ವಿರಾಟ್ ಕೊಹ್ಲಿ ಔಟಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡ ಮಾಜಿ ಸೈನಿಕ !

    

Last Updated : Jan 7, 2018, 06:25 PM IST
ವಿರಾಟ್ ಕೊಹ್ಲಿ ಔಟಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡ ಮಾಜಿ ಸೈನಿಕ ! title=

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾದ ವಿರುದ್ದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ಗೆ ಇಳಿದ ಭಾರತ ತಂಡದ ನಾಯಕ  ಮೊರ್ನೆ ಮೊರ್ಕೆಲ್ ರ ಬೌನ್ಸರ್ ಎಸೆತದಿಂದಾಗಿ ವಿಕೆಟ್ ಒಪ್ಪಿಸಿದರು. ಇದರಿಂದ ಬೇಸರಗೊಂಡ ಮಾಜಿ 65 ರವಯೋಮಾನದ ಮಾಜಿ ಸೈನಿಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರತ್ಲಂ ನಲ್ಲಿ ನಡೆದಿದೆ. 

ವ್ಯಕ್ತಿಯನ್ನು ಬಾಬುಲಾಲ್ ಬೈರ್ವಾ ಎಂದು ಗುರುತಿಸಲಾಗಿದ್ದು,ಡಿಸೇಲ್ ಶೆಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ದೇಹದ 15 %ರಷ್ಟು ಭಾಗ ಸುಟ್ಟು ಹೋಗಿದ್ದು,ಮುಖ ತಲೆ ಕೈಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಜರುಗಿದಾಗ ಕೊನೆಯಲ್ಲಿ ಒಬ್ಬರೇ ಇದ್ದರೆಂದು ತಿಳಿದು ಬಂದಿದೆ. ನಂತರ ಆತನ ಸಂಬಂಧಿಗಳು ನೆರವಿಗೆ ಬಂದಿದ್ದಾರೆ, ಪೋಲೀಸರ ಮುಂದೆಯೂ ಸಹಿತ ಮಾಜಿ ಸೈನಿಕನು ಮೇಲಿನ ಕ್ರಿಕೆಟ್ ಉದಾಹರಣೆಯನ್ನೇ ನೀಡಿದ್ದಾನೆ. ಆದರೆ ಪೊಲೀಸರು ಈ ಘಟನೆಗೆ ಸಂಬಂಧಿಸಿದ ಎಲ್ಲ ರೀತಿಯ ಸಾಧ್ಯತೆಗಳಿಗೆ ಶೋಧ ನಡೆಸಿದ್ದಾರೆ ಎನ್ನಲಾಗಿದೆ.

 

Trending News