ಪ್ರಾಣಿವಧೆ ಬೇಡ; ಪರಿಸರ ಸ್ನೇಹಿ ಕೇಕ್ ಕತ್ತರಿಸಿ ಬಕ್ರೀದ್ ಆಚರಿಸಿ

ಪೂರ್ವಜರ ತ್ಯಾಗ, ಬಲಿದಾನ, ಶ್ರದ್ಧಾ-ಭಕ್ತಿಯ ಸಂಕೇತವಾದ ಬಕ್ರೀದ್ ದಿನದಂದು ಆಡುಗಳನ್ನು ಕಡಿಯುವ ಬದಲಾಗಿ ಆಡಿನ(Goat) ಚಿತ್ರವಿರುವ ಕೇಕ್ ಕತ್ತರಿಸಿ ಪರಿಸರ ಸ್ನೇಹಿ ಆಚರಣೆ ಮಾಡಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ. 

Last Updated : Aug 21, 2018, 08:29 PM IST
ಪ್ರಾಣಿವಧೆ ಬೇಡ; ಪರಿಸರ ಸ್ನೇಹಿ ಕೇಕ್ ಕತ್ತರಿಸಿ ಬಕ್ರೀದ್ ಆಚರಿಸಿ title=
Pic : ANI

ಲಖನೌ: ಇಸ್ಲಾಂ ಧರ್ಮೀಯರ ತ್ಯಾಗ-ಬಲಿದಾನದ ಪ್ರತೀಕವಾದ 'ಬಕ್ರೀದ್' ಹಬ್ಬವನ್ನು ಆಗಸ್ಟ್ 22ರಂದು ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಆದರೆ, ಈ ಬಾರಿ ಹಲವು ಮುಸಲ್ಮಾನ ಬಾಂಧವರು ಬಕ್ರೀದ್ ಅನ್ನು ವಿನೂತನ, ಪರಿಸರ ಸ್ನೇಹಿ ರೂಪದಲ್ಲಿ ಆಚರಿಸಲು ಕರೆ ನೀಡಿದ್ದಾರೆ.

ಪೂರ್ವಜರ ತ್ಯಾಗ, ಬಲಿದಾನ, ಶ್ರದ್ಧಾ-ಭಕ್ತಿಯ ಸಂಕೇತವಾದ ಬಕ್ರೀದ್ ದಿನದಂದು ಆಡುಗಳನ್ನು ಕಡಿದು ಹಬ್ಬ ಆಚರಣೆ ಮಾಡುವ ಬದಲಾಗಿ ಆಡಿನ(Goat) ಚಿತ್ರವಿರುವ ಕೇಕ್ ಕತ್ತರಿಸಿ ಪರಿಸರ ಸ್ನೇಹಿ ಆಚರಣೆ ಮಾಡಲು ಲಖನೌನ ಕೆಲ ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ. 

ಈ ಬಗ್ಗೆ ಬೇಕರಿಯಲ್ಲಿ ಕೇಕ್ ಕೊಳ್ಳಲು ಬಂದ ಮುಸ್ಮಿಂ ಗ್ರಾಹಕರೊಬ್ಬರು, "ಬಕ್ರೀದ್ ದಿನದಂದು ಪ್ರಾಣಿಗಳನ್ನು ಬಲಿ ಕೊಡುವುದು ಸರಿಯಲ್ಲ. ಅದು ನಮ್ಮ ಪೂರ್ವಜರು ಮಾಡಿದ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನ. ಹಾಗಾಗಿ ಪ್ರಾಣಿವಧೆ ಮಾಡುವ ಬದಲು, ಪರಿಸರ ಸ್ನೇಹಿ ಕೇಕ್ ಕತ್ತರಿಸಿ ಹಬ್ಬ ಆಚರಣೆ ಮಾಡಲು ಎಲ್ಲರನ್ನೂ ವಿನಂತಿಸುತ್ತೇನೆ" ಎಂದಿದ್ದಾರೆ. ಇದೀಗ ಈ ಆಡಿನ ಚಿತ್ರವಿರುವ ಕೇಕ್ ಫೋಟೋ ಎಲ್ಲೆಡೆ ವೈರಲ್ ಆಗಿದೆ. 

Trending News