ತ್ರಿಪುರಾದ ಅಭಿವೃದ್ದಿಗೆ ನಾವು ಮಾಣಿಕ್ ಸರ್ಕಾರರವರ ಅನುಭವ ಬಳಸಿಕೊಳ್ಳುತ್ತೇವೆ- ಬಿಜೆಪಿ

     

Last Updated : Mar 10, 2018, 11:59 AM IST
ತ್ರಿಪುರಾದ ಅಭಿವೃದ್ದಿಗೆ ನಾವು ಮಾಣಿಕ್ ಸರ್ಕಾರರವರ ಅನುಭವ ಬಳಸಿಕೊಳ್ಳುತ್ತೇವೆ- ಬಿಜೆಪಿ title=

ನವದೆಹಲಿ: 25 ವರ್ಷಗಳ ಮಾಣಿಕ್ ಸರ್ಕಾರದ ಆಡಳಿತಕ್ಕೆ ಕೊನೆ ಹಾಡಿದ ಬಿಜೆಪಿಯು, ತ್ರಿಪುರಾದ ಅಭಿವೃದ್ದಿಗೆ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರವರ ಅನುಭವವನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದೆ.

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ರಾಮ್  ಮಾಧವ್ " ಬಿಜೆಪಿಯು ಎಡಪಕ್ಷಗಳ ಜೊತೆ ಸೈದ್ದಾಂತಿಕ ಭಿನ್ನಾಭಿಪ್ರಾಯ  ಹೊಂದಿರಬಹುದು ಆದರೆ ತ್ರಿಪುರಾ ರಾಜ್ಯದ ಅಭಿವೃದ್ದಿ ವಿಚಾರದಲ್ಲಿ  ಮಾಣಿಕ್ ಸರ್ಕಾರ ರವರ ಅನುಭವವನ್ನು ಬಳಸಿಕೊಳ್ಳುತ್ತೇವೆ" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ರೆ ಹೆಚ್ಚಾಗಿರುವ ನಾಗಲ್ಯಾಂಡ್ ನಂತಹ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲ ಪ್ರದೇಶಗಳಲ್ಲಿ ಬಿಜೆಪಿ ಪಕ್ಷವನ್ನು ಜನರು ಒಪ್ಪಿಕೊಂಡಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.

Trending News