Daily GK Quiz: ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Feb 17, 2024, 02:30 PM IST
  • ಸಸ್ಯಗಳು ಯಾವ ರೀತಿಯ ಅನಿಲವನ್ನು ಹೀರಿಕೊಳ್ಳುತ್ತವೆ..?
  • ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
  • ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ..?
Daily GK Quiz: ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು..?  title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಯಾವ ಪ್ರಾಣಿಯನ್ನು 'ಮರುಭೂಮಿಯ ಹಡಗು' ಎಂದು ಕರೆಯಲಾಗುತ್ತದೆ?

ಉತ್ತರ: ಒಂಟೆ

ಪ್ರಶ್ನೆ 2: ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

ಉತ್ತರ: 26 ಅಕ್ಷರಗಳು

ಪ್ರಶ್ನೆ 3: ಭಾರತದ ರಾಷ್ಟ್ರೀಯ ಪುಷ್ಪ ಯಾವುದು..?

ಉತ್ತರ: ಕಮಲದ ಹೂವು

ಪ್ರಶ್ನೆ 4: ಪ್ರಪಂಚದಲ್ಲಿ ಎಷ್ಟು ಖಂಡಗಳಿವೆ..?

ಉತ್ತರ: 7 ಖಂಡಗಳು

ಪ್ರಶ್ನೆ 5: ಯಾವ ಬಣ್ಣವು ಶಾಂತಿಯನ್ನು ಸಂಕೇತಿಸುತ್ತದೆ..?

ಉತ್ತರ: ಬಿಳಿ

ಇದನ್ನೂ ಓದಿ: ನಿತ್ಯ 500 ಕೋಟಿ ರೂ. ನಷ್ಟ, 70 ಲಕ್ಷ ಕಾರ್ಮಿಕರ ಸಂಕಷ್ಟ! ರೈತ ಚಳವಳಿಯ ಪರಿಣಾಮವೇನು?

ಪ್ರಶ್ನೆ 6: ಭಾರತದ ಪ್ರಥಮ ಪ್ರಜೆ ಯಾರು..?

ಉತ್ತರ: ಭಾರತದ ರಾಷ್ಟ್ರಪತಿ 

ಪ್ರಶ್ನೆ 7: ಸಸ್ಯಗಳು ಯಾವ ರೀತಿಯ ಅನಿಲವನ್ನು ಹೀರಿಕೊಳ್ಳುತ್ತವೆ..?

ಉತ್ತರ: ಇಂಗಾಲದ ಡೈಆಕ್ಸೈಡ್

ಪ್ರಶ್ನೆ 8: ಅಧಿಕ ವರ್ಷದಲ್ಲಿ ಫೆಬ್ರವರಿ ತಿಂಗಳು ಎಷ್ಟು ದಿನಗಳನ್ನು ಹೊಂದಿರುತ್ತದೆ..?

ಉತ್ತರ: 29 ದಿನಗಳು

ಪ್ರಶ್ನೆ 9: ಭೂಮಿಯ ಮೇಲಿನ ಅತಿ ಉದ್ದದ ನದಿ ಯಾವುದು..?

ಉತ್ತರ: ನೈಲ್ ನದಿ

ಪ್ರಶ್ನೆ 10: ಭೂಮಿಗೆ ಶಕ್ತಿಯ ಪ್ರಮುಖ ಮೂಲ ಯಾವುದು..?

ಉತ್ತರ: ಸೂರ್ಯ

ಇದನ್ನೂ ಓದಿ: ವೀಲ್ ಚೇರ್ ಕೊರತೆ... 80 ವರ್ಷದ ಪ್ರಯಾಣಿಕ ದಾರುಣ ಸಾವು... ಏರ್ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News