ಜೈ ಶ್ರೀರಾಮ್ ಘೋಷಣೆಗೆ ಅಡ್ಡಿ ಪಡಿಸಿದ್ದು ಮಮತಾ ಬ್ಯಾನರ್ಜೀ ತಪ್ಪು ನಿರ್ಧಾರ- ಹಿಮಾಂತ್ ಶರ್ಮಾ

 ಮುಂಬರುವ ದಿನಗಳಲ್ಲಿ ಬಿಜೆಪಿ ತಮಿಳುನಾಡು, ಕೇರಳ ಹಾಗೂ ಈಶಾನ್ಯ ಭಾಗಗಳಲ್ಲಿ ಬಿಜೆಪಿ ವಶಪಡಿಸಿಕೊಳ್ಳಲಿದೆ ಎಂದು ಬಿಜೆಪಿ ನಾಯಕ ಹಿಮಾಂತ್ ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಬಂಗಾಳದಲ್ಲಿ ಜೈ ಶ್ರೀರಾಮ್ ಘೋಷಣೆಗೆ ಮುಖ್ಯಮಂತ್ರಿ ಅಡ್ಡಿ ಪಡಿಸಿದ್ದು ತಪ್ಪು ನಿರ್ಧಾರ ಎಂದು ಹೇಳಿದರು.

Last Updated : May 24, 2019, 04:35 PM IST
ಜೈ ಶ್ರೀರಾಮ್ ಘೋಷಣೆಗೆ ಅಡ್ಡಿ ಪಡಿಸಿದ್ದು ಮಮತಾ ಬ್ಯಾನರ್ಜೀ ತಪ್ಪು ನಿರ್ಧಾರ- ಹಿಮಾಂತ್ ಶರ್ಮಾ  title=
file photo

ನವದೆಹಲಿ:  ಮುಂಬರುವ ದಿನಗಳಲ್ಲಿ ಬಿಜೆಪಿ ತಮಿಳುನಾಡು, ಕೇರಳ ಹಾಗೂ ಈಶಾನ್ಯ ಭಾಗಗಳಲ್ಲಿ ಬಿಜೆಪಿ ವಶಪಡಿಸಿಕೊಳ್ಳಲಿದೆ ಎಂದು ಬಿಜೆಪಿ ನಾಯಕ ಹಿಮಾಂತ್ ಬಿಸ್ವಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಬಂಗಾಳದಲ್ಲಿ ಜೈ ಶ್ರೀರಾಮ್ ಘೋಷಣೆಗೆ ಮುಖ್ಯಮಂತ್ರಿ ಅಡ್ಡಿ ಪಡಿಸಿದ್ದು ತಪ್ಪು ನಿರ್ಧಾರ ಎಂದು ಹೇಳಿದರು.

ಈಶ್ಯಾನ್ಯ ಭಾಗದಲ್ಲಿ ಬಿಜೆಪಿ ಉಸ್ತುವಾರಿಯನ್ನು ವಹಿಸಿಕೊಂಡಿರುವ ಹಿಮಾಂತ ಬಿಸ್ವಾ ಶರ್ಮಾ ಖಾಸಗಿ ಚಾನಲ್ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ " ಬಂಗಾಳದ ಜನರು ಮಮತಾ ವಿರುದ್ಧ ಆಕ್ರೋಶಕೊಂಡಿದ್ದಾರೆ. ಯಾವಾಗ  ಅವರು ಜೈ ಶ್ರೀರಾಮ್ ಘೋಷಣೆ ಕೂಗುವ ಹಾಗಿಲ್ಲ ಎಂದರೊ ಆಗಲೇ ಅದು ಅಂತಿಮ ಕ್ಲೈಮ್ಯಾಕ್ಸ್ ಆಗಿತ್ತು.ಆದೇಗೆ ನೀವು  ಜೈ ಶ್ರೀರಾಮ್ ಘೋಷಣೆ ಕೂಗುವ ಹಾಗಿಲ್ಲ?  ಅವರು ನಮ್ಮ ಭಾರತೀಯ ನಾಗರೀಕತೆ ಹೀರೋ, ಇದೇ ಬಿಜೆಪಿ ತಿರುವು ನೀಡಿದ ಘಟನೆ  " ಎಂದು ಹೇಳಿದರು.

ಬಿಜೆಪಿ 300 ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಸಹ ಕೇರಳಾ ಮತ್ತು ತಮಿಳುನಾಡಿನಲ್ಲಿ ಇದುವರೆಗೆ ಅಂತಹ ಗಮನಾರ್ಹ ಪ್ರದರ್ಶನವನ್ನು ನೀಡಿಲ್ಲ. 1971ರಲ್ಲಿ ಇಂದಿರಾ ಗಾಂಧಿ ನಂತರ ಪ್ರಧಾನಿ ಮೋದಿ ಸತತವಾಗಿ ಎರಡನೇ ಅವಧಿ ಪೂರ್ಣ ಬಹುಮತವನ್ನು ಪಡೆದ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.   

  

 

Trending News