ಆಗಸ್ಟ್ 5ರಂದು ಭಾರತದ ಬುಡಕಟ್ಟು ಪರಂಪರೆಯ ಆಚರಣೆ: Zee Media ಸಹಕಾರದೊಂದಿಗೆ ‘ಜಂಜಾಟಿ ವಿಕಾಸ್’ ಸಂಭ್ರಮ

Janjatiya Vikas: ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ, ಪ್ರಗತಿ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಆಚರಿಸಲು Zee Mediaವು ಇದೇ ಆಗಸ್ಟ್ 5ರಂದು ಸಂಜೆ 7 ಗಂಟೆಗೆ ದೆಹಲಿಯ ಇಂಡಿಯಾ ಗೇಟ್‍ ಬಳಿ ಇರುವ ಸೆಂಟ್ರಲ್ ವಿಸ್ಟಾದಲ್ಲಿ ಬುಡಕಟ್ಟು ಸಾಂಸ್ಕೃತಿಕ ರಾತ್ರಿ(Tribal Cultural Night) ಆಯೋಜಿಸಲಿದೆ.

Written by - Zee Kannada News Desk | Last Updated : Aug 3, 2023, 12:44 PM IST
  • ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಆಗಸ್ಟ್ 5ರಂದು ಭಾರತದ ಬುಡಕಟ್ಟು ಪರಂಪರೆಯ ಆಚರಣೆ
  • Zee Media ಸಹಕಾರದೊಂದಿಗೆ ಸಂಸ್ಕೃತಿ ಸಚಿವಾಲಯದಿಂದ ‘ಆಜಾದಿ ಕಾ ಅಮೃತ್ ಮಹೋತ್ಸವ’ದಡಿ 'ಜಂಜಾಟಿಯ ವಿಕಾಸ್'
  • ಬುಡಕಟ್ಟು ಸಮುದಾಯದ ಉನ್ನತಿ & ಸಬಲೀಕರಣಕ್ಕಾಗಿ ಆಯೋಜಿಸುತ್ತಿರುವ ಮೊದಲ 360 ಡಿಗ್ರಿ ಕಾರ್ಯಕ್ರಮ
ಆಗಸ್ಟ್ 5ರಂದು ಭಾರತದ ಬುಡಕಟ್ಟು ಪರಂಪರೆಯ ಆಚರಣೆ: Zee Media ಸಹಕಾರದೊಂದಿಗೆ ‘ಜಂಜಾಟಿ ವಿಕಾಸ್’ ಸಂಭ್ರಮ title=
Zee Media ಸಹಕಾರದೊಂದಿಗೆ 'ಜಂಜಾಟಿಯ ವಿಕಾಸ್'

ನವದೆಹಲಿ: ಬುಡಕಟ್ಟು ಸಬಲೀಕರಣವು ‘ಆಜಾದ್ ಕಾ ಅಮೃತ್ ಮಹೋತ್ಸವ’ದ ಪ್ರಾಥಮಿಕ ಅಂಶಗಳಲ್ಲಿ ಒಂದಾಗಿದೆ. ಇದು ಬುಡಕಟ್ಟು ಸಂಸ್ಕೃತಿಯ ಸಂರಕ್ಷಣೆ, ಅಂತರ್ಗತ ಅಭಿವೃದ್ಧಿ, ಜೀವನೋಪಾಯದ ಅವಕಾಶಗಳು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂವೇದನೆಯ ಮೇಲೆ ಒತ್ತು ನೀಡುತ್ತದೆ. Zee Media ಸಹಕಾರದೊಂದಿಗೆ ಸಂಸ್ಕೃತಿ ಸಚಿವಾಲಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ವು 'ಜಂಜಾಟಿಯ ವಿಕಾಸ್' ಕಾರ್ಯಕ್ರಮ ಆಯೋಜಿಸುವುದಾಗಿ ಘೋಷಿಸಿತು. ಇದು ಇಡೀ ಬುಡಕಟ್ಟು ಸಮುದಾಯದ ಉನ್ನತಿ ಮತ್ತು ಸಬಲೀಕರಣಕ್ಕಾಗಿಯೇ ಆಯೋಜಿಸುತ್ತಿರುವ ಮೊದಲನೆ 360-ಡಿಗ್ರಿ ಅಭಿಯಾನದ ಕಾರ್ಯಕ್ರಮವಾಗಿದೆ.

ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ, ಪ್ರಗತಿ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಆಚರಿಸಲು Zee Mediaವು ಇದೇ ಆಗಸ್ಟ್ 5 ರಂದು ಸಂಜೆ 7 ಗಂಟೆಗೆ ದೆಹಲಿಯ ಇಂಡಿಯಾ ಗೇಟ್‍ ಬಳಿ ಇರುವ ಸೆಂಟ್ರಲ್ ವಿಸ್ಟಾದಲ್ಲಿ ಬುಡಕಟ್ಟು ಸಾಂಸ್ಕೃತಿಕ ರಾತ್ರಿ(Tribal Cultural Night) ಆಯೋಜಿಸಲಿದೆ. ಈ ಭವ್ಯ ಸಮಾರಂಭವು ಬುಡಕಟ್ಟು ಸಂಗೀತ, ನೃತ್ಯ ಮತ್ತು ಫ್ಯಾಷನ್ ಶೋಗಳ ಸಮ್ಮಿಲನವಾಗಿರಲಿದೆ. ಮುಂಬರುವ ಗ್ಲಿಟ್ಜಿ(glitzy) ಮತ್ತು ಸ್ಟಾರಿ ನೈಟ್ ಫ್ಯಾಶನ್ ಶೋನಲ್ಲಿ ಬುಡಕಟ್ಟು ಉಡುಪುಗಳನ್ನು ಪ್ರದರ್ಶನವಿರುತ್ತದೆ.

ಮುಂಬರುವ ಆನ್-ಗ್ರೌಂಡ್ ಈವೆಂಟ್ ಬುಡಕಟ್ಟು ಸಮುದಾಯಗಳ ಶ್ರೀಮಂತ ಸಂಸ್ಕೃತಿಯ ಬಗ್ಗೆ ಸಾರಿ ಹೇಳುವ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಸಮುದಾಯ, ಬುಡಕಟ್ಟು ಸ್ವಸಹಾಯ ಸಂಘಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳು ಮುಖ್ಯವಾಹಿನಿಯ ಜನಸಂಖ್ಯೆಯೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಲಿದೆ.

‘ಜಂಜಾಟಿಯ ವಿಕಾಸ’ ಉಪಕ್ರಮದ ಮೂಲಕ ಬುಡಕಟ್ಟು ಸಮುದಾಯಗಳ ಹೇಳಲಾಗದ ಹೋರಾಟದ ಕಥೆ(untold struggle stories)ಗಳನ್ನು ಹೈಲೈಟ್ ಮಾಡಲು ಯೋಜಿಸಿದೆ. ಭಾರತವನ್ನು ಸಾಂಸ್ಕೃತಿಕ ಶ್ರೀಮಂತ ದೇಶವಾಗಿ ಮಾಡುವಲ್ಲಿ ಅವರು ವಹಿಸುವ ಮಹತ್ವದ ಪಾತ್ರದ ಕುರಿತು ಯುವಕರಿಗೆ ಶಿಕ್ಷಣ ಮತ್ತು ತಿಳಿಸಲು ಉದ್ದೇಶಿಸಲಾಗಿದೆ. ಹಲವಾರು ಇತರ ಡಿಜಿಟಲ್ ಮತ್ತು ಆನ್-ಗ್ರೌಂಡ್ ಅಂಶಗಳು ಈ ಅಭಿಯಾನವನ್ನು ಉತ್ತಮ ಯಶಸ್ಸಿಗೆ ಕೊಡುಗೆ ನೀಡಲಿವೆ.

ಈ ಪ್ರಮುಖ ಉಪಕ್ರಮದ ಕುರಿತು ಮಾತನಾಡಿರುವ ಕೇಂದ್ರ ಸರ್ಕಾರದ ಸಂಸ್ಕೃತಿ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ‘ಜಂಜಾಟಿಯ ವಿಕಾಸ್ ಅಭಿಯಾನ’ವು ಭಾರತದ ನಾಗರಿಕರನ್ನು ಸಂಪೂರ್ಣ ಬುಡಕಟ್ಟು ಸಮುದಾಯ ಸಬಲೀಕರಣದ ಕಡೆಗೆ ತೊಡಗಿಸಿಕೊಳ್ಳುವ ಏಕೈಕ ಉದ್ದೇಶದಿಂದ ಪರಿಕಲ್ಪನೆಯಾಗಿದೆ. ನಮ್ಮ ಸಮಾಜದಲ್ಲಿ ಬುಡಕಟ್ಟು ಸಮುದಾಯವು ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ, ಭಾರತದ ಪ್ರತಿಯೊಬ್ಬ ನಾಗರಿಕನು ಭಾರತದ ಭವ್ಯವಾದ ಬುಡಕಟ್ಟು ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮುಂದೆ ಬರಬೇಕು’ ಎಂದು ಸಹಲೆ ನೀಡಿದರು.

ಇಂಡಿಯಾಡಾಟ್‌ಕಾಮ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್‌ನ ಸಿಆರ್‌ಒ ಶ್ರೀಧರ್ ಮಿಶ್ರಾ ಮಾತನಾಡಿ, ‘ಜಂಜಾಟಿಯ ವಿಕಾಸ್’ ಅಭಿಯಾನದ ಪ್ರಾರಂಭದೊಂದಿಗೆ, ಝೀ ಮೀಡಿಯಾವು ಬುಡಕಟ್ಟು ಸಮುದಾಯದ ಸಂಬಂಧವನ್ನು ಬಲಪಡಿಸಲು ಮತ್ತು ರಾಷ್ಟ್ರದೊಂದಿಗೆ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ವಿಶಿಷ್ಟ ಉಪಕ್ರಮಕ್ಕೆ ನಾವು 360 ಡಿಗ್ರಿ ಮಾರ್ಕೆಟಿಂಗ್ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ, ಹೀಗಾಗಿ ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ, ಪ್ರಗತಿ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಆಚರಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದರು. ಸ್ಥಳೀಯ ಬುಡಕಟ್ಟುಗಳ ಪರಂಪರೆ ಮತ್ತು ಅವರ ಪ್ರಾಚೀನ ಸಂಪ್ರದಾಯಗಳು, ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಅಭಿವೃದ್ಧಿಯನ್ನು ವೀಕ್ಷಿಸಲು ನೀವೂ ಸಹ ಸಿದ್ಧರಾಗಿ.

ಇಂಡಿಯಾಡಾಟ್ಕಾಮ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ಬಗ್ಗೆ

ಇಂಡಿಯಾಡಾಟ್ಕಾಮ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್ (formerly Zee Digital) ಭಾರತದಲ್ಲಿನ ಅತಿದೊಡ್ಡ ಡಿಜಿಟಲ್ ಮಾಧ್ಯಮ ಪ್ರಕಾಶನ ಕಂಪನಿಯಾಗಿದೆ. 32ಕ್ಕೂ ಹೆಚ್ಚು digital propertiesಗಳೊಂದಿಗೆ IDPLನ ವಿಶಿಷ್ಟ ಡಿಜಿಟಲ್ ಉತ್ಪನ್ನಗಳು ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಇದರಲ್ಲಿ ಸೇರಿವೆ. ರಾಜ್ಯ, ದೇಶ-ವಿದೇಶದ ಜನರಿಗೆ ಗುಣಮಟ್ಟದ ಸುದ್ದಿಗಳನ್ನು ನೀಡುವ ಗುರಿಯೊಂದಿಗೆ ಉತ್ಕೃಷ್ಟ ಸೇವೆಯನ್ನು ಒದಗಿಸಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News