ಪ್ರಧಾನಿ ಹುದ್ದೆಗೆ ಕೆಸಿಆರ್ ಉತ್ತಮ ಆಯ್ಕೆ: ಅಸಾದುದ್ದೀನ್ ಓವೈಸಿ

ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಿಂತ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ ಎಂದು ಅಸಾದುದ್ದೀನ್ ಓವೈಸಿ ಅಭಿಪ್ರಾಯಪಟ್ಟಿದ್ದಾರೆ.

Last Updated : Apr 2, 2019, 04:13 PM IST
ಪ್ರಧಾನಿ ಹುದ್ದೆಗೆ ಕೆಸಿಆರ್ ಉತ್ತಮ ಆಯ್ಕೆ: ಅಸಾದುದ್ದೀನ್ ಓವೈಸಿ title=

ಹೈದರಾಬಾದ್: ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಟೀಕಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗಿಂತ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ ಎಂದಿದ್ದಾರೆ.

ಭಾನುವಾರ ರಾತ್ರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಎರಡೂ ರಾಷ್ಟ್ರೀಯ ಪಕ್ಷಗಳೂ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. "ಆ ದೇವರು ಏನು ನಿರ್ಧರಿಸುತ್ತಾನೋ, ಜನತೆ ಏನು ನಿರ್ಧರಿಸುತ್ತಾರೋ ನನಗೆ ತಿಳಿದಿಲ್ಲ. ಆದರೆ ಈ ಮೂವರಲ್ಲಿ ಆಯ್ಕೆ ಮಾಡುವಂತೆ ಹೇಳಿದರೆ, ಕೆಸಿಆರ್ ಹೆಚ್ಚು ಅರ್ಹರು ಎಂಬುದು ನನ್ನ ಅಭಿಪ್ರಾಯ. ಅವರಿಗೆ ಭಾರತೀಯ ಸಂವಿಧಾನದ ಬಗ್ಗೆ ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿಗಿಂತ ಹೆಚ್ಚಿನ ಅರಿವಿದೆ. 

ತೆಲಂಗಾಣದಲ್ಲಿ 17 ಲೋಕಸಭಾ ಸ್ಥಾನಗಳನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಎಐಐಐಎಂ ಗಳಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಸಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಈ ಬೆಳವಣಿಗೆ ತೆಲಂಗಾಣಕ್ಕೆ ವರದಾನವಾಗಲಿದೆ ಎಂದರು.
 

Trending News