ಭಾರತದ ಗಗನಯಾನ ಯೋಜನೆ: ಗಗನಯಾತ್ರಿಗಳ ರಕ್ಷಣೆಯನ್ನು ಪರೀಕ್ಷಿಸಲಿವೆ ಪೂರ್ವಭಾವಿ ಪರೀಕ್ಷೆಗಳು

Written by - Girish Linganna | Edited by - Manjunath Naragund | Last Updated : Sep 23, 2023, 09:03 PM IST
  • ಇದರ ಮುಖ್ಯ ಗುರಿ ಎಂದರೆ ಕ್ರ್ಯೂ ಎಸ್ಕೇಪ್ ಸೀಕ್ವೆನ್ಸ್ ಅನ್ನು ಪರೀಕ್ಷಿಸುವುದಾಗಿದೆ.
  • ಇದು ಅನಪೇಕ್ಷಿತ ತುರ್ತು ಪರಿಸ್ಥಿತಿಗಳು ತಲೆದೋರಿದರೆ ಗಗನಯಾತ್ರಿಗಳ ಸುರಕ್ಷತೆಯನ್ನು ದೃಢೀಕರಿಸುತ್ತದೆ.
  • ಇಸ್ರೋ ಈ ಯೋಜನೆಯನ್ನು 2024ರ ಕೊನೆಯ ವೇಳೆಗೆ ಅಥವಾ 2025ರ ಆರಂಭದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.
ಭಾರತದ ಗಗನಯಾನ ಯೋಜನೆ: ಗಗನಯಾತ್ರಿಗಳ ರಕ್ಷಣೆಯನ್ನು ಪರೀಕ್ಷಿಸಲಿವೆ ಪೂರ್ವಭಾವಿ ಪರೀಕ್ಷೆಗಳು title=

ಅಹಮದಾಬಾದಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಸಲುವಾಗಿ ವಿನ್ಯಾಸಗೊಂಡಿರುವ, ಭಾರತದ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯಲ್ಲಿ ಮಹತ್ತರ ಪಾತ್ರವನ್ನು ಹೊಂದಿದೆ. ಈ ಮಾನವ ಸಹಿತ ಗಗನಯಾತ್ರೆಯ ಯೋಜನೆ ಮೂವರು ಗಗನಯಾತ್ರಿಗಳನ್ನು ಭೂಮಿಯ ಮೇಲ್ಮೈಯಿಂದ 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕಕ್ಷೆಗೆ ಕರೆದೊಯ್ಯುವ ಉದ್ದೇಶ ಹೊಂದಿದೆ.

ಗಗನಯಾನ ಯೋಜನೆ ಮೂವರು ಗಗನಯಾತ್ರಿಗಳು ಜೀವಿಸಬಲ್ಲ ಬಾಹ್ಯಾಕಾಶ ಕ್ಯಾಪ್ಸೂಲ್ ನಿರ್ಮಿಸುವ ಉದ್ದೇಶ ಹೊಂದಿದೆ. ಈ ಕ್ಯಾಪ್ಸೂಲ್ ಅವರನ್ನು ಬಾಹ್ಯಾಕಾಶದಲ್ಲಿ 400 ಕಿಲೋಮೀಟರ್‌ಗಳಷ್ಟು (ಅಂದಾಜು 250 ಮೈಲಿ) ಎತ್ತರಕ್ಕೆ ಕೊಂಡೊಯ್ದು, ಅವರನ್ನು ಮೂರು ದಿನಗಳ ಬಳಿಕ ಹಿಂದೂ ಮಹಾಸಾಗರಕ್ಕೆ ಮರಳಿಸಲಿದೆ.

ಈ ಯೋಜನೆಯ ರಾಕೆಟ್ ಅನ್ನು ಬೇರೆ ಕಡೆ ನಿರ್ಮಿಸಲಾಗುತ್ತದೆ. ಆದರೆ, ಗಗನಯಾನ ಬಾಹ್ಯಾಕಾಶ ನೌಕೆಯ ಒಳಗಿನ ಮುಖ್ಯ ವಸ್ತುಗಳನ್ನು ಅಹಮದಾಬಾದಿನಲ್ಲಿ ನಿರ್ಮಿಸಲಾಗುತ್ತದೆ. ಅಲ್ಲಿ ಎರಡು ಅತ್ಯಂತ ಪ್ರಮುಖ ವಸ್ತುಗಳಾದ, ಗಗನಯಾತ್ರಿಗಳು ಉಳಿದುಕೊಳ್ಳುವ ಕ್ಯಾಬಿನ್ ಹಾಗೂ ಅವರು ಬಳಸುವ ಸಂವಹನಾ ವ್ಯವಸ್ಥೆಗಳು ನಿರ್ಮಾಣಗೊಳ್ಳಲಿವೆ.

No description available.

ಕ್ಯಾಬಿನ್‌ನಲ್ಲಿ ಮೂವರು ಗಗನಯಾತ್ರಿಗಳು ಉಳಿದುಕೊಳ್ಳಲಿದ್ದು, ವಿವಿಧ ನಿಯತಾಂಕಗಳನ್ನು ಗಮನಿಸಲು ಎರಡು ಸ್ಕ್ರೀನ್‌ಗಳು ಮತ್ತು ಲೈಟ್‌ಗಳನ್ನು ಒಳಗೊಂಡಿದೆ. ಅದರೊಡನೆ, ಗಗನಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ, ಆಮ್ಲಜನಕ ಹಾಗೂ ಇಂಗಾಲದ ಡೈಆಕ್ಸೈಡ್ ಮಟ್ಟವನ್ನು ಗುರುತಿಸಲು ವಿಶೇಷ ಕ್ಯಾಮರಾ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.

ಅದರೊಡನೆ, ಏನಾದರೂ ಅನಿರೀಕ್ಷಿತ ಸಮಸ್ಯೆಗಳು ಎದುರಾದರೆ, ಅಗ್ನಿ ನಿವಾರಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

ಯೋಜನೆಯ ಸಂದರ್ಭದಲ್ಲಿ ಸಂವಹನ ನಡೆಸಲು, ಗಗನಯಾನ ಯೋಜನೆಯ ಉಡಾವಣೆಗೆ ಪೂರ್ವಭಾವಿಯಾಗಿ ಇಸ್ರೋ ಎರಡು ಸಂವಹನ ಉಪಗ್ರಹಗಳನ್ನು ಜಿಯೋಸಿಂಕ್ರೊನಸ್ ಕಕ್ಷೆಗೆ ಕಳುಹಿಸಲು ಉದ್ದೇಶಿಸಿದೆ. ಈ ಉಪಗ್ರಹಗಳು ಗಗನಯಾನ ಮತ್ತು ಭೂಮಿಯ ನಡುವೆ ನಿರಂತರ ಸಂಪರ್ಕವನ್ನು ಸಾಧಿಸಲು ನೆರವಾಗಲಿವೆ.

ಈ ಯೋಜನೆಯಲ್ಲಿ ಗಗನಯಾತ್ರಿಗಳಿಗೆ ನಿರಂತರ ಸಂಪರ್ಕ ಸಾಧಿಸಿ, ಮಾಹಿತಿ ಹೊಂದುವ ಸಲುವಾಗಿ ಅಂತರ್ಜಾಲ ವ್ಯವಸ್ಥೆ ಹಾಗೂ ಎರಡು ಟಿವಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಕ್ಯಾಬಿನ್ ಸುತ್ತಲೂ ಕ್ಯಾಮರಾಗಳನ್ನು ಇಡಲಾಗಿದೆ.

ಇಸ್ರೋ ಅಹಮದಾಬಾದಿನ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎಸ್ಎಸಿ) ನಿರ್ದೇಶಕರು, ಟೆಸ್ಟ್ ವೆಹಿಕಲ್ ಡಿ1 (ಟಿವಿ ಡಿ1) ಎಂದು ಕರೆಯಲಾಗುವ ಪರೀಕ್ಷಾ ವಾಹನವನ್ನು ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಉಡಾವಣೆಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಟೆಸ್ಟ್ ವೆಹಿಕಲ್ ಡಿ1 (ಟಿವಿ ಡಿ1) ಉಡಾವಣೆಯೂ ಗಗನಯಾನ ಯೋಜನೆಯ ಉಡಾವಣೆಯ ರೀತಿಯನ್ನು ಹೋಲಲಿದೆ. ಆದರೆ ಗಗನಯಾನ ಯೋಜನೆಯಲ್ಲಿ ಕ್ರ್ಯೂ ಮಾಡ್ಯುಲ್ ಇರಲಿದೆ. ಬಾಹ್ಯಾಕಾಶದಿಂದ, ಸಿಬ್ಬಂದಿಗಳ ತಪ್ಪಿಸಿಕೊಳ್ಳುವ ಅನುಕ್ರಮವನ್ನು ಪ್ರಯತ್ನಿಸಲಾಗುತ್ತದೆ

.No description available.

ನೆಲದಿಂದ ಅಥವಾ ನೀರಿನಿಂದ ಸಿಬ್ಬಂದಿಗಳು ಹೊರಬರುವ ಸನ್ನಿವೇಶ ಎದುರಾದಾಗ, ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ತುರ್ತು ಬಚಾವಾಗುವ ಯೋಜನೆಯನ್ನು ರೂಪಿಸುವ ಜವಾಬ್ದಾರಿ ಹೊಂದಿದೆ. ಈ ಪರೀಕ್ಷೆ ಗಗನಯಾನ ಯೋಜನೆಗೆ ಪೂರ್ವಭಾವಿ ಹಂತವಾಗಿದ್ದು, ಗಗನಯಾತ್ರಿಗಳು ಪ್ರಯಾಣಿಸುವ ಕ್ರ್ಯೂ ಮಾಡ್ಯುಲ್ ಅನ್ನು ಒಳಗೊಂಡಿರುತ್ತದೆ.

ಇದರ ಮುಖ್ಯ ಗುರಿ ಎಂದರೆ ಕ್ರ್ಯೂ ಎಸ್ಕೇಪ್ ಸೀಕ್ವೆನ್ಸ್ ಅನ್ನು ಪರೀಕ್ಷಿಸುವುದಾಗಿದೆ. ಇದು ಅನಪೇಕ್ಷಿತ ತುರ್ತು ಪರಿಸ್ಥಿತಿಗಳು ತಲೆದೋರಿದರೆ ಗಗನಯಾತ್ರಿಗಳ ಸುರಕ್ಷತೆಯನ್ನು ದೃಢೀಕರಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಈ ಯೋಜನೆಯ ಪ್ರಗತಿ ವಿಳಂಬವಾಗಿತ್ತು. ಇಸ್ರೋ ಈ ಯೋಜನೆಯನ್ನು 2024ರ ಕೊನೆಯ ವೇಳೆಗೆ ಅಥವಾ 2025ರ ಆರಂಭದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.

ಗಗನಯಾನ ಯೋಜನೆಯಲ್ಲಿ ಮೂವರು ಗಗನಯಾತ್ರಿಗಳನ್ನು 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕಕ್ಷೆಗೆ ಮೂರು ದಿನಗಳ ಯೋಜನೆಗಾಗಿ ಕಳುಹಿಸಲಾಗುತ್ತದೆ. ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿ, ಹಿಂದೂ ಮಹಾಸಾಗರದಲ್ಲಿ ಇಳಿಯುವ ಮೂಲಕ ಯೋಜನೆ ಪೂರ್ಣಗೊಳ್ಳುತ್ತದೆ.

ಲೇಖಕರು:  ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News