Suicide prevention: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸೀಲಿಂಗ್ ಫ್ಯಾನ್‌ಗೆ ಡಿವೈಸ್ ಅಳವಡಿಕೆ!

Student Suicide: ಸೀಲಿಂಗ್ ಫ್ಯಾನ್‍ಗೆ ‘ಸ್ಟ್ರಿಂಗ್ ಡಿವೈಸ್’ ಅಳವಡಿಸಿದರೆ ಅದು 20 ಕೆಜಿಗಿಂತ ಹೆಚ್ಚು ತೂಕದ ವಸ್ತು ನೇತುಬಿದ್ದರೆ ಹಿಗ್ಗುತ್ತದೆ ಮತ್ತು ಸೈರನ್ ಸಹ ಮೊಳಗುತ್ತದೆ. ಹೀಗಾಗಿ ಈ ಡಿವೈಸ್ ಅಳವಡಿಸಿದ ಸೀಲಿಂಗ್ ಫ್ಯಾನ್‍ಗೆ ಯಾರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

Written by - Puttaraj K Alur | Last Updated : Aug 20, 2023, 03:08 PM IST
  • ರಾಜಸ್ಥಾನದ ಕೋಟಾದಲ್ಲಿ 2023ರ ಜನವರಿಯಿಂದ ಇಲ್ಲಿವರೆಗೆ 21 ವಿದ್ಯಾರ್ಥಿಗಳು ಆತ್ಮಹತ್ಯೆ
  • ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ವಿಶೇಷ ತಂತ್ರ ರೂಪಿಸಿದ ರಾಜಸ್ಥಾನದ ಕೋಟಾ ಜಿಲ್ಲಾಡಳಿತ
  • ಪಿಜಿ ಮತ್ತು ಹಾಸ್ಟೆಲ್‍ಗಳಲ್ಲಿರುವ ಸೀಲಿಂಗ್ ಫ್ಯಾನ್‍ಗಳಿಗೆ ‘ಸ್ಟ್ರಿಂಗ್ ಡಿವೈಸ್’ ಅಳವಡಿಸುವಂತೆ ಸೂಚನೆ
Suicide prevention: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸೀಲಿಂಗ್ ಫ್ಯಾನ್‌ಗೆ ಡಿವೈಸ್ ಅಳವಡಿಕೆ! title=
ಸೀಲಿಂಗ್ ಫ್ಯಾನ್‍ಗಳಿಗೆ ‘ಸ್ಟ್ರಿಂಗ್ ಡಿವೈಸ್’

ನವದೆಹಲಿ: ರಾಜಸ್ಥಾನದ ಕೋಟಾದಲ್ಲಿ 2023ರ ಜನವರಿಯಿಂದ ಇಲ್ಲಿವರೆಗೆ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿಯೇ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಿಕ್ಷೀತ ಯಶಸ್ಸು ಸಿಗದ ಕಾರಣ ಹಾಗೂ ಪರೀಕ್ಷಾ ಒತ್ತಡದ ಕಾರಣದಿಂದ ಪಿಜಿ ಮತ್ತು ಹಾಸ್ಟೆಲ್‍ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ರಾಜಸ್ಥಾನ ಸರ್ಕಾರವು ವಿಶೇಷ ತಂತ್ರವೊಂದನ್ನು ರೂಪಿಸಿದೆ.

ಇದನ್ನೂ ಓದಿ: Photo Gallery: ತಂದೆಯ ಹುಟ್ಟುಹಬ್ಬದಂದು ಲಡಾಖ್ ಗೆ ಬೈಕ್ ಸವಾರಿ ಹೊರಟ ರಾಹುಲ್ ಗಾಂಧಿ..!

ಹೌದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ತಾಣಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಯು ರಾಜಸ್ಥಾನ ಸರ್ಕಾರಕ್ಕೆ ತೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋಟಾ ಜಿಲ್ಲಾಡಳಿತವು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಪ್ರತಿಯೊಂದು ಸೀಲಿಂಗ್ ಫ್ಯಾನ್‍ಗಳಲ್ಲಿ ಕಡ್ಡಾಯಾಗಿ ‘ಸ್ಟ್ರಿಂಗ್ ಡಿವೈಸ್’ ಅಳವಡಿಸುವಂತೆ ಹಾಸ್ಟೆಲ್ ಮತ್ತು ಪಿಜಿ ಮಾಲೀಕರಿಗೆ ಸೂಚಿಸಿದೆ.   

ಸೀಲಿಂಗ್ ಫ್ಯಾನ್‌ಗಳಲ್ಲಿ ‘ಸ್ಪ್ರಿಂಗ್ ಡಿವೈಸ್’ ಅಳವಡಿಸುವಂತೆ ಕೋಟಾ ಉಪ ಆಯುಕ್ತ ಒಪಿ ಬುನಕರ್, ಎಲ್ಲಾ ಪಿಜಿ ಮತ್ತು ಹಾಸ್ಟೆಲ್‍ ಮಾಲೀಕರಿಗೆ ಆದೇಶಿಸಿದ್ದಾರೆ. ಒಂದು ವೇಳೆ ಸಾಧನವನ್ನು ಅಳವಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

ಇದನ್ನೂ ಓದಿ: ಲಡಾಖ್ ನಲ್ಲಿ ನದಿಗೆ ವಾಹನ ಬಿದ್ದು ಒಂಬತ್ತು ಸೈನಿಕರ ಸಾವು 

ಸೀಲಿಂಗ್ ಫ್ಯಾನ್‍ಗೆ ‘ಸ್ಟ್ರಿಂಗ್ ಡಿವೈಸ್’ ಅಳವಡಿಸಿದರೆ ಅದು 20 ಕೆಜಿಗಿಂತ ಹೆಚ್ಚು ತೂಕದ ವಸ್ತು ನೇತುಬಿದ್ದರೆ ಹಿಗ್ಗುತ್ತದೆ ಮತ್ತು ಸೈರನ್ ಸಹ ಮೊಳಗುತ್ತದೆ. ಹೀಗಾಗಿ ಈ ಡಿವೈಸ್ ಅಳವಡಿಸಿದ ಸೀಲಿಂಗ್ ಫ್ಯಾನ್‍ಗೆ ಯಾರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News