ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಿಜೆಪಿ & ಪ್ರಧಾನಿ ಮೋದಿಗೆ ಕಾಂಗ್ರೆಸ್ ನ ಐದು ಪ್ರಶ್ನೆ

ಗೌರಿ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಯ ಹಿಂದೆಯೇ ಎಐಸಿಸಿ ಮಾಧ್ಯಮ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

Last Updated : Sep 8, 2017, 05:25 PM IST
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಿಜೆಪಿ & ಪ್ರಧಾನಿ ಮೋದಿಗೆ ಕಾಂಗ್ರೆಸ್ ನ ಐದು ಪ್ರಶ್ನೆ title=

ನವ ದೆಹಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಕಾಂಗ್ರೇಸ್ ವಿರುದ್ದದ ಹೇಳಿಕೆಗೆ ಮತ್ತು ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಗೌರಿ ಲಂಕೇಶ್ ಅವರಿಗೆ ಏಕೆ ಭದ್ರತೆಯನ್ನು ನೀಡಲಿಲ್ಲ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಎಐಸಿಸಿ ಮಾಧ್ಯಮ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

* ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

* ಗೌರಿ ಹತ್ಯೆ ಸಂಭ್ರಮಿಸಿದ ವ್ಯಕ್ತಿ ಈಗಲೂ ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರನ್ನು ಫಾಲೋ ಮಾಡುತ್ತಿರುವುದೇಕೆ?

* ಶಾಸಕ ಜೀವರಾಜ್ ಹೇಳಿಕೆಯನ್ನು ಕೇಂದ್ರ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಸಮರ್ಥಿಸಿದ್ದೇಕೆ?

* ಯಾವ ಆಧಾರದಲ್ಲಿ ರವಿಶಂಕರ್ ಪ್ರಸಾದ್, ಗೌರಿ ಹತ್ಯೆಗೆ ನಕ್ಸಲರು ಕಾರಣ ಎಂದರು?

* ಗೌರಿ ನಿರಂತರವಾಗಿ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಬರಿದಿರಲಿಲ್ಲವೇ? ಎಂದು ಪ್ರಶ್ನೆಗಳ ಸವಾಲನ್ನು ಒಡ್ಡಿದ್ದಾರೆ.

Trending News