ದೆಹಲಿ ಬಳಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಶುಕ್ರವಾರ ದೆಹಲಿಯ ಪೀರಗರ್ಹಿ ಸಮೀಪದ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

Last Updated : Feb 2, 2018, 11:49 AM IST
ದೆಹಲಿ ಬಳಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ title=

ನವದೆಹಲಿ: ಶುಕ್ರವಾರ ದೆಹಲಿಯ ಪೀರಗರ್ಹಿ ಸಮೀಪದ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಳಿಗ್ಗೆ ಬೆಳಿಗ್ಗೆ ಸಂಭವಿಸಿದ ಬೆಂಕಿ ಐದು ಗಂಟೆಗಳಿಗೂ ಹೆಚ್ಚು ಕಾಲ ಹೊತ್ತುರಿಯಿತು. ಈ ಘಟನೆಯಲ್ಲಿ ಒಬ್ಬ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದರು. 

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 20 ಕ್ಕೂ ಹೆಚ್ಚಿನ ಬೆಂಕಿ ಫೈರ್ ಟೆಂಡರ್ಗಳು ಸ್ಥಳಕ್ಕಾಗಮಿಸಿವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಘಟನೆಯು ತಡರಾತ್ರಿ ಸುಮಾರು 2.30 ಗಂಟೆಗೆ ಸಂಭವಿಸಿದ್ದು, ಇನ್ನೂ ಬೆಂಕಿ ನಂದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಬೆಂಕಿ ನೆಲಮಾಳಿಗೆಯ ಪ್ರದೇಶ, ಮೊದಲ ಮಹಡಿ ಮತ್ತು ಶೂ ಕಾರ್ಖಾನೆಯ ಎರಡನೇ ಮಹಡಿಯನ್ನು ಆವರಿಸಿದೆ.

Trending News