ನನ್ನ ವಿಚ್ಛೇದನಕ್ಕೆ ಒಪ್ಪಿಗೆ ನೀಡುವವರೆಗೂ ಮನೆಗೆ ಹಿಂತಿರುಗುವುದಿಲ್ಲ-ಲಾಲೂ ಪುತ್ರ ತೇಜ್ ಪ್ರತಾಪ್

 ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ  ಹಿರಿಯ ಮಗ ತೇಜ್ ಪ್ರತಾಪ್ ತಮ್ಮ ವಿಚ್ಚೇದನದ ನಿರ್ಧಾರಕ್ಕೆ ತಮ್ಮ ಕುಟುಂಬ ಬೆಂಬಲ ನೀಡುವವರೆಗೂ ತಾವು ಮನೆಗೆ ಹಿಂದಿರುಗುವುದಿಲ್ಲ ಎಂದು ತಿಳಿಸಿದರು

Last Updated : Nov 9, 2018, 08:46 PM IST
ನನ್ನ ವಿಚ್ಛೇದನಕ್ಕೆ ಒಪ್ಪಿಗೆ ನೀಡುವವರೆಗೂ ಮನೆಗೆ ಹಿಂತಿರುಗುವುದಿಲ್ಲ-ಲಾಲೂ ಪುತ್ರ ತೇಜ್ ಪ್ರತಾಪ್  title=
file photo

ಪಾಟ್ನಾ:  ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ  ಹಿರಿಯ ಮಗ ತೇಜ್ ಪ್ರತಾಪ್ ತಮ್ಮ ವಿಚ್ಚೇದನದ ನಿರ್ಧಾರಕ್ಕೆ ತಮ್ಮ ಕುಟುಂಬ ಬೆಂಬಲ ನೀಡುವವರೆಗೂ ತಾವು ಮನೆಗೆ ಹಿಂದಿರುಗುವುದಿಲ್ಲ ಎಂದು ತಿಳಿಸಿದರು

ಟೆಲಿಫೋನ್ ಮೂಲಕ ಪ್ರಾದೇಶಿಕ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಅವರು ತಮ್ಮ ಹುಟ್ಟುಹಬ್ಬದಂದು ಕಿರಿಯ ಸಹೋದರ ತೇಜಶ್ವಿ ಯಾದವ್ ಅವರ ಶುಭಾಶಯಗಳನ್ನು ತಿಳಿಸಿದರು, ಆದರೆ ಅವರು ದೆಹಲಿಯಲ್ಲಿನ ಆಚರಣೆ ಭಾಗವಹಿಸುತ್ತಿಲ್ಲ ಎಂದು ಅವರು ತಿಳಿಸಿದರು.

ಶನಿವಾರದಂದು ರಾಂಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಲಾಲು ಪ್ರಸಾದ್ ಅವರನ್ನು  ವಿಚ್ಚೇದನದ ವಿಚಾರವಾಗಿ ಚರ್ಚಿಸಲು ಭೇಟಿಯಾಗಿದ್ದರು ಆದರೆ ಮಗನ ನಿರ್ಧಾರಕ್ಕೆ ಲಾಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಈ ಹಿನ್ನಲೆಯಲ್ಲಿ ಅವರು ಸ್ವಲ್ಪದಿನಗಳ ಕಾಲ ವಾರಣಾಸಿಯಲ್ಲಿ ವಿಶ್ರಾಂತಿ ಪಡೆಯಲು ತಂಗಿದ್ದರು 

"ನಮ್ಮ ಭಿನ್ನಾಭಿಪ್ರಾಯಗಳು ಒಂದೊಂದಕ್ಕೊಂದು ತಾಳೆ ಹೊಂದುವುದಿಲ್ಲ ಆದ್ದರಿಂದ , ಮದುವೆಯನ್ನು ಮುಂಚೆಯೇ ನಾನು ಅದನ್ನು ಪೋಷಕರಿಗೆ ಹೇಳಿದ್ದೇನೆ ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ ಮತ್ತು ಈಗ ಯಾರೂ ನನ್ನ ಮಾತು ಕೇಳುತ್ತಿಲ್ಲ ಅವರು ನನಗೆ ಒಪ್ಪಿಗೆ ನೀಡದ ಹೊರತು ಮನೆಗೆ ಹೇಗೆ ಹಿಂದಿರುಗಲಿ ? ಎಂದು ಯಾದವ್ ಪ್ರಶ್ನಿಸಿದರು .

ಇದೇ ಮೇ ತಿಂಗಳಲ್ಲಿ ತೇಜ್ ಪ್ರತಾಪ್ ಮಾಜಿ ಸಚಿವ ಚಂದ್ರಿಕಾ ರೈ ಪುತ್ರಿ  ಹಾಗೂ ಮಾಜಿ ಬಿಹಾರ ಮುಖ್ಯಮಂತ್ರಿ ದರೋಗಾ ರೈ ಮೊಮ್ಮಗಳಾದ ಐಶ್ವರ್ಯಾ ರೈರನ್ನು ಮದುವೆಯಾಗಿದ್ದರು ಆದರೆ ತಮ್ಮಿಬ್ಬರದು ಸರಿಹೊಂದದ ಜೋಡಿ ಎಂದು ತೇಜ್ ಪ್ರತಾಪ್ ವಿಚ್ಛೇದನಕ್ಕೆ ಮುಂದಾಗಿದ್ದರು

Trending News