ನಾನು ಸಿಂಪಲ್ ಮ್ಯಾನ್, ಆಕೆ ಮಾಡರ್ನ್ ಮಹಿಳೆ, ನಮ್ಮದು ಸರಿಹೊಂದದ ಜೋಡಿ- ತೇಜ್ ಪ್ರತಾಪ್

ಪತ್ನಿ ಐಶ್ವರ್ಯಾ ರೈ ರಿಂದ ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ "ತಾವು ಸರಳ ವ್ಯಕ್ತಿ, ಆದರೆ ಆಕೆ ದೆಹಲಿ ಮಾಡರ್ನ್ ಮಹಿಳೆ ನಮ್ಮಿಬ್ಬರದು ಸರಿಹೊಂದದ ಜೋಡಿ ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.

Last Updated : Nov 3, 2018, 07:25 PM IST
ನಾನು ಸಿಂಪಲ್ ಮ್ಯಾನ್, ಆಕೆ ಮಾಡರ್ನ್ ಮಹಿಳೆ, ನಮ್ಮದು ಸರಿಹೊಂದದ ಜೋಡಿ- ತೇಜ್ ಪ್ರತಾಪ್  title=

ನವದೆಹಲಿ: ಪತ್ನಿ ಐಶ್ವರ್ಯಾ ರೈ ರಿಂದ ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ "ತಾವು ಸರಳ ವ್ಯಕ್ತಿ, ಆದರೆ ಆಕೆ ದೆಹಲಿ ಮಾಡರ್ನ್ ಮಹಿಳೆ ನಮ್ಮಿಬ್ಬರದು ಸರಿಹೊಂದದ ಜೋಡಿ ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.

ಬೋಧಗಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜ್ ಪ್ರತಾಪ್ ಯಾದವ್ " ನನ್ನ ಪೋಷಕರಿಗೆ ನಾನು ಈ ಸಂದರ್ಭದಲ್ಲಿ ಮದುವೆ ಬೇಡ ಎಂದು ಹೇಳಿದ್ದೆ ಆದರೆ ಯಾರು ನನ್ನ ಮಾತು ಕೇಳಲಿಲ್ಲ. ನಾನು ಸರಳ ಹವ್ಯಾಸಗಳನ್ನು ಹೊಂದಿರುವ ಸಿಂಪಲ್ ವ್ಯಕ್ತಿಯಾಗಿದ್ದರೆ, ಆಕೆ ಮಾರ್ಡನ್ ಮಹಿಳೆ ದೆಹಲಿಯಲ್ಲಿ ಅಧ್ಯಯನ ಮಾಡಿ ಮೆಟ್ರೋಪಾಲಿಟನ್ ಜೀವನವನ್ನು ನಡೆಸುವಂತವಳು ಆದ್ದರಿಂದ ನಮ್ಮಿಬ್ಬರದು ಸರಿಹೊಂದದ ಜೋಡಿ" ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.

ಇದಕ್ಕೂ ಮೊದಲು ತೇಜ್ ಪ್ರತಾಪ್ ಮಾಧ್ಯಮಗಳ ಜೊತೆ ಮಾತನಾಡುತ್ತಾ  "ನಾನು ಮನವಿಯೊಂದನ್ನು ಸಲ್ಲಿಸಿರುವುದು ನಿಜ ಘುತ್-ಘುತ್ ಕೆ ಜೀನ್ ಸೆ ತೋ ಕೊಯಿ ಫೈಯೆದಾ ಹೈ ನಹಿ (ನಿರ್ಭಂದಿತ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ)."ಎಂದು ಹೇಳಿದ್ದರು.

ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಅವರ ಮಗ ತೇಜ್ ಪ್ರತಾಪ್ ಅವರು ಈ ವರ್ಷದ ಮೇ 12 ರಂದು ಪಾಟ್ನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹಿರಿಯ ಆರ್ಜೆಡಿ ನಾಯಕ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು ಮದುವೆಯಾಗಿದ್ದರು.

 

Trending News