ್ಲಿ ದೊಡ್ಡ-ದೊಡ್ಡ ಅಕ್ಷರಗಳಲ್ಲಿ 'WE SUPPORT CAA AND NRC' (ಹಮ್ CAA ಔರ್ NRC ಕಾ ಸಮರ್ಥನ್ ಕರತೇ ಹೈ) ಎಂದು ಬರೆಯಲಾಗಿದೆ.

ಸದ್ಯ ಅವರು ಮುದ್ರಿಸಿರುವ ಈ ಮದುವೆಯ ಕರೆಯೋಲೆಗಳು ನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಮೋಹಿತ್, "ನಮ್ಮ ಮದುವೆಯ ಕರೆಯೋಲೆಗಳ ಮೂಲಕ ನಾವು ಈ ಕುರಿತು ಜಾಗ್ರತಿ ಮೂಡಿಸಬಹುದು ಎಂಬುದು ನಮ್ಮ ವೈಯಕ್ತಿಕ ಅನಿಸಿಕೆಯಾಗಿದ್ದು, ಸದ್ಯ ಇದು ಜನರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ನಾವು ಇಟ್ಟಿರುವ ಈ ಹೆಜ್ಜೆಯ ಕುರಿತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ" ಎಂದಿದ್ದಾರೆ.

CAA ಕಾನೂನು ಹಾಗೂ ಪ್ರಸ್ತಾವಿತ NRC ಕಾನೂನಿನ ಕುರಿತು ದೇಶಾದ್ಯಂತ ಸದ್ಯ ಪ್ರತಿಭಟನೆಗಳು ನಡೆಯುತ್ತಿವೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೂ ಈ ಕಾನೂನನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರ ಪ್ರದೇಶ ಪಾತ್ರವಾಗಿದೆ. ಈ ಪ್ರದೇಶದಲ್ಲಿ ಪ್ರತಿಭಟನೆಯ ವೇಳೆ ಸುಮಾರು 21 ಜನರು ಸಾವನ್ನಪ್ಪಿದ್ದಾರೆ.

Trending News