ಮಧ್ಯಪ್ರದೇಶದ ಜುನಪಾನಿಯಲ್ಲಿ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಈ ಚಿರತೆ ಇಬ್ಬರು ಗ್ರಾಮಸ್ಥರ ಜೀವ ಬಲಿತೆಗೆದುಕೊಂಡಿತ್ತು ಎಂದು ಹೇಳಲಾಗಿದೆ.

Last Updated : Sep 3, 2019, 03:30 PM IST
ಮಧ್ಯಪ್ರದೇಶದ ಜುನಪಾನಿಯಲ್ಲಿ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು title=
Image Credits: ANI

ಬಾರ್ವಾನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯ ಜುನಪಾನಿ ಗ್ರಾಮದಲ್ಲಿ ಇಬ್ಬರ ಜೀವ ಬಲಿ ತೆಗೆದುಕೊಂಡಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಸೋಮವಾರ ಸೆರೆ ಹಿಡಿದಿದ್ದಾರೆ.

"ಇಂದು ನಾವು ಹಳ್ಳಿಯಿಂದ ಚಿರತೆಯನ್ನು ಹಿಡಿದಿದ್ದೇವೆ, ಅದು ಇಬ್ಬರು ವ್ಯಕ್ತಿಗಳನ್ನು ಕೊಂಡಿತ್ತು ಎಂಬ ದೂರುಗಳು ಬಂದಿದ್ದವು. ಕಳೆದ ವಾರವೂ ನಾವು ಭಡ್ಗಾಂವ್ ಗ್ರಾಮದಿಂದ ಚಿರತೆಯನ್ನು ಬಿಡುಗಡೆ ಮಾಡಿದ್ದೇವೆ" ಎಂದು ಅರಣ್ಯ ಅಧಿಕಾರಿ ಕೆ.ಎಸ್. ಪಟ್ಟಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ಪ್ರದೇಶದ ಇನ್ನೂ ಕೆಲವು ಜನರು ಚಿರತೆ ದಾಳಿಗೆ ಬಲಿಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Trending News