ಪಾಕಿಸ್ತಾನದ ಹಿಂದೂ ಕುಟುಂಬಗಳನ್ನು ಭೇಟಿಯಾದ ಗಿರಿರಾಜ್ ಸಿಂಗ್, ಮೋದಿ ಜನ್ಮದಿನಕ್ಕೆ ಉಡುಗೊರೆ!

ಪಾಕಿಸ್ತಾನದ 120 ಹಿಂದೂ ಕುಟುಂಬಗಳು ದೆಹಲಿಯ ಮುಬಾರಕಾ ಚೌಕ್ ಬಳಿಯ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಕಳೆದ 6 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಗಿರಿರಾಜ್ ಸಿಂಗ್ ಅವರನ್ನು ಭೇಟಿಯಾಗಿ ಅನೇಕ ಸೌಲಭ್ಯಗಳನ್ನು ಘೋಷಿಸಿದರು.

Last Updated : Sep 16, 2019, 02:50 PM IST
ಪಾಕಿಸ್ತಾನದ ಹಿಂದೂ ಕುಟುಂಬಗಳನ್ನು ಭೇಟಿಯಾದ  ಗಿರಿರಾಜ್ ಸಿಂಗ್, ಮೋದಿ ಜನ್ಮದಿನಕ್ಕೆ ಉಡುಗೊರೆ! title=
Photo Credits @girirajsinghbjp

ನವದೆಹಲಿ: ಪಾಕಿಸ್ತಾನದ ಹಿಂದೂ ಕುಟುಂಬಗಳನ್ನು ಭೇಟಿಯಾದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಮದಿನದ ಅಂಗವಾಗಿ ಕೆಲವು ಉಡುಗೊರೆಗಳನ್ನೂ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ ಹುಡುಗಿಯರನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುತ್ತಿರುವ ವಿಧಾನದಿಂದ ಭಯಭೀತರಾಗಿ ಪಾಕಿಸ್ತಾನದಿಂದ ಬಂದ ಹಿಂದೂ ಕುಟುಂಬಗಳು ತಮ್ಮ ಜೀವನದಲ್ಲಿ ಸೌಲಭ್ಯಗಳ ಕೊರತೆ ಇದ್ದರೂ ಸಹ ಅವರು ಸುರಕ್ಷತೆಯಿಂದ ಇದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಬಿಜೆಪಿಯ ಫೈರ್ ಬ್ರಾಂಡ್ ಮುಖಂಡ ಗಿರಿರಾಜ್ ಸಿಂಗ್ ಹೇಳಿದ್ದಾರೆ. 

ಪಾಕಿಸ್ತಾನದ 120 ಹಿಂದೂ ಕುಟುಂಬಗಳು ದೆಹಲಿಯ ಮುಬಾರಕಾ ಚೌಕ್ ಬಳಿಯ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಕಳೆದ 6 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ವಿದ್ಯುತ್ ಅಥವಾ ನೀರಿನ ವ್ಯವಸ್ಥೆ ಇಲ್ಲ, ಯುವಕರಿಗೆ ಉದ್ಯೋಗವೂ ಇಲ್ಲ, ಮಕ್ಕಳಿಗೆ ಸುಗಮವಾಗಿ ಅಧ್ಯಯನ ಮಾಡುವ ವ್ಯವಸ್ಥೆಯೂ ಇಲ್ಲ. ಆದರೂ ಎಲ್ಲರೂ ತಮ್ಮ ಕುಟುಂಬದೊಂದಿಗೆ ಇದ್ದಾರೆ. ಅವರ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಹಿಂದೂ ಧರ್ಮದ ನಂಬಿಕೆಗಳೊಂದಿಗೆ ಬದುಕುತ್ತಾರೆ ಎಂಬ ಧೈರ್ಯದಿಂದ ಜೀವಿಸುತ್ತಿದ್ದಾರೆ ಎಂದು ಗಿರಿರಾಜ್ ಸಿಂಗ್ ಹೇಳಿದರು.

ಇದೀಗ ಇವರಿಗೆ 'ಒಳ್ಳೆಯ ದಿನ'ಗಳು ಬರಲಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಆಚರಿಸಲಾಗುವ ಸೇವಾ ವಾರದಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆ ಕುಟುಂಬಗಳನ್ನು ಭೇಟಿಯಾಗಿದ್ದಲ್ಲದೆ, ಕೆಲವು ಪ್ರಮುಖ ಘೋಷಣೆಗಳನ್ನೂ ಮಾಡಿದರು.

ಈಗ ಈ 120 ಕುಟುಂಬಗಳ ಮನೆಯೂ ಬೆಳಗಲಿದೆ. ಎಲ್ಲರ ಮನೆಗಳಲ್ಲಿ ಸೌರ ಫಲಕಗಳ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಎಲ್ಲಾ ಮನೆಗಳಿಗೆ ಹೊಲಿಗೆ ಯಂತ್ರವನ್ನು ಒದಗಿಸಲಾಗುವುದು. ಪ್ರಧಾನಮಂತ್ರಿಯ ಜನ್ಮದಿನದಂದು ಸ್ಥಳಾಂತರಗೊಂಡ ಹಿಂದೂಗಳಿಗೆ ಇದು ದೊಡ್ಡ ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಕೂಡ ಭಾರತದ ಭಾಗವಾಗಲಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

Trending News