ಮೋದಿ ಸರ್ಕಾರದ ಈ ಯೋಜನೆಯಿಂದ 50 ಸಾವಿರ ರೂ. ಗಳಿಸಲು ಅವಕಾಶ, ನಾಳೆಯೇ ಕೊನೆ ದಿನ

ಮೋದಿ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ, ಗುಜರಾತ್ ಸರಕಾರವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ (DREAM) ಸಿಟಿ ಲಿಮಿಟೆಡ್ನ ಸೂರತ್ನ ಡ್ರೀಮ್ ಸಿಟಿ ಅನ್ನು ಅಭಿವೃದ್ಧಿಪಡಿಸುತ್ತಿದೆ.  

Last Updated : Sep 24, 2018, 02:56 PM IST
ಮೋದಿ ಸರ್ಕಾರದ ಈ ಯೋಜನೆಯಿಂದ 50 ಸಾವಿರ ರೂ. ಗಳಿಸಲು ಅವಕಾಶ, ನಾಳೆಯೇ ಕೊನೆ ದಿನ title=

ನವದೆಹಲಿ: ಮೋದಿ ಸರ್ಕಾರ ನಿರಂತರವಾಗಿ ಉದ್ಯೋಗ ಅವಕಾಶಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಸರ್ಕಾರ ನಿರಂತರವಾಗಿ ಸಾಮಾನ್ಯ ವ್ಯಕ್ತಿಗೆ ಹಣವನ್ನು ಗಳಿಸಲು ಹೊಸ ಯೋಜನೆಗಳನ್ನು ಒದಗಿಸುತ್ತದೆ. ಇದರೊಂದಿಗೆ, ಯುವಕರಿಗೆ ಹೊಸ ರೀತಿಯ ಸ್ಪರ್ಧೆಗಳನ್ನು ಸರ್ಕಾರ ತರುತ್ತಿದೆ. ಈಗ ಇನ್ನೊಂದು ಹೊಸ ಸ್ಪರ್ಧೆಯ ಮೂಲಕ 50 ಸಾವಿರ ರೂಪಾಯಿಗಳನ್ನು ಗಳಿಸಲು ಯುವಜನರಿಗೆ ಮೋದಿ ಸರ್ಕಾರ ಅವಕಾಶ ನೀಡುತ್ತಿದೆ. ವಿಶೇಷ ವಿಷಯವೆಂದರೆ, ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ ಅಥವಾ ಇದು ಕಷ್ಟಕರವಾದ ಕೆಲಸವೇನೂ ಅಲ್ಲ. ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿ ಕುಳಿತುಕೊಂಡು ನೀವು 50,000 ರೂ. ಸಂಪಾದಿಸಬಹುದಾಗಿದೆ.

ಡ್ರೀಮ್ ಸಿಟಿ ಪ್ರಾಜೆಕ್ಟ್ಗೆ ಸೇರಿ:
ಮೋದಿ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ, ಗುಜರಾತ್ ಸರ್ಕಾರವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ (DREAM) ಸಿಟಿ ಲಿಮಿಟೆಡ್ನ ಸೂರತ್ನ ಡ್ರೀಮ್ ಸಿಟಿ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಡ್ರೀಮ್ ಸಿಟಿನಲ್ಲಿ ಗ್ಲೋಬಲ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಅನ್ನು ತಯಾರಿಸಲಾಗುತ್ತದೆ. ಸೂರತ್ನ ಈ ಡ್ರೀಮ್ ಸಿಟಿ ಅನ್ನು ಸ್ಮಾರ್ಟ್ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ಡ್ರೀಮ್ ಸಿಟಿನಲ್ಲಿ ಡೈಮಂಡ್ ಸೆಕ್ಟರ್ಗಾಗಿ ಇಂಟರ್ನ್ಯಾಷನಲ್ ಡೈಮಂಡ್ ಉತ್ಪಾದನೆ ಮತ್ತು ಟ್ರೇಡಿಂಗ್ ಕೇಂದ್ರವನ್ನು ತಯಾರಿಸಲಾಗುತ್ತದೆ. ಯೋಜನೆಯಲ್ಲಿ ಸೇರುವ ಮೂಲಕ ಹಣ ಸಂಪಾದಿಸಲು ಯುವಜನರಿಗೆ ಅವಕಾಶವಿದೆ.

ಅದಕ್ಕಾಗಿ ಏನು ಮಾಡಬೇಕು?
ವಿನ್ಯಾಸ ಕ್ಷೇತ್ರದಲ್ಲಿರುವ ಯುವಜನರು ಅಥವಾ ಅದರಲ್ಲಿ ಪರಿಣಿತರಾದವರು ಈ ಯೋಜನೆಯಲ್ಲಿ ಸೇರಬಹುದು. ವಾಸ್ತವವಾಗಿ, ಮೋದಿ ಸರ್ಕಾರ ಈ ಯೋಜನೆಗೆ ಒಂದು ಹೊಸ ಲೋಗೊವನ್ನು ಸಿದ್ಧಪಡಿಸುತ್ತಿದೆ. ಸಾಮಾನ್ಯ ವ್ಯಕ್ತಿಗಳ ಭಾಗವಹಿಸುವಿಕೆಯೊಂದಿಗೆ ಈ ಲಾಂಛನವು ಪೂರ್ಣಗೊಳ್ಳುತ್ತದೆ ಎಂಬುದು ವಿಶೇಷ ವಿಷಯ. ನಿಮ್ಮ ಕಲೆಯನ್ನು ತೋರಿಸಿ, ನೀವು ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ:
 ಈ ಯೋಜನೆಯ ಲೋಗೋದಲ್ಲಿ ಕೆಲಸ ಮಾಡಲು ಎಲ್ಲಿಯೂ ಹೋಗಬೇಕಾಗಿಲ್ಲ. ನೀವು ಅದನ್ನು ಮನೆಯಲ್ಲಿ ತಯಾರು ಮಾಡಬಹುದು. ನೀವು ಅದನ್ನು ಆನ್ಲೈನ್ನಲ್ಲಿ ಮಾತ್ರ ಸಲ್ಲಿಸಬಹುದು. ಆದಾಗ್ಯೂ, ಇದನ್ನು ಸಿದ್ಧಪಡಿಸುವ ಮೊದಲು, ಅದಕ್ಕೆ ನಿಯಮಗಳು ಮತ್ತು ಷರತ್ತುಗಳಿದ್ದು ಅವುಗಳ ಬಗ್ಗೆ ತಿಳಿಯಿರಿ. ಏಕೆಂದರೆ, ಸರ್ಕಾರ ಅದರ ಆಕಾರ ಮತ್ತು ಇತರ ವಿಷಯಗಳ ಬಗ್ಗೆ ಕೆಲವು ನಿಯಮಗಳನ್ನು ಸಿದ್ಧಪಡಿಸಿದೆ.

ಅತ್ಯುತ್ತಮ ಲೋಗೋವನ್ನು ಪುರಸ್ಕರಿಸಲಾಗುತ್ತದೆ:
ಯೋಜನೆಯಲ್ಲಿ ಲೋಗೋ ತಯಾರಿಸಲಿರುವ ಜನರಲ್ಲಿ ಒಬ್ಬರು 50,000 ರೂ. ಬಹುಮಾನವನ್ನು ಪಡೆಯುತ್ತಾರೆ. ಇದಲ್ಲದೆ, ತೃಪ್ತಿಕರವಾದ ಅಥವಾ ಶಾರ್ಟ್ ಲಿಸ್ಟ್ ನಲ್ಲಿ ಸೆಲೆಕ್ಟ್ ಆಗುವವರಿಗೆ ಸರ್ಕಾರ 10 ಸಾವಿರ ರೂಪಾಯಿಗಳನ್ನು ನೀಡುತ್ತದೆ.

25 ಸೆಪ್ಟೆಂಬರ್ ಕೊನೆಯ ದಿನಾಂಕ:
ನೀವು ಅದರಲ್ಲಿ ಪಾಲ್ಗೊಳ್ಳಲು ಬಯಸಿದರೆ, ನಿಮಗೆ ಕೇವಲ ಇನ್ನು ಒಂದೇ ದಿನ ಮಾತ್ರ ಉಳಿದಿದೆ. ಸೆ.25 ವರೆಗೆ ಎಲ್ಲಾ ಅರ್ಜಿಗಳನ್ನು ಸಲ್ಲಿಸಬೇಕು. ಆದಾಗ್ಯೂ, ಲೋಗೋ ವಿನ್ಯಾಸಗೊಳಿಸಲು 24 ಗಂಟೆಗಳಿವೆ.

Trending News