ಬಿಜೆಪಿ ಪ್ರಚಾರ ಒಳ್ಳೆಯದು ಆದರೆ ಒಳಗೆ ಬರಿ ಟೊಳ್ಳು: ಗುಜರಾತ್ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಚುನಾವಣೆ ಕಳೆದುಕೊಂಡ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹತೆಗೆ ಪ್ರಶ್ನೆಯೊಂದು ಎದ್ದಿದೆ ಎಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

Last Updated : Dec 19, 2017, 03:56 PM IST
  • 182 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದುಕೊಂಡಿದೆ.
  • ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಹೆಚ್ಚಾಗಿ ಗೆದ್ದು ಒಟ್ಟು 77 ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ ಪ್ರಚಾರ ಒಳ್ಳೆಯದು ಆದರೆ ಒಳಗೆ ಬರಿ ಟೊಳ್ಳು: ಗುಜರಾತ್ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ title=

ನವ ದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಬಂದ ಮರುದಿನ, ಗುಜರಾತ್ ಫಲಿತಾಂಶ ಮೋದಿ ಅವರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಬಿಜೆಪಿ ಪ್ರಚಾರ ಒಳ್ಳೆಯದು ಆದರೆ ಒಳಗೆ ಬರಿ ಟೊಳ್ಳು ಎಂದು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 

"ಗುಜರಾತಿನ ಜನತೆ ನನಗೆ ಪ್ರೀತಿಯನ್ನು ಕೊಟ್ಟಿದೆ, ಅದಕ್ಕಾಗಿ ಅವರಿಗೆ ಧನ್ಯವಾದಗಳು. ಯಾವುದೇ ಕೋಪ ಮತ್ತು ಹಣದಿಂದ ಪ್ರೀತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರು ಕಲಿಸಿದರು. ಮೊದೀಜಿ ಮತ್ತು ಬಿಜೆಪಿಗೆ ಗುಜರಾತ್ ಈ ಸಂದೇಶವನ್ನು ನೀಡಿದೆ. ಕೋಪವು ಯಾವುದೇ ರೀತಿಯಲ್ಲಿ ಅವರಿಗೆ ಸಹಾಯ ಮಾಡುವುದಿಲ್ಲ" ಎಂದು ರಾಹುಲ್ ಹೇಳಿದರು.

ಸೋಮವಾರ ಹೊರಬಂದ ಫಲಿತಾಂಶದ ನಂತರ, ಘನತೆಯುಕ್ತ ಪ್ರಚಾರ ನಡೆಸಿದ ಕಾರ್ಯಕರ್ತರನ್ನು ಕಾಂಗ್ರೇಸ್ ಅಧ್ಯಕ್ಷ ಶ್ಲಾಘಿಸಿದರು. "ನನ್ನ ಕಾಂಗ್ರೆಸ್ ಸಹೋದರರು ಮತ್ತು ಸಹೋದರಿಯರೇ, ನೀವು ನನ್ನನ್ನು ಹೆಮ್ಮೆ ಪಡಿಸಿದ್ದೀರಿ, ನೀವು ಘನತೆಯಿಂದ ಕೋಪವನ್ನು ಎದುರಿಸಿದ್ದೀರಿ. ಆದ್ದರಿಂದ ನೀವು ನಿಮ್ಮ ಹೋರಾಟದಲ್ಲಿ ಭಿನ್ನವಾಗಿದ್ದೀರಿ. ಕಾಂಗ್ರೆಸ್ನ ಅತಿದೊಡ್ಡ ಶಕ್ತಿ ಅದರ ಯೋಗ್ಯತೆ ಮತ್ತು ಧೈರ್ಯವೆಂದು ನೀವು ಎಲ್ಲರಿಗೂ ತೋರಿಸಿದ್ದೀರಿ" ಎಂದು ಅವರು ಹೆಮ್ಮೆಯಿಂದ ನುಡಿದರು.

ಆರನೇ ಬಾರಿಗೆ ಗುಜರಾತ್ ಚುನಾವಣೆಯಲ್ಲಿ ಜಯಗಳಿಸಲು ಕಾಂಗ್ರೆಸ್ನಿಂದ ಬಲವಾದ ಸವಾಲನ್ನು ಬಿಜೆಪಿ ಎದುರಿಸಿದೆ. ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನಿಂದ ಅಧಿಕಾರವನ್ನು ಪಡೆದುಕೊಂಡಿದೆ.

ಕಾಂಗ್ರೆಸ್ನ ರಾಜಕೀಯದ ಮೇಲೆ ಬಿಜೆಪಿ ಹಿಡಿತವನ್ನು ಅವಳಿ ಗೆಲುವುಗಳು ಬಿಗಿಗೊಳಿಸುತ್ತಿವೆ. ಕಾಂಗ್ರೆಸ್ ಕೇವಲ 18 ತಿಂಗಳಲ್ಲಿ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿತು.

182 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದುಕೊಂಡಿದೆ. 115ಸ್ಥಾನಗಳಿಂದ 2012 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಗಳನ್ನು ಹೆಚ್ಚಾಗಿ ಗೆದ್ದು ಒಟ್ಟು 77 ಸ್ಥಾನಗಳನ್ನು ಗೆದ್ದಿದೆ. ಇದು ಹೆಚ್ಚಿನ ಕಾಂಗ್ರೆಸ್ಗೆ ಗುಜರಾತ್ ಜನತೆಯ ಬೆಂಬಲ ಮತ್ತು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಭಾವವನ್ನು ತೋರಿಸುತ್ತದೆ.

Trending News