ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!

ಜುಲೈ 2 ರಂದು ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ ದರೋಡೆಕೋರರು ಹಾಲಿವುಡ್ ಚಿತ್ರವನ್ನು ನೋಡಿ, ಅದರಲ್ಲಿದ್ದಂತೆ ಬ್ಯಾಂಕಿಗೆ ಕಣ್ಣ ಹಾಕಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

Last Updated : Jul 8, 2019, 01:15 PM IST
ಹಾಲಿವುಡ್ ಸಿನಿಮಾ ನೋಡಿ ಬ್ಯಾಂಕ್ ಲೂಟಿಗೆ ಖದೀಮರ ಪ್ಲಾನ್!  title=

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ. 

ಜುಲೈ 2 ರಂದು ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ ದರೋಡೆಕೋರರು ಹಾಲಿವುಡ್ ಚಿತ್ರವನ್ನು ನೋಡಿ, ಅದರಲ್ಲಿದ್ದಂತೆ ಬ್ಯಾಂಕಿಗೆ ಕಣ್ಣ ಹಾಕಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಇಡೀ ಘಟನೆ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದರಲ್ಲಿ ಮೊದಲ ಇಬ್ಬರು ವ್ಯಕ್ತಿಗಳು ಬ್ಯಾಂಕ್‌ನೊಳಗೆ ಪ್ರವೇಶಿಸಿದ್ದು, ಒಬ್ಬ ಕ್ಯಾಶ್ ಕೌಂಟರ್ ನಲ್ಲಿ ಹಣ ಕದಿಯಲು ಪ್ರಯತ್ನಿಸುತ್ತಿರುವಾಗಲೇ, ಮತ್ತೊಬ್ಬ ಸೆಕ್ಯೂರಿಟಿ ಕೈಗೆ ಸಿಕ್ಕಿಹಾಕಿಕೊಂಡಿದ್ದು, ದರೋಡೆ ಮಾಡುವಲ್ಲಿ ವಿಫಲವಾಗಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

Trending News