IRCTC ಹಗರಣ: ರಾಬ್ಡಿದೇವಿ ಮತ್ತು ತೇಜಸ್ವಿ ಯಾದವ್ ಗೆ ಮಧ್ಯಂತರ ಜಾಮೀನು

ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ, ಮಗ ತೇಜಶ್ವಿ ಯಾದವ್ ಮತ್ತು ಇತರ ಆರೋಪಿಗಳಿಗೆ ಐಆರ್ಸಿಟಿಸಿ ಹಗರಣದಲ್ಲಿ ದೆಹಲಿ ಪಟೀಯಾಲ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. 

Last Updated : Oct 6, 2018, 12:36 PM IST
IRCTC ಹಗರಣ: ರಾಬ್ಡಿದೇವಿ ಮತ್ತು ತೇಜಸ್ವಿ ಯಾದವ್ ಗೆ ಮಧ್ಯಂತರ ಜಾಮೀನು  title=

ನವದೆಹಲಿ: ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಅವರ ಪತ್ನಿ ರಾಬ್ರಿ ದೇವಿ, ಮಗ ತೇಜಶ್ವಿ ಯಾದವ್ ಮತ್ತು ಇತರ ಆರೋಪಿಗಳಿಗೆ ಐಆರ್ಸಿಟಿಸಿ ಹಗರಣದಲ್ಲಿ ದೆಹಲಿ ಪಟೀಯಾಲ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. 

ಐಆರ್ಸಿಟಿಸಿ ಹಗರಣದಲ್ಲಿ ಆರೋಪಿಗಳಾಗಿದ್ದ ಎಲ್ಲರಿಗೂ ಈಗ ಪಟೀಯಾಲ ಹೌಸ್ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.ಪ್ರಕರಣದ ವಿಚಾರಣೆ ನವೆಂಬರ್ 19 ರಂದು ನ್ಯಾಯಾಲಯವು ನಿಗದಿಪಡಿಸಿದೆ. 

ಸಿಬಿಐ ಮತ್ತು ಇಡಿ ಸಲ್ಲಿಸಿದ ಪ್ರಕರಣಗಳಲ್ಲಿ ನವೆಂಬರ್ 19 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಅವರನ್ನು ಹಾಜರಿರಲು ದೆಹಲಿ ನ್ಯಾಯಾಲಯ ಆದೇಶಿಸಿದೆ.ಕೋರ್ಟ್ ಆದೇಶದಂತೆ ಆರೋಪಿಗಳೆಲ್ಲರೂ 1 ಲಕ್ಷ ರೂ ವೈಯಕ್ತಿಕ ಬಾಂಡ್ ನ್ನು ಕೋರ್ಟ್ ಬಳಿ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ.

ಐಆರ್ಟಿಟಿಸಿ ಹಗರಣ ಪ್ರಕರಣದಲ್ಲಿ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ತೇಜಶ್ವಿ ಯಾದವ್ ಅವರನ್ನು ಹೆಸರಿಸಲಾಗಿದೆ.ಏಪ್ರಿಲ್ 16 ರಂದು ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಲ್ಲಿಸಿದ್ದು, ಲಾಲು, ರಾಬ್ರಿ, ತೇಜಶ್ವಿ ಮತ್ತಿತರರಿಗೆ ವಿರುದ್ದ ಹಗರಣದ ವಿರುದ್ದ ಸಾಕಷ್ಟು ಪುರಾವೆಗಳಿವೆ ಎಂದು ತಿಳಿದು ಬಂದಿದೆ.

Trending News