ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್

ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಹಾರ್ದಿಕ್ ಪಟೇಲ್ ವ್ಯಂಗ್ಯ ಮಾಡಿದ್ದಾರೆ.

Last Updated : Nov 15, 2018, 01:14 PM IST
ಹೆಸರು ಬದಲಾವಣೆಯಿಂದ ದೇಶ ಶ್ರೀಮಂತವಾಗುತ್ತೆ ಅನ್ನೋದಾದ್ರೆ ಎಲ್ಲರಿಗೂ ರಾಮ ಅಂತ ಹೆಸರಿಡಿ- ಹಾರ್ದಿಕ್ ಪಟೇಲ್ title=

ನವದೆಹಲಿ: ಉತ್ತರಪ್ರದೇಶದಲ್ಲಿ ಅಲಹಾಬಾದ್ ಮತ್ತು ಫರೀದಾಬಾದ್ ನಗರಗಳ ಹೆಸರು ಬದಲಾಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಫೈಜಾಬಾದನ್ನು ಅಯೋಧ್ಯೆ ಎಂದೂ, ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್‌ ಎಂದೂ ಪುನರ್‌ ನಾಮಕರಣ ಮಾಡುವುದಾಗಿ ಘೋಷಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರವನ್ನು ಲೇವಡಿ ಮಾಡಿದ ಹಾರ್ದಿಕ್ ಪಟೇಲ್, ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ವ್ಯಂಗ್ಯ ಮಾಡಿದ್ದಾರೆ.

ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಸಂದರ್ಭದಲ್ಲಿ ಫರೀದಾಬಾದ್ ಹೆಸರನ್ನು ಬದಲಾಯಿಸುವುದಾಗಿ ಹೇಳಿದ್ದರು. ಇದಾದ ಬಳಿಕ ಇತರ ಸ್ಥಳಗಳ ಹೆಸರನ್ನು ಬದಲಾಯಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಹಾರ್ದಿಕ್ ಪಾಟೀಲ್ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Trending News