Honda Elevate SUV : ಹೋಂಡಾ ಎಲಿವೇಟ್ SUVಯ ಬೆಲೆ ಸೋರಿಕೆ, ಇಲ್ಲಿದೆ ಡಿಟೈಲ್ಸ್

Honda Elevate SUV: ಹೋಂಡಾ ಎಲಿವೇಟ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUVಗಳಾದ ಹ್ಯುಂಡೈ ಕ್ರೆಟಾ ಜೊತೆಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟಿಗನ್, ಸ್ಕೋಡಾ ಕುಶಾಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮುಂತಾದವುಗಳೊಂದಿಗೆ ಸ್ಪರ್ಧಿಸಲಿದೆ.

Written by - Puttaraj K Alur | Last Updated : Jul 1, 2023, 05:33 PM IST
  • ಪ್ರೀಮಿಯಂ ಕಾರು ಮಾರಾಟದಲ್ಲಿ ಪ್ರಾಬಲ್ಯ ಹೊಂದಿರುವ ಹೋಂಡಾದ ಎಲಿವೇಟ್‌ SUV ಸಾಕಷ್ಟು ನಿರೀಕ್ಷೆ ಮೂಡಿಸಿದೆ
  • ಹೋಂಡಾ ಎಲಿವೇಟ್‌ SUVಯ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ, ಆದ್ರೆ ಮಾಹಿತಿ ಸೋರಿಕೆಯಾಗಿದೆ
  • 21 ಸಾವಿರ ರೂ. ಟೋಕನ್‌ ಮೊತ್ತವನ್ನು ಪಾವತಿಸಿ ಗ್ರಾಹಕರು ಹೋಂಡಾ ಎಲಿವೇಟ್‌ SUV ಬುಕ್ ಮಾಡಿಕೊಳ್ಳಬಹುದು
Honda Elevate SUV : ಹೋಂಡಾ ಎಲಿವೇಟ್ SUVಯ ಬೆಲೆ ಸೋರಿಕೆ, ಇಲ್ಲಿದೆ ಡಿಟೈಲ್ಸ್ title=
ಹೋಂಡಾ ಎಲಿವೇಟ್ ಬೆಲೆ

ನವದೆಹಲಿ: ಹೋಂಡಾ ತನ್ನ ಮೊದಲ ಮಧ್ಯಮ ಗಾತ್ರದ SUV ಹೋಂಡಾ ಎಲಿವೇಟ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯು ಇದನ್ನು ಜೂನ್ 6ರಂದು ಪರಿಚಯಿಸಿತು. ಭಾರತದಲ್ಲಿ ಇದರ ಬೆಲೆಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ. ಹೋಂಡಾ ಎಲಿವೇಟ್ SUVಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಫೇಸ್‍ಲಿಫ್ಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೇರೈಡರ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ. SUV ಬೆಲೆಗಳನ್ನು ಬಹಿರಂಗಪಡಿಸಿದ ವಿತರಕರಿಗಾಗಿ ಹೋಂಡಾ ಸಭೆ ನಡೆಸಿದೆ ಎಂದು ಆನ್‌ಲೈನ್ ವರದಿಗಳು ಸೂಚಿಸಿವೆ. ವರದಿಗಳ ಪ್ರಕಾರ ಹೋಂಡಾ ಎಲಿವೇಟ್‌ನ ಮೂಲ ರೂಪಾಂತರದ ಬೆಲೆ 11 ಲಕ್ಷ ರೂ. ಇದೆ.

4 ವೆರಿಯಂಟ್‌ಗಳಲ್ಲಿ ಬಿಡುಗಡೆ

ಮಾಹಿತಿ ಪ್ರಕಾರ ಹೋಂಡಾ ಕಂಪನಿಯು ಈ ವರ್ಷದ ಹಬ್ಬದ ಋತುವಿನಲ್ಲಿ ಅಧಿಕೃತವಾಗಿ ಎಲಿವೇಟ್ ಅನ್ನು ಹೋಂಡಾ ಶೋರೂಂಗಳಲ್ಲಿ ಗ್ರಾಹಕರಿಗೆ ಪ್ರದರ್ಶನಕ್ಕೆ ಇಡಲಾಗುವುದು. ಆಗಸ್ಟ್‌ನಲ್ಲಿ ಟೆಸ್ಟ್ ಡ್ರೈವ್‌ಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಎಲಿವೇಟ್ SUVಯನ್ನು 4 ರೂಪಾಂತರಗಳಲ್ಲಿ ನೀಡುವ ಸಾಧ್ಯತೆಯಿದೆ. ಮೂಲ ರೂಪಾಂತರದ ಬೆಲೆ ಸುಮಾರು 11 ಲಕ್ಷ ರೂ. (ಎಕ್ಸ್ ಶೋ ರೂಂ) ಇದೆ. ಟಾಪ್-ಎಂಡ್ ರೂಪಾಂತರವು ಹ್ಯುಂಡೈ ಕ್ರೆಟಾದ ಟಾಪ್-ಎಂಡ್ NA ಪೆಟ್ರೋಲ್ IVT ರೂಪಾಂತರಕ್ಕೆ ಹೊಂದಿಕೆಯಾಗುವ ಬೆಲೆಯಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ತಿಂಗಳಾರಂಭದಲ್ಲೇ ಈ ನಿಯಮಗಳಲ್ಲಿ ಭಾರೀ ಬದಲಾವಣೆ: ಗ್ರಾಹಕರ ಜೇಬಿಗೆ ನೇರ ಕತ್ತರಿ!

ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಲ್ಲಾ LED ಲೈಟ್ ಸೆಟಪ್‌, ಮುಂಭಾಗದ ಪವರ್‌ಫುಲ್‌ ಬಂಪರ್‌, ಹಿಂಭಾಗದ ಉತ್ತಮ ನೋಟ, ಆರಾಮದಾಯಕ ಸೀಟುಗಳು ಮತ್ತು ಪ್ರೀಮಿಯಂ ನೋಟದ ಕ್ಯಾಬಿನ್ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲೇನ್ ವಾಚ್ ಕ್ಯಾಮೆರಾ ಮತ್ತು ಸಿಂಗಲ್-ಪೇನ್ ಸನ್‌ರೂಫ್ ವ್ಯವಸ್ಥೆ, ಕ್ರೂಸ್ ಕಂಟ್ರೋಲ್, ಹಲವು ಏರ್‌ಬ್ಯಾಗ್‌ಗಳು, 17-ಇಂಚಿನ ಅಲಾಯ್ ಚಕ್ರಗಳು, ಡೋರ್-ಮೌಂಟೆಡ್ ರಿಯರ್‌ವ್ಯೂ ಮಿರರ್‌ಗಳು ಮತ್ತು ಸಿಲ್ವರ್ ರೂಫ್ ರೈಲ್‌ಗಳು ಸೇರಿದಂತೆ ಸಾಕಷ್ಟು ಪ್ರಮಾಣಿತ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನೂ ಈ ಕಾರಿನಲ್ಲಿ ನೀಡಲಾಗಿದೆ

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದರ ಇನ್ಸ್ಟ್ರುಮೆಂಟ್ ಕನ್ಸೋಲ್ 7-ಇಂಚಿನ TFT ಸ್ಕ್ರೀನ್, ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸ್ವಯಂಚಾಲಿತ ಹವಾಮಾನ, ಒಂದು ಪುಶ್ ಸ್ಟಾರ್ಟ್-ಸ್ಟಾಪ್ ಬಟನ್, ಲೇನ್ ವಾಚ್ ಕ್ಯಾಮೆರಾ, 6 ಏರ್‌ಬ್ಯಾಗ್‌ಗಳು ಮತ್ತು ಲೆವೆಲ್-2 ADAS ಅನ್ನು ಒಳಗೊಂಡಿದೆ.

ಇದನ್ನೂ ಓದಿ: Second Hand ಕಾರು ಖರೀದಿಸುವ 4 ಲಾಭಗಳಿವು.. ಈ ಗುಟ್ಟನ್ನು ಯಾರೂ ನಿಮಗೆ ಹೇಳಲ್ಲ!

ಎಂಜಿನ್ ಮತ್ತು ಪವರ್

ಪ್ರಸ್ತುತ ಹೋಂಡಾ ಎಲಿವೇಟ್ ಅನ್ನು ಒಂದೇ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಹೋಂಡಾ ಎಲಿವೇಟ್‌ 1.5 ಲೀಟರ್‌ i-VTEC DOHC ಪೆಟ್ರೋಲ್‌ ಎಂಜಿನ್ ಹೊಂದಿರಲಿದ್ದು, ಇದು ಗರಿಷ್ಟ 121PS ಶಕ್ತಿ ಮತ್ತು 145 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ SUVಯಲ್ಲಿ 6 ಸ್ಪೀಡ್ ಮ್ಯಾನ್ಯುವಲ್ ಮತ್ತು 7 ಸ್ಪೀಡ್ CVT (Continuously Variable Transmission) ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 21 ಸಾವಿರ ರೂ. ಟೋಕನ್‌ ಮೊತ್ತವನ್ನು ಪಾವತಿಸಿ ಗ್ರಾಹಕರು ಹೋಂಡಾ ಎಲಿವೇಟ್‌ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News