Lockdown: ಮಳೆ-ಬಿಸಿಲು ಎನ್ನದೆ ಮರ ಹತ್ತಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ಈ ಶಿಕ್ಷಕನಿಗೆ ಹ್ಯಾಟ್ಸ್ ಆಫ್

ಲಾಕ್ ಡೌನ್ ಕಾಲಾವಧಿಯಲ್ಲಿ ಅದು ವರ್ಕ್ ಫ್ರಮ್ ಹೋಮ್ ಆಗಿರಲಿ ಅಥವಾ ಆನ್ಲೈನ್ ಕ್ಲಾಸ್ ಆಗಿರಲಿ ಎಲ್ಲರಿಗೂ ತಮ್ಮದೇ ಆದ ಸಮಸ್ಯೆಗಳಿವೆ. ಆದರೆ, ಇವೆಲ್ಲವುಗಳ ನಡುವೆ ಸುಬ್ರತೋ ಅವರಂತಹ ಶಿಕ್ಷಕರೂ ಕೊಡ ಇದ್ದು, ಯಾವುದೇ ಒಂದು ಸಮಸ್ಯೆಯ ಪರಿಹಾರ ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ. ಹಾಗಾದರೆ ಬನ್ನಿ ಕೊಲ್ಕತ್ತಾ ಮೂಲದ ಈ ಹಿಸ್ಟರಿ ಟೀಚರ್ ಕಥೆ ಎಂದು ಅರಿಯೋಣ.

Last Updated : Apr 22, 2020, 02:46 PM IST
Lockdown: ಮಳೆ-ಬಿಸಿಲು ಎನ್ನದೆ ಮರ ಹತ್ತಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ಈ ಶಿಕ್ಷಕನಿಗೆ ಹ್ಯಾಟ್ಸ್ ಆಫ್ title=

ಸುಬ್ರತಾ ಕೊಲ್ಕತ್ತಾದ ಎರಡು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಠ ಹೇಳುತ್ತಾರೆ. ಅವರು ಈ ಸಂಸ್ಥೆಗಳಲ್ಲಿ ಹಿಸ್ಟರಿ ಅಂದರೆ ಇತಿಹಾಸ ವಿಷಯದ ಪಾಠ ಹೇಳುತ್ತಾರೆ. ಕಳೆದ ಮಾರ್ಚ್ ನಿಂದ ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ಘೋಷಣೆಯಾದ ವೇಳೆ ಸುಬ್ರತಾ ಪಶ್ಚಿಮ ಬಂಗಾಳದ ಬಾಂಕುರಾ ಜಿಲ್ಲೆಯ ತಮ್ಮ ಊರಾದ ಅಹಾಂದಾ ಮನೆಯಲ್ಲಿದರು. 

ಸದ್ಯ ಸುಬ್ರತಾ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಎಂದರೆ ಅವರು ನಿತ್ಯ ಮಾರದೆ ಮೇಲೆ ಏರಿ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 35 ವರ್ಷದ ಸುಬ್ರತಾ ಪಾತಿ ಬೇವಿನ ಮರದ ಮೇಲೆ ವೇದಿಕೆಯೊಂದನ್ನು ನಿರ್ಮಿಸಿ ಅದನ್ನೇ ತಮ್ಮ ಕ್ಲಾಸ್ ರೂಮ್ ಮಾಡಿಕೊಂಡಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಅವರು ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಅವಧಿಯಲ್ಲಿ ಅವರಿಗೆ ತಮ್ಮ ಗ್ರಾಮದಿಂದಲೇ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಹೀಗಿರುವಾಗ ಸುಬ್ರತಾ ತಮ್ಮ ಸ್ನೇಹಿತರ ಜೊತೆಗೆ ಬಿದಿರು ಹಾಗೂ ಹಗ್ಗದ ಸಹಾಯದಿಂದ ಬೇವಿನ ಮರವೊಂದರ ಮೇಲೆ ವೇದಿಕೆಯನ್ನು ನಿರ್ಮಿಸಿದ್ದಾರೆ.

ನಿತ್ಯ ಬೆಳಗ್ಗೆ ಸುಬ್ರತೋ ಶಾಲಾವಧಿ ಆರಂಭವಾಗುತ್ತಿದ್ದಂತೆ ಮರದ ಮೇಲೆ ನಿರ್ಮಿಸಲಾಗಿರುವ ವೇದಿಕೆಯ ಮೇಲೆ ಏರಿ ಕುಳಿತುಕೊಳ್ಳುತ್ತಾರೆ ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಪಾಠ ಹೇಳಿಕೊಡುತ್ತಾರೆ. ಹಲವು ಗಂಟೆಗಳ ಕಾಲ ಅವರು ಅಲ್ಲಿಯೇ ಕುಳಿತು ಕ್ಲಾಸ್ ಹೇಳಿಕೊಡಬೇಕಾಗುತ್ತದೆ ಹೀಗಾಗಿ ಸುಬ್ರತೋ ನೀರು ಮತ್ತು ತಮ್ಮ ಆಹಾರವನ್ನೂ ಕೂಡ ಅಲ್ಲಿಯೇ ತೆಗೆದುಕೊಂಡು ಹೋಗುತ್ತಾರೆ.

ಬಿರು ಬಿಸಿಲು ಇದೀಗ ಸುಬ್ರತೋ ಅವರನ್ನು ಕಾಡಲಾರಂಭಿಸಿದೆ 
ಈ ಕುರಿತು ಮಾತನಾಡುವ ಸುಬ್ರತೋ 'ದಿನದಿಂದ ಏರಿಕೆಯಾಗುತ್ತಿರುವ ತಾಪಮಾನ ಇದೀಗ ಸತಾಯಿಸಲಾರಂಭಿಸಿದೆ ಎನ್ನುತ್ತಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಮಳೆ ಕೂಡ ಅವರಿಗೆ ಅಡ್ಡಿ ಪಡಿಸುತ್ತದೆ. ಮಳೆ... ಬಿಸಿಲಿನ ಕಾರಣ ಬಿದಿರಿನಿಂದ ತಯಾರಿಸಲಾಗಿರುವ ಪ್ಲಾಟ್ ಫಾರ್ಮ್ ಹಾಳಾಗುತ್ತಿದೆ. ಆದರೂ ಕೂಡ ತಾವು ಧೃತಿಗೆಡದೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸುಬ್ರತೋ ಹೇಳುತ್ತಾರೆ. ನನ್ನ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಹಾಜರಿ ಕೂಡ ಉತ್ತಮವಾಗಿರುತ್ತದೆ ಎಂದು ಮುಗುಳ್ನಕ್ಕು ಹೇಳುವ ಸುಬ್ರತೋ ಇದು ನನ್ನ ಕಾನ್ಫಿಡೆನ್ಸ್ ಗೆ ಇನ್ನಷ್ಟು ಬಲ ನೀಡುತ್ತದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಯಾವುದೇ ಅಡಚಣೆ ಉಂಟಾಗಬಾರದು ಎಂದು ನನಗನಿಸುತ್ತದೆ ಎಂದು ಹೇಳುತ್ತಾರೆ.

Trending News