ಚಾಕಲೇಟ್ ಬಾರ್ ನಷ್ಟೇ ತೂಗುತ್ತಿದೆ ಇಲ್ಲೊಂದು ಮಗು !

   

Updated: Jan 13, 2018 , 01:08 PM IST
ಚಾಕಲೇಟ್ ಬಾರ್ ನಷ್ಟೇ ತೂಗುತ್ತಿದೆ ಇಲ್ಲೊಂದು ಮಗು !
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದಲ್ಲಿ ತಾಯಿಯೊಬ್ಬಳು ಚಾಕಲೇಟ್ ಬಾರ್ ನಷ್ಟು ತೂಕವಿರುವ ಹೆಣ್ಣು ಮಗುವಿಗೆ ಜನ್ಮನೀಡಿರುವ ಅಪರೂಪದ ಘಟನೆ ನಡೆದಿದೆ. 

ಹೌದು, ನೀವು ಇದನ್ನು ನಂಬಲೇಬೇಕು. ಉದಯಪುರದ ಮನುಶಿ ಎನ್ನುವ ಮಹಿಳೆ ಅಕಾಲಿಕ ಜನನದ ನಂತರ ಕೇವಲ 400 ಗ್ರಾಂಗಳಷ್ಟು ತೂಗುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಆರು ತಿಂಗಳ ಅವಧಿಯ ಕ್ಲಿನಿಕಲ್ ಕೋರ್ಸನ್ನು ಪಡೆದುಕೊಂಡು ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 

ಶಿಶುವನ್ನು ನೋಡಿಕೊಳ್ಳುವ ವೈದ್ಯರು ಈ ಮಗು  ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿನ ಅತಿ ಚಿಕ್ಕ ನವಜಾತ ಶಿಶುವೆಂದು ತಿಳಿಸಿದ್ದಾರೆ. ಈ ಹಿಂದೆ 2012 ರಲ್ಲಿ ಮೊಹಾಲಿಯಲ್ಲಿ 450 ಗ್ರಾಂ ತೂಕದ ರಜನಿ ಎಂಬ ಮಗು ಜನಿಸಿದ್ದು ಈವರೆಗಿನ ಅತಿ ಕಿರಿಯ ಶಿಶು ಎಂದು ವರದಿಯಾಗಿದೆ.ಹೆಣ್ಣು ಮಗು ಜನಿಸಿದಾಗ  400 ಗ್ರಾಂ ತೂಕ ಮತ್ತು 8.6 ಇಂಚುಗಳಷ್ಟು ತೂಗುತ್ತಿತ್ತು ಎಂದು ತಾಯಿ ಮನುಷಿ ತಿಳಿಸಿದ್ದಾಳೆ.

ಅವಳು ಜನನದ ಸಮಯದಲ್ಲಿ ಉಸಿರಾಡುವುದಿಲ್ಲ ಮತ್ತು ಅಕಾಲಿಕವಾಗಿ ಮಗುವಿಗೆ ಜನ್ಮ ನೀಡಿದ ನಂತರ, ಅವಳ ಶ್ವಾಸಕೋಶಗಳು, ಹೃದಯ, ಮಿದುಳು ಮತ್ತು ಮೂತ್ರಪಿಂಡಗಳು ಕಾರ್ಯಚಲನೆಯಲ್ಲಿ ವ್ಯತ್ಯಾಸವಾಗುತ್ತಿತ್ತು ಮತ್ತು ಆ ಮಗುವಿನ  ಚರ್ಮವು ತೆಳುವಾಗಿತ್ತು  ಆದರೂ ದಂಪತಿಗಳಿಬ್ಬರ ನಿರ್ಧಾರದಿಂದಾಗಿ  ಮಗು ಈಗ ಆರೋಗ್ಯವಾಗಿದೆ.