'ದೆಹಲಿ ಜಾಮಾ ಮಸೀದಿಯನ್ನು ಧ್ವಂಸಗೊಳಿಸಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

 2019 ರ ಲೋಕಸಭೆ ಚುನಾವಣೆಗೆ ಮೊದಲು ಸೋಮನಾಥ ದೇವಸ್ಥಾನದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರಕಾರವು ಕಾನೂನನ್ನು ತರಬೇಕೆಂದು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ಆಗ್ರಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಅವರು ದೆಹಲಿಯ ಜಾಮಾ ಮಸಿದೀಯನ್ನು ಧ್ವಂಸಗೊಳಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Last Updated : Nov 23, 2018, 07:29 PM IST
'ದೆಹಲಿ ಜಾಮಾ ಮಸೀದಿಯನ್ನು ಧ್ವಂಸಗೊಳಿಸಿ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  title=

ನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಮೊದಲು ಸೋಮನಾಥ ದೇವಸ್ಥಾನದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರಕಾರವು ಕಾನೂನನ್ನು ತರಬೇಕೆಂದು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್  ಆಗ್ರಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಅವರು ದೆಹಲಿಯ ಜಾಮಾ ಮಸಿದೀಯನ್ನು ಧ್ವಂಸಗೊಳಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್  "ನಾನು ಮೊದಲ ಬಾರಿಗೆ ರಾಜಕೀಯಕ್ಕೆ ಬಂದಾಗ ಮಥುರಾದಲ್ಲಿ ನಾನು ನೀಡಿದ ಮೊದಲ ಹೇಳಿಕೆಯೆಂದರೆ ಅಯೋಧ್ಯೆ,ಮಥುರಾ ಮತ್ತು ಕಾಶಿಯನ್ನು ಒಂದೆಡೆ ಇಡಿ ದೆಹಲಿಯಲ್ಲಿರುವ ಜಾಮಾ ಮಸಿದೀಯನ್ನು ನಾಶಪಡಿಸಿ. ಅಲ್ಲಿ ಒಂದುವೇಳೆ ವಿಗ್ರಹಗಳು ದೊರೆಯದಿದ್ದರೆ ನನ್ನನ್ನು ಗಲ್ಲಿಗೇರಿಸಿ "ಎಂದು ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದಾರೆ.

ಮೊಘಲರು ಹಿಂದು ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ದೇವಾಲಯಗಳನ್ನು ಕೆಡವಿ 3000ಕ್ಕೂ ಅಧಿಕ ಮಸೀದಿಗಳನ್ನು ನಿರ್ಮಿಸಿದ್ದಾರೆ ಎಂದು ಸಾಕ್ಷಿ ಮಹಾರಾಜ್ ಅವರು ತಿಳಿಸಿದ್ದಾರೆ.

Trending News