'ಡೋಂಟ್ ಟಚ್ ಮೈ ಸ್ಟಾಫ್ ' ಪ್ರತಿಪಕ್ಷದ ಸದಸ್ಯರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ

'ಡೋಂಟ್ ಟಚ್ ಮೈ ಸ್ಟಾಪ್ ' ಹೀಗೆ ಒಮ್ಮೆಗೆ ಪ್ರತಿಪಕ್ಷದ ಸದಸ್ಯರ ಮೇಲೆ ಗರಂ ಆದದ್ದು ಬೇರೆ ಯಾರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ. ಶುಕ್ರವಾರದಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. 

Last Updated : Jul 19, 2019, 02:50 PM IST
'ಡೋಂಟ್ ಟಚ್ ಮೈ ಸ್ಟಾಫ್ ' ಪ್ರತಿಪಕ್ಷದ ಸದಸ್ಯರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ title=
file photo

ನವದೆಹಲಿ: 'ಡೋಂಟ್ ಟಚ್ ಮೈ ಸ್ಟಾಫ್ ' ಹೀಗೆ ಒಮ್ಮೆಗೆ ಪ್ರತಿಪಕ್ಷದ ಸದಸ್ಯರ ಮೇಲೆ ಗರಂ ಆದದ್ದು ಬೇರೆ ಯಾರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ. ಶುಕ್ರವಾರದಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. 

ಕಾಂಗ್ರೆಸ್, ಡಿಎಂಕೆ, ಟಿಎಂಸಿ ನಾಯಕರುಗಳು ಪ್ರಶ್ನೋತ್ತರ ವೇಳೆ ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೆ ಸ್ಪೀಕರ್ ಆಸ್ಪದ ನೀಡದೆ ಎಲ್ಲ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಲು ಸೂಚಿಸಿದ್ದಾರೆ. ಆದರೆ ಪ್ರತಿಪಕ್ಷದ ಸದಸ್ಯರು ನಮಗೆ ನ್ಯಾಯ ಬೇಕು, ತಾನ್ ಶಾಹಿ ನಹಿ  ಚಲೇಗಿ ಎಂದು ಘೋಷಣೆ ಕೂಗಿದ್ದಾರೆ. 

'ಸದನದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಎತ್ತಬೇಡಿ, ಇದು ರಾಜ್ಯಕ್ಕೆ ಸಂಬಂಧಿಸಿದೆ. ಅದರಲ್ಲೂ ಪ್ರಮುಖವಾಗಿ ಸಂವಿಧಾನಿಕ ಹುದ್ದೆಗೆ ಸಂಬಂಧಪಟ್ಟದ್ದಾಗಿದೆ. ನಾನು ಈ ಹಿಂದಿನ ಕಲಾಪದಲ್ಲಿ ಎರಡು ಬಾರಿ ಈ ವಿಚಾರವಾಗಿ ಚರ್ಚಿಸಲು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚಿಸಲು ಅವಕಾಶ ನೀಡಿದ್ದೆ ಎಂದು ಸ್ಪೀಕರ್ ಹೇಳಿದರು.  

 

Trending News