ಜೈಪುರದಲ್ಲಿ ಬೆಂಕಿ ಅವಘಡ, ತನಿಖೆ ಆರಂಭ

ಜೈಪುರದ ಎಂಟರ್ಟೈನ್ಮೆಂಟ್ ಪ್ಯಾರಡೈಸ್ ಮಲ್ಟಿಪ್ಲೆಕ್ಸ್ ಸಿನಿಮಾದ ಮದುವೆ ಆವರಣದಲ್ಲಿ ದೊಡ್ಡ ಬೆಂಕಿ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.   

Updated: Jan 12, 2018 , 04:26 PM IST
ಜೈಪುರದಲ್ಲಿ ಬೆಂಕಿ ಅವಘಡ, ತನಿಖೆ ಆರಂಭ

ಜೈಪುರ್ : ಇಲ್ಲಿನ ಎಂಟರ್ಟೈನ್ಮೆಂಟ್ ಪ್ಯಾರಡೈಸ್ ಮಲ್ಟಿಪ್ಲೆಕ್ಸ್ ಸಿನಿಮಾದ ಮದುವೆ ಆವರಣದಲ್ಲಿ ದೊಡ್ಡ ಬೆಂಕಿ ಅನಾಹುತ ಸಂಭವಿಸಿದೆ. ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಸುಮಾರು 20ಕ್ಕೂ ಅಧಿಕ ಅಗ್ನಿಶಾಮಕ ದಳದವರು ಬೆಂಕಿ ನಿಂದಿಸುವ ಪ್ರಯತ್ನದಲ್ಲಿದ್ದಾರೆ. 

ಮದುವೆ ಅಲಂಕಾರಕಾಗಿ ಬಳಸಿದ ವಿದ್ಯುತ್ ದೀಪಾಲಂಕಾರವೇ ಈ ಘಟನೆಗೆ ಕಾರಣ ಎಂದು ಸಹಾಯಕ ಅಗ್ನಿಶಾಮಕ ಅಧಿಕಾರಿ ಉಷಾ ಶರ್ಮಾ ತಿಳಿಸಿದ್ದಾರೆ. 

ಈ ಘಟನೆಯ ಬಳಿಕ, ಜೈಪುರ್ ಮೇಯರ್ ಅಶೋಕ್ ಲಹೋಟಿ ಮದುವೆ ಉದ್ಯಾನವನವನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸಲಾಗುತ್ತಿದೆ. 

ಅಲ್ಲದೆ, ಇತರ ವಿವಾಹ ಗಾರ್ಡನ್ ಗಳಲ್ಲಿ ಯಾವರೀತಿಯ ಅಗ್ನಿ ಅನಾಹುತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ತನಿಖಾ ತಂಡವು ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ. 

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತನಿಖಾಧಿಕಾರಿ ಮುನ್ಷಿಲ್ ಲಾಲ್ ತಿಳಿಸಿದ್ದಾರೆ. 

By continuing to use the site, you agree to the use of cookies. You can find out more by clicking this link

Close