ದೆಹಲಿ ಹಿಂಸಾಚಾರ: ಜಂಟಿಯಾಗಿ ಮಸೀದಿ ಸ್ವಚ್ಛಗೊಳಿಸಿದ ಹಿಂದೂ-ಮುಸ್ಲಿಂ

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಮಸೀದಿಯಿಂದ ಬೂದಿ ಮತ್ತು ಭಗ್ನಾವಶೇಷಗಳನ್ನು ತೆಗೆದು ಸಹೋದರತ್ವದ ಸಂದೇಶವನ್ನು ನೀಡಿದರು.

Last Updated : Mar 3, 2020, 07:07 AM IST
ದೆಹಲಿ ಹಿಂಸಾಚಾರ: ಜಂಟಿಯಾಗಿ ಮಸೀದಿ ಸ್ವಚ್ಛಗೊಳಿಸಿದ ಹಿಂದೂ-ಮುಸ್ಲಿಂ  title=

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗೋಕುಲ್ಪುರಿ ಪ್ರದೇಶದ ಟೈರ್ ಮಾರುಕಟ್ಟೆಯ ಮಸೀದಿ ಕೂಡ ಹಿಂಸಾಚಾರದ ಹಿಡಿತಕ್ಕೆ ಒಳಗಾಗಿದೆ. ಈ ಮಸೀದಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಕೃತ್ಯ ಮೆರೆದಿದ್ದಾರೆ. ಆದರೆ, ಸೋಮವಾರ (ಮಾರ್ಚ್ 2) ಹಿಂದೂ ಮತ್ತು ಮುಸ್ಲಿಂ ಜನರು ಮಸೀದಿಯಿಂದ ಬೂದಿ ಮತ್ತು ಅವಶೇಷಗಳನ್ನು ತೆಗೆದು ಸಹೋದರತ್ವದ ಸಂದೇಶವನ್ನು ನೀಡಿದರು.

ದೆಹಲಿ: ಲೆಫ್ಟಿನೆಂಟ್ ಗವರ್ನರ್ ಶಿವ ವಿಹಾರದಲ್ಲಿ ಹಿಂಸಾಚಾರಕ್ಕೊಳಗಾದ ಸಂತ್ರಸ್ತರನ್ನು ಭೇಟಿಯಾದರು
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸೋಮವಾರ ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಮತ್ತು ಅರೆಸೈನಿಕ ಪಡೆಗಳ ಹಿರಿಯ ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್ ಜೊತೆ ಬಂದರು. ಲೆಫ್ಟಿನೆಂಟ್ ಗವರ್ನರ್ ಇಲ್ಲಿನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾದರು. ಅವರು ಸಂತ್ರಸ್ತರಿಂದ ಪರಿಹಾರ ಮತ್ತು ಪಾರುಗಾಣಿಕಾ ಕಾರ್ಯಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ತೆಗೆದುಕೊಂಡರು. ಎಲ್‌ಜಿ ಚಾಂಡ್‌ಬಾಗ್ ಮತ್ತು ಶಿವ ವಿಹಾರದಲ್ಲಿ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾದರು.

ಲೆಫ್ಟಿನೆಂಟ್ ಗವರ್ನರ್ ಚಂದ್‌ಬಾಗ್, ಕರವಾಲ್ ನಗರ, ಶಿವ ವಿಹಾರ ಮತ್ತು ಬ್ರಿಜ್‌ಪುರಿಯಲ್ಲಿ ಸಂತ್ರಸ್ತ ಜನರನ್ನು ಭೇಟಿಯಾದರು. ಇಲ್ಲಿ ವಿಶೇಷವೆಂದರೆ ಲೆಫ್ಟಿನೆಂಟ್ ಗವರ್ನರ್ ತಮ್ಮ ಕಾರ್ಯಕ್ರಮದಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿದರು. ಹಿಂಸಾಚಾರದಿಂದ ಉಂಟಾದ ಹಾನಿಯನ್ನು ಸಂಗ್ರಹಿಸಲು ಅವರು ಪ್ರತಿ ಸ್ಥಳಕ್ಕೂ ಭೇಟಿ ನೀಡಿ ಹಿಂಸಾಚಾರಕ್ಕೆ ಒಳಗಾದವರೊಂದಿಗೆ ಸಂವಹನ ನಡೆಸಿದರು. ಜೊತೆಗೆ ಶಾಂತಿ ಪುನಃಸ್ಥಾಪನೆಗಾಗಿ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಸ್ಥಳದಲ್ಲೇ ಪೊಲೀಸರು ಮತ್ತು ಇತರ ಆಡಳಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

"ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ನಿಯೋಜನೆಯನ್ನು ಕಾಪಾಡಿಕೊಳ್ಳಲು ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೆ, ವದಂತಿಯನ್ನುಂಟುಮಾಡುವ ಅಂಶದ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ" ಎಂದು ಹೇಳಿದರು. "ವಿವಿಧ ಸಮುದಾಯಗಳ ನಡುವೆ ಪರಸ್ಪರ ಸಹಕಾರವನ್ನು ಕಾಪಾಡಿಕೊಳ್ಳಲು ದೆಹಲಿ ಪೊಲೀಸರಿಗೆ ಅಮನ್ ಸಮಿತಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ" ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದರು.

ಇಲ್ಲಿ ಹಿಂಸಾಚಾರದ ನಡೆದ ಸಮಯದಲ್ಲಿ ಹಾನಿಗೊಳಗಾದ ಮನೆಗಳು,  ಅಂಗಡಿ ಮುಂಗಟ್ಟುಗಳು, ವಾಹನಗಳು ಇತ್ಯಾದಿಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮಾಹಿತಿ ತೆಗೆದುಕೊಂಡರು. ಇದರ ನಂತರ, ದೆಹಲಿ ಪೊಲೀಸ್, ಪೂರ್ವ ದೆಹಲಿ ಮಹಾನಗರ ಪಾಲಿಕೆ ಮತ್ತು ಇತರ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುವಂತೆ ಅವರು ನಿರ್ದೇಶನ ನೀಡಿದರು, ಇದರಿಂದ ನಾಗರಿಕ ಸೌಲಭ್ಯಗಳು ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಬಹುದು ಎಂದವರು ತಿಳಿಸಿದರು.

ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ಈ ಭೇಟಿಯ ಉದ್ದೇಶವು ಸುರಕ್ಷತೆಯ ಪ್ರಜ್ಞೆಯನ್ನು ಹುಟ್ಟುಹಾಕುವುದು ಮತ್ತು ಸ್ಥಳೀಯ ನಿವಾಸಿಗಳಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು. ರಾಜ್ಯಪಾಲ ಲೆಫ್ಟಿನೆಂಟ್ ಗವರ್ನರ್, "ಸಮುದಾಯಗಳಲ್ಲಿ ದ್ವೇಷವನ್ನು ಉಂಟುಮಾಡುವ ಯಾವುದೇ ವದಂತಿಗಳು, ಸುದ್ದಿಗಳು, ಚಿತ್ರ ಅಥವಾ ವಿಡಿಯೋಗಳ ಬಗ್ಗೆ ಎಲ್ಲ ಜನರು ಗಮನ ಹರಿಸಬಾರದು ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ" ಎಂದರು.

ಅಂತಹ ಯಾವುದೇ ಸಂದೇಶ, ಫೋಟೋ ಅಥವಾ ವಿಡಿಯೋ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡುವಂತೆ ಬೈಜಾಲ್ ಸೂಚಿಸಿದ್ದಾರೆ. ವಿಶೇಷವೆಂದರೆ, ಧಾರ್ಮಿಕ ದ್ವೇಷವನ್ನು ಹರಡುವ ವದಂತಿಯನ್ನುಂಟುಮಾಡುವ ಸಂದೇಶಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ತಡೆಯಲು ದೆಹಲಿ ಸರ್ಕಾರವು ಶಾಂತಿ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಕಾನೂನು ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಾಯದಿಂದ ಇಂತಹ ದ್ವೇಷ ಸಂದೇಶಗಳನ್ನು ಕಂಡುಹಿಡಿದು ಪೊಲೀಸರಿಗೆ ದೂರು ನೀಡಿದರೆ  ಆ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Trending News