Dear Zindagi: ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸುವುದು ವಿದ್ಯಾರ್ಥಿಗಳ ವೈಫಲ್ಯವೇ?

ನೆನಪಿಡಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ, 'ಮಗುವು ವಿಫಲಗೊಳ್ಳುವುದಿಲ್ಲ, ಶಾಲೆಯು ವಿಫಲವಾಗಿದೆ. ಮಕ್ಕಳು ಯಾವಾಗಲೂ ಗಮ್ಯಸ್ಥಾನವನ್ನು ತಲುಪುತ್ತಾರೆ, ಅವರು ಎಲ್ಲಿಗೆ ಹೋಗಬೇಕೆಂದು ನಾವು ಹೇಳಬಹುದು ಮತ್ತು ಇದು ನಮ್ಮ ಕೆಲಸವೇ ಹೊರತು ಮಕ್ಕಳ ಕೆಲಸವಲ್ಲ.

Written by - Dayashankar Mishra | Last Updated : Jul 26, 2018, 04:08 PM IST
Dear Zindagi: ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸುವುದು ವಿದ್ಯಾರ್ಥಿಗಳ ವೈಫಲ್ಯವೇ? title=

ಲೇಖಕರು- ದಯಾಶಂಕರ್ ಮಿಶ್ರ

ಮೊಬೈಲ್, ಫೇಸ್ಬುಕ್ ಮತ್ತು ವೃತ್ತಪತ್ರಿಕೆ ಹೀಗೆ ಎಲ್ಲಿ ನೋಡಿದರೂ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿರುವ ಪ್ರತಿಭಾವಂತ ಮಕ್ಕಳ ವಿಷಯಗಳೇ ತುಂಬಿದೆ. ಅಭಿನಂದನೆಗಳು, ಇಂತಹ ಮಕ್ಕಳನ್ನು ಆಕಾಶದಲ್ಲಿ ತೇಲುವಂತೆ ಮಾಡಿವೆ. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಒಂದು ಮಗು ಅದರಲ್ಲಿಯೂ ಉತ್ತಮ ಅಂಕ ಗಳಿಸಲು ಶಕ್ತವಾಗದ ಮಕ್ಕಳು ಯಾವಾಗಲೂ ಅವರು ಮಾಡದ ತಪ್ಪಿಗೆ ತೊಂದರೆ ಅನುಭವಿಸುತ್ತಾರೆ. ಅಷ್ಟಕ್ಕೂ ಆ ವಿದ್ಯಾರ್ಥಿ ಕಡಿಮೆ ಅಂಕಗಳಿಸಲು ಕಾರಣವೇನು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕಿರುವುದು ಮುಖ್ಯ.

ಉತ್ತಮ ಅಂಕಗಳಿಸಿರುವ ಮಗುವಿನೊಂದಿಗೆ ಕಡಿಮೆ ಅಂಕಗಳಿಸಿರುವ ಮಗುವನ್ನು ಹೇಗೆ ಹೋಲಿಕೆ ಮಾಡಬಹುದು. ಯಾರೂ ಸಮಯವನ್ನು/ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ? ಕಡಿಮೆ ಅಂಕ ಗಳಿಸಿದ ಮಗುವನ್ನು ಉತ್ತಮ ಅಂಕ ಗಳಿಸಿದ ಮಗುವಿಗಿಂತ ಕಡಿಮೆ ಎಂದು ಹೇಳಲು ಕಷ್ಟವಾಗುತ್ತದೆ. ಇತಿಹಾಸ, ವಿಜ್ಞಾನ, ಸಂಶೋಧನೆ, ರಾಜಕೀಯ, ಕಲೆ ಮತ್ತು ಸಿನೆಮಾಗಳಲ್ಲಿ ಕಡಿಮೆ ಅಂಕಗಳಿಸಿರುವವರು ನೀಡಿರುವಷ್ಟು ಕೊಡುಗೆಗಳನ್ನು ಉತ್ತಮ ಅಂಕ ಗಳಿಸಿದವರು ನೀಡಿರುವ ಉದಾಹರಣೆಗಳು ಕಡಿಮೆ. ಈ ವಿಷಯ ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಅತಿದೊಡ್ಡ ದೇಶಗಳೂ ಸಹ ಇದಕ್ಕೆ ಸಾಕ್ಷಿಯಾಗಿವೆ. 

ಮಕ್ಕಳು ಶಾಲೆಯಲ್ಲಿ ಮಾತ್ರ ವಿಫಲವಾಗುತ್ತಾರೆ ಎಂಬುದಕ್ಕೆ ನೋಬಲ್ ಸ್ವೀಕರಿಸುವವರ ಪಟ್ಟಿ ಎರಡನೆಯ ಅತಿದೊಡ್ಡ ಪುರಾವೆಯಾಗಿದೆ. ಸಮಸ್ಯೆಯು ಶಾಲಾ ಪರೀಕ್ಷೆಯ ವ್ಯವಸ್ಥೆಯಲ್ಲಿದೆ. ಈ ಲೇಖನ ಉತ್ತಮ ಅಂಕ ಗಳಿಸಿದವರಿಗಾಗಿಯಲ್ಲ. ಉತ್ತಮ ಅಂಕಗಳಿಸಿರುವವರಿಗೆ ಸಮಾಜ ಕೈಬೀಸಿ ಕರೆಯುತ್ತದೆ. ಆದರೆ ಯಾರ ಕಣ್ಣುಗಳು ತಮ್ಮ ಹೆಗಲ ಮೇಲಿದೆಯೋ, ಯಾರು ತಮ್ಮನ್ನು ತಾವು ಕಳೆದುಕೊಂಡಂತೆ ಭಾವಿಸುತ್ತಿದ್ದಾರೋ ಅವರಿಗಾಗಿ ಈ ಲೇಖನ.

ಸಹೋದ್ಯೋಗಿ ಪತ್ರಕರ್ತ ಪಿಯೂಷ್ ಬಾಬೆಲ್ ಅವರು ಸುಂದರವಾಗಿ ಬರೆದಿದ್ದಾರೆ: "ಸಿಬಿಎಸ್ಇಯ ಫಲಿತಾಂಶವು ಅನೇಕ ಮಕ್ಕಳು ಉತ್ತಮ ಶ್ರೇಯಾಂಕ ಗಳಿಸಿದ್ದರೆ ಮತ್ತು ಬಹಳಷ್ಟು ಮಕ್ಕಳು ನಿರೀಕ್ಷೆಗಿಂತಲೂ ಕಡಿಮೆ ಅಂಕ ಗಳಿಸಿದ್ದಾರೆ. ಯಾರು ಕಡಿಮೆ ಅಂಕಗಳಿಸಿರುವರೋ ನಾನು ಅವರಲ್ಲಿ ಆಶಾದಾಯಕನಾಗಿದ್ದೇನೆ. ಏಕೆಂದರೆ ಕಳೆದ 70 ವರ್ಷಗಳಲ್ಲಿ ದೇಶಕ್ಕೆ ಟಾಪರ್ಸ್ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಹೌದು, ಟಾಪರ್ ಗಳು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಕಡಿಮೆ ಅಂಕಗಳಿಸಿರುವವರಿಗೆ ನನ್ನ ಅಭಿನಂದನೆಗಳು. ಏಕೆಂದರೆ ದೇಶ ಮತ್ತು ಸಮಾಜಕ್ಕೆ ಅವರಿಂದ ಹೆಚ್ಚು ಭರವಸೆಗಳಿವೆ."

ಈ ವಿಷಯವನ್ನು ಸಿದ್ಧಾಂತವೆಂದು ಯೋಚಿಸಬೇಡಿ. ಜೀವನದ ಓಟ ಕ್ರೂರವಾಗಿದೆ. ತೀವ್ರ ಸ್ಪರ್ಧೆಯಲ್ಲಿ ಮಗುವು ಹೇಗೆ ಬದುಕುಳಿಯುತ್ತಾನೆ? ವಾಸ್ತವವಾಗಿ, ಮನುಷ್ಯ ಮತ್ತು ಮನುಷ್ಯತ್ವ ಎರಡೂ ಅನುಮಾನದ ಕುದುರೆಗಳನ್ನು ಹೊತ್ತು ಓಡುತ್ತವೆ ಎಂದು ಹೇಳಲಾಗುತ್ತದೆ. 10ನೇ ಮತ್ತು 12ನೇ ತರಗತಿ ಪರೀಕ್ಷೆ ನಿಜವಾಗಿಯೂ ಒಂದು ಮೈಲಿಗಲ್ಲು ಅಲ್ಲ. ಇದು ನಮ್ಮ ಹಳೆಯ, ಕೊಳೆಯುತ್ತಿರುವ ವ್ಯವಸ್ಥೆಯ ಕೊರತೆಯಿಂದಾಗಿ, ಮಕ್ಕಳ ಪ್ರತಿಭೆಯನ್ನು ಮುಂದಕ್ಕೆ ತರಲು ಇನ್ನೂ ಬೇರೆ ರೀತಿ ಸಿಕ್ಕಿಲ್ಲ.

ಅದಕ್ಕಾಗಿಯೇ ಸರ್ಕಾರ, ಸಮಾಜ ಮತ್ತು ಶಾಲೆಗಳು ತಮ್ಮ ಹಳೆಯ ಚಿಂತನೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಾವು ಪ್ರಪಂಚದ ದೇಶಗಳನ್ನು ನೋಡುತ್ತಿಲ್ಲ, ದಶಕಗಳ ನಂತರವೂ ಶಾಲೆಗಳು ಹಿಂದೆ ಪಾಲಿಸುತ್ತಿದ್ದ ನಿಯಮವನ್ನು ಇನ್ನೂ ಮುಂದುವರೆಸುತ್ತಿವೆ. ಆ ಅಮೆರಿಕನ್ ಕಾಲೇಜುಗಳ ಬಗ್ಗೆ ನಾವು ಕಣ್ಣು ಮತ್ತು ಕಿವಿಗಳನ್ನು ಮುಚ್ಚಿದ್ದೇವೆ. ಅಲ್ಲಿ ನಿಮ್ಮ ಆಸಕ್ತಿಯ ವಿಷಯಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗುತ್ತದೆ. ಐಡಲ್ ವಿಷಯಗಳಲ್ಲಿ ಸಮಯವನ್ನು ಕಳೆಯಬೇಡಿ, ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಿ.

ಬ್ರಿಟಿಷರ ಅವಧಿಯು ದೀರ್ಘಕಾಲವಾಗಿತ್ತು. ತಲೆಮಾರುಗಳು ಬದಲಾಗಿದೆ. ಆದರೆ ಶಾಲೆಯ ನಿಯಮಗಳು ಮಾತ್ರ ಹಾಗೆ ಉಳಿದಿದೆ. ಶಿಕ್ಷಣದ ರೈಲುಮಾರ್ಗವು ಬ್ರಿಟಿಷರು ಹಾಕಿದ ಒಂದೇ ಹಾದಿಯಲ್ಲಿ ನಡೆಯಿತು. ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಕೂರ್ ಶಾಂತಿನಿಕೇತನದ ಶಿಕ್ಷಣ ಪಠ್ಯಕ್ರಮದ ನಮ್ಮ ಹೆಜ್ಜೆಗುರುತುಗಳಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಆಯ್ಕೆ ಮಾಡಲಿಲ್ಲ. ಶಿಕ್ಷಣದ ಬಗ್ಗೆ ನಾವು ಗಾಂಧಿ, ಬುದ್ಧ ಮತ್ತು ಐನ್ ಸ್ಟೀನ್ ರನ್ನು ಕೇಳಲಿಲ್ಲ. ನಾವು ಕಟ್ಟಡದಲ್ಲಿ ಮಕ್ಕಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ.

ಕುಂಡಗಳಲ್ಲಿ ಸಸ್ಯಗಳನ್ನು ನಾಟಿ ಮಾಡುವ ಮೂಲಕ ಪರಿಸರವನ್ನು ಉಳಿಸಲು ಸಾಧ್ಯವಿಲ್ಲ. ಪರಿಸರ ಉಳಿಸಲು ಕಾಡು ಉಳಿಯಬೇಕು. ಹಾಗೆಯೇ, ಒಂದು ಹೊಸ, ವೈಜ್ಞಾನಿಕ ಚಿಂತನೆಯ ದೇಶವನ್ನು ಹಿರಿಯರಿಂದ ಸೃಷ್ಠಿ ಮಾಡಲಾಗುವುದಿಲ್ಲ. ಅಂತಹ ಸಮಾಜ ಮಕ್ಕಳಿಂದ ಸಿದ್ಧವಾಗಲಿದೆ. ಆದ್ದರಿಂದ, ಅಂಕಗಳ ಆಧಾರದ ಮೇಲೆ ಮಕ್ಕಳ ಜ್ಞಾನವನ್ನು ಅಳಿಯುವುದನ್ನು ನಿಲ್ಲಿಸಬೇಕಾಗುತ್ತದೆ. ಇದೊಂದು ದೊಡ್ಡ ಅಪರಾಧವಾಗಿದೆ.

ಆದ್ದರಿಂದ, ಇಂದಿನ ಅಂಕಗಳ ಪೈಪೋಟಿಯಿಂದ ಆತ್ಮಹತ್ಯೆಗೆ ಶರಣಾಗುವ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪ್ರಪಂಚ ಎಂಬ ಶಾಲೆಯನ್ನು ತಲುಪುವ ಮಾರ್ಗವು ದೂರವಿಲ್ಲ ಎಂದು ವಿವರಿಸಿ. ಯಾವಾಗಲೂ ನೆನಪಿಡಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ, 'ಮಗುವು ವಿಫಲಗೊಳ್ಳುವುದಿಲ್ಲ, ಶಾಲೆಯು ವಿಫಲವಾಗಿದೆ. ಮಕ್ಕಳಲ್ಲಿ ಯಾವಾಗಲೂ ಗಮ್ಯಸ್ಥಾನವನ್ನು ತಲುಪಿ, ಎಲ್ಲಿಗೆ ಹೋಗಬೇಕೆಂದು ಅವರಿಗೆ ಹೇಳಬಹುದು ಮತ್ತು ಇದು ನಮ್ಮ ಕೆಲಸವೇ ಹೊರತು ಮಕ್ಕಳ ಕೆಲಸವಲ್ಲ.

ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆ ವಿರುದ್ಧದ ಜೀವನ ಸಂವಾದದ ಹಿಂದಿ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ
https://twitter.com/dayashankarmi

https://www.facebook.com/dayashankar.mishra.54

Trending News