ಗುಜರಾತ್ ಚುನಾವಣೆ: ಎರಡನೇ ಹಂತದ ಮತದಾನದ ಚುನಾವಣಾ ಪ್ರಚಾರಕ್ಕೆ ಇಂದು ತೆರೆ

ಎರಡನೇ ಹಂತದ ಮತದಾನ ಡಿಸೆಂಬರ್ 14 ರಂದು ನಡೆಯಲಿದೆ.

Last Updated : Dec 12, 2017, 12:07 PM IST
  • ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ಡಿಸೆಂಬರ್ 14 ರಂದು ಮತದಾನ.
  • ಗುಜರಾತ್ ನಲ್ಲಿ 1995 ರಿಂದಲೂ ಬಿಜೆಪಿ ಅಧಿಕಾರದಲ್ಲಿದೆ.
  • 22 ವರ್ಷಗಳ ದೀರ್ಘಾವಧಿಯ ವಿರೋಧ ಪಕ್ಷವಾಗಿ ಕಾಂಗ್ರೆಸ್ ಉಳಿದಿದೆ.
ಗುಜರಾತ್ ಚುನಾವಣೆ: ಎರಡನೇ ಹಂತದ ಮತದಾನದ ಚುನಾವಣಾ ಪ್ರಚಾರಕ್ಕೆ ಇಂದು ತೆರೆ title=

ಅಹ್ಮದಾಬಾದ್: ಗಮನಾರ್ಹವಾಗಿ, ಗುಜರಾತ್ ವಿಧಾನಸಭೆಯ 93 ಸ್ಥಾನಗಳಿಗೆ ಎರಡನೇ ಹಂತದ ಮತದಾನವು ಡಿಸೆಂಬರ್ 14 ರಂದು ನಡೆಯಲಿದೆ. ಇದಕ್ಕಾಗಿ ಚುನಾವಣಾ ಪ್ರಚಾರಕ್ಕೆ ಇಂದು (ಮಂಗಳವಾರ) ಕೊನೆಯ ದಿನವಾಗಿದೆ. 

ಬಿಜೆಪಿ ಮತ್ತು ಕಾಂಗ್ರೇಸ್ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿದೆ. ಎರಡೂ ಪಕ್ಷಗಳು ತಮ್ಮ ಗೆಲುವುಗಳನ್ನು ನಿರಂತರವಾಗಿ ಸಮರ್ಥಿಸುತ್ತಿವೆ. ಗುಜರಾತ್ ನಲ್ಲಿ 1995 ರಿಂದಲೂ ಬಿಜೆಪಿ ಅಧಿಕಾರದಲ್ಲಿದೆ ಮತ್ತು 22 ವರ್ಷಗಳ ದೀರ್ಘಾವಧಿಯ ವಿರೋಧ ಪಕ್ಷದ ಅಲೆಯಿಂದ ಲಾಭ ಪಡೆಯಲು ಕಾಂಗ್ರೆಸ್ ಬಯಸಿದೆ. ಮತ್ತೊಂದೆಡೆ, ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ ಬಿಜೆಪಿ ಮೊದಲ ಬಾರಿಗೆ ಗುಜರಾತ್ನ ಚುನಾವಣೆ ಎದುರಿಸುತ್ತಿದೆ.

2017ರ ಈ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸೋಮವಾರ ತಿಳಿಯಲಿದೆ.

Trending News