EPFO ALERT! ಈ ಸುದ್ದಿ ತಪ್ಪದೆ ಓದಿ, ಇಲ್ಲದಿದ್ದರೆ ಖಾಲಿಯಾಗಲಿದೆ ನಿಮ್ಮ ಖಾತೆ

ಒಂದು ವೇಳೆ ನಿಮಗೆ ಭವಿಷ್ಯನಿಧಿ ಸಂಘಟನೆ(EPFO) ವೆಬ್ ಸೈಟ್ ನಿಂದ ಯಾವುದಾದರೊಂದು ಸಂದೇಶ ಅಥವಾ ಮಾಹಿತಿ ಕೇಳಲಾಗಿದ್ದರೆ ಅಂತಹ ಮೇಲ್ ಅಥವಾ ಸಂದೇಶಕ್ಕೆ ಉತ್ತರ ನೀಡುವುದು ಅಗತ್ಯವಿಲ್ಲ. ಇಂತಹ ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ ವಂಚನೆ ಎಸಗುವ ಪ್ರಯತ್ನ ನಡೆಸಲಾಗುತ್ತಿದೆ. ತನ್ನ ವೆಬ್ಸೈಟ್ ಮೂಲಕ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡದಿರುವ ಸಂಘಟನೆ ಇಂತಹ ವಂಚನೆಗಳಿಂದ ಜಾಗ್ರತರಾಗಿ ಎಂದು ಸೂಚಿಸಿದೆ.

Last Updated : Feb 17, 2020, 01:54 PM IST
EPFO ALERT! ಈ ಸುದ್ದಿ ತಪ್ಪದೆ ಓದಿ, ಇಲ್ಲದಿದ್ದರೆ ಖಾಲಿಯಾಗಲಿದೆ ನಿಮ್ಮ ಖಾತೆ title=

ಒಂದು ವೇಳೆ ನಿಮಗೆ ಭವಿಷ್ಯನಿಧಿ ಸಂಘಟನೆ(EPFO) ವೆಬ್ ಸೈಟ್ ನಿಂದ ಯಾವುದಾದರೊಂದು ಸಂದೇಶ ಅಥವಾ ಮಾಹಿತಿ ಕೇಳಲಾಗಿದ್ದರೆ ಅಂತಹ ಮೇಲ್ ಅಥವಾ ಸಂದೇಶಕ್ಕೆ ಉತ್ತರ ನೀಡುವುದು ಅಗತ್ಯವಿಲ್ಲ. ಇಂತಹ ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಿ ವಂಚನೆ ಎಸಗುವ ಪ್ರಯತ್ನ ನಡೆಸಲಾಗುತ್ತಿದೆ. ತನ್ನ ವೆಬ್ಸೈಟ್ ಮೂಲಕ ತನ್ನ ಖಾತೆದಾರರಿಗೆ ಎಚ್ಚರಿಕೆ ನೀಡದಿರುವ ಸಂಘಟನೆ ಇಂತಹ ವಂಚನೆಗಳಿಂದ ಜಾಗ್ರತರಾಗಿ ಎಂದು ಸೂಚಿಸಿದೆ.

ಈ ವಿಷಯದ ಬಗ್ಗೆ ಕಾಳಜಿ ವಹಿಸಿ
EPFO ವೆಬ್ ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ ಸಾಮಾಜಿಕ ಮಾಧ್ಯಮ, ಟೆಲಿಕಾಲ್ಸ್, SMS, ಇ-ಮೇಲ್ ಗಳ ಮೂಲಕ ಫೇಕ್ ಆಫರ್ಸ್ ಗಳನ್ನು ನೀಡಿ ಈ ವಂಚನೆ ಎಸಗಲಾಗುತ್ತಿದೆ . ಯಾವುದೇ ಓರ್ವ ವ್ಯಕ್ತಿ ನಿಮಗೆ ಮೇಲ್ ಅಥವಾ ಇತರೆ ಯಾವುದೇ ಮಾಧ್ಯಮದ ಬಳಕೆ ಮಾಡಿ ಯಾವುದೇ ಸೌಕರ್ಯ ಅಥವಾ ನಿಮ್ಮ ಸಂಪೂರ್ಣ ಹಣ ಕ್ಲೇಮ್ ಕುರಿತು ಅಥವಾ ಅಡ್ವಾನ್ಸ್ ಪಡೆಯುವ ಕುರಿತು ಸಹಾಯ ಮಾಡುವುದಾಗಿ ಹೇಳಿದರೆ, ಆತ ನಿಮ್ಮನ್ನು ವಂಚಿಸುವ ಪ್ರಯತ್ನ ನಡೆಸುತ್ತಿದ್ದಾನೆ ಎಂದೇ ಅರ್ಥ. ಕಾರಣ ಇಂತಹ ಮೇಲ್ ಅಥವಾ ಕರೆಗಳಿಗೆ ಪ್ರತಿಕ್ರಿಯೆ ನೀಡದೆ, ಕೂಡಲೇ ದೂರು ನೀಡಿ ಎಂದು ಹೇಳಲಾಗಿದೆ.

ಯಾರಿಗೂ ಮಾಹಿತಿ ನೀಡಬೇಡಿ
ತನ್ನ ವೆಬ್ ಸೈಟ್ ಮೂಲಕ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ EPFO ಸಂಘಟನೆ ಯಾರ ಜೊತೆಗೂ ಕೂಡ ನಿಮ್ಮ ಪ್ಯಾನ್, ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಿರಲು ಸೂಚಿಸಿದೆ. ಅಷ್ಟೇ ಅಲ್ಲ ನಿಮ್ಮ PF ಖಾತೆಗೆ ಸಂಬಂಧಿಸಿದ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಕೂಡ ಯಾರ ಜೊತೆಗೂ ಹಂಚಿಕೊಳ್ಳಬಾರದು ಎಂದು ಹೇಳಿದೆ. ಈ ಕುರಿತು ತನ್ನ ವೆಬ್ ಸೈಟ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಸಂದೇಶ ನೀಡಿರುವ EPFO, ಸಂಘಟನೆ ಎಂದಿಗೂ ಕೂಡ ತನ್ನ ಬಳಕೆದಾರರಿಗೆ ಕರೆ ಮಾಡಿ ಅಥವಾ ಸಂದೇಶ ರವಾನಿಸಿ ನಿಮ್ಮ ಪ್ಯಾನ್, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ಕೇಳುವುದಿಲ್ಲ . ಹೀಗಾಗಿ ಗ್ರಾಹಕರು ಸುಳ್ಳು ಕರೆಗಳಿಗೆ ಪ್ರತಿಕ್ರಿಯೆ ನೀಡಿ ತಮ್ಮ ವೈಯಕ್ತಿಕ  ಮಾಹಿತಿ ನೀಡಬಾರದು ಎಂದು ಸಂಘಟನೆ ಮನವಿ ಮಾಡಿದೆ.

ಇಂತಹ ಕರೆಗಳ ಕುರಿತು ಎಲ್ಲಿ ದೂರು ಸಲ್ಲಿಸಬೇಕು
ಒಂದು ವೇಳೆ ನಿಮಗ EPFO ವತಿಯಿಂದ ಯಾವುದೇ ರೀತಿಯ ಮಾಹಿತಿ ಕೇಳಿ ಯಾವುದೇ ಮೇಲ್, SMS ಅಥವಾ ಕರೆಗಳು ಬಂದರೆ ನೀವು ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸುಳ್ಳು ಕರೆಗಳ ಕುರಿತು ನೀವು ಕಾರ್ಮಿಕ ಸಚಿವಾಲಯದ ಸಾಮಾಜಿಕ ಮಾಧ್ಯಮದ ಪ್ಲಾಟ್ ಫಾರ್ಮ್ ಮೇಲೆ ದೂರು ದಾಖಲಿಸಬಹುದು. ನಿಮ್ಮ ದೂರು ಆಧರಿಸಿ ಕಾರ್ಮಿಕ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳುವಂತೆ EPFOಗೆ ಆದೇಶ ನೀಡಲಿದೆ. ದೂರು ದಾಖಲಿಸಲು ನೀವು ನೇರವಾಗಿ EPFO ಅನ್ನು ಕೂಡ ಸಂಪರ್ಕಿಸಬಹುದು. ಇದಕ್ಕಾಗಿ ನೀವು EPFO ಟೋಲ್ ಫ್ರೀ ಸಂಖ್ಯೆಯಾಗಿರುವ  1800118005ಗೆ ಡೈಲ್ ಮಾಡಿ ದೂರು ಸಲ್ಲಿಸಬಹುದು. ಇದು ವಾರದಲ್ಲಿ 7X24 ಗಂಟೆ ಚಾಲ್ತಿಯಲ್ಲಿ ಇರಲಿದೆ.

EPFO ಈ ಸೌಕರ್ಯವನ್ನೂ ತನ್ನ ಗ್ರಾಹಕರಿಗೆ ಒದಗಿಸಿದೆ
EPFO ಸಂಘಟನೆ ತನ್ನ ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳುವ ಸೌಕರ್ಯ ಕೂಡ ಕಲ್ಪಿಸಿದೆ. ಸಂಘಟನೆ ಕಲ್ಪಿಸಿರುವ ಈ ವಿಕಲ್ಪವನ್ನು ಬಳಸಿ ನೌಕರರು ಕೆಲವೇ ನಿಮಿಷಗಳಲ್ಲಿ ಈ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 011-22901406 ಈ ಸಂಖ್ಯೆಗೆ ಮಿಸ್ ಕಾಲ್ ನೀಡಿ ಈ ಮಾಹಿತಿ ಪಡೆಯಬಹುದು.

Trending News