ವಿದ್ಯಾಸಾಗರರ ಪ್ರತಿಮೆ ಮರುಸ್ಥಾಪನೆಗೆ ಬಿಜೆಪಿ ಹಣದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತ್ತಾದಲ್ಲಿ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ ನಿರ್ಮಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ನಾವು ಅವರ (ಬಿಜೆಪಿ) ಹಣವನ್ನು ಏಕೆ ತೆಗೆದುಕೊಳ್ಳಬೇಕು, ಬಂಗಾಳವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Last Updated : May 16, 2019, 04:28 PM IST
ವಿದ್ಯಾಸಾಗರರ ಪ್ರತಿಮೆ ಮರುಸ್ಥಾಪನೆಗೆ ಬಿಜೆಪಿ ಹಣದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ title=

ಮಂದಿರ್ ಬಜಾರ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದ ವೇಳೆ ನಡೆದ ಹಿಂಸಾಚಾರದಲ್ಲಿ ಭಗ್ನಗೊಂಡ ಚಿಂತಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ಮರುನಿರ್ಮಾಣಕ್ಕೆ ಪಶ್ಚಿಮ ಬಂಗಾಳದ ಬಳಿ ಸಾಕಷ್ಟು ಹಣವಿದೆ, ಬಿಜೆಪಿಯ ಹಣದ ಅವಶ್ಯಕತೆ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಉತ್ತರಪ್ರದೇಶದ ಮವುನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಕೊಲ್ಕತ್ತಾದಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಿಂಸಾಚಾರದಲ್ಲಿ ಭಗ್ನಗೊಂಡ ಸುಧಾರಣಾವಾದಿ ಚಿಂತಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸುವುದಾಗಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಅವರು, "ಕೋಲ್ಕತ್ತಾದಲ್ಲಿ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ ನಿರ್ಮಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ನಾವು ಅವರ (ಬಿಜೆಪಿ) ಹಣವನ್ನು ಏಕೆ ತೆಗೆದುಕೊಳ್ಳಬೇಕು, ಬಂಗಾಳವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ" ಎಂದು ಹೇಳುವ ಮೂಲಕ ಖಡಕ್ ಆಗಿ ನಿರಾಕರಿಸಿದ್ದಾರೆ. 

"ಕಳೆದ ಐದು ವರ್ಷಗಳಿಂದ ರಾಮಮಂದಿರವನ್ನು ನಿರ್ಮಿಸಲಾಗದ ನೀವು(ಪ್ರಧಾನಿ ಮೋದಿ) ವಿದ್ಯಾಸಾಗರರ ಪ್ರತಿಮೆ ನಿರ್ಮಿಸಲು ಬಯಸುವಿರೇ? ಬಂಗಾಳದ ಜನತೆ ನಿಮ್ಮ ಬಳಿ ಎಂದಿಗೂ ಭಿಕ್ಷೆ ಬೇಡುವುದಿಲ್ಲ" ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ, ಮೂರ್ತಿಗಳನ್ನು ಭಗ್ನಗೊಳಿಸುವುದು ಬಿಜೆಪಿಗೆ ಹವ್ಯಾಸವಾಗಿದೆ. ಈ ಹಿಂದೆ ತ್ರಿಪುರಾದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಬಿಜೆಪಿಯು ಪಶ್ಚಿಮ ಬಂಗಾಳದ 200 ವರ್ಷಗಳಷ್ಟು ಪುರಾತನವಾದ ಪ್ರತಿಮೆಯನ್ನು ನಾಶಪಡಿಸಿದೆ. ಆ ಪಕ್ಷವನ್ನು ಬೆಂಬಲಿಸುವವರನ್ನು ಸಮಾಜ ಎಂದಿಗೂ ಒಪ್ಪುವುದಿಲ್ಲ" ಎಂದು ಮಮತಾ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Trending News