ಚದುರಿಹೋಗಲಿದೆಯೇ ಮಹಾ ವಿಕಾಸ್ ಆಘಾಡಿ? ಭಾರಿ ಕುತೂಹಲಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

Maharashtra Politics: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಯುಬಿಟಿ, ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಮಹಾವಿಕಾಸ್ ಆಘಾಡಿ ಶೀಘ್ರದಲ್ಲಿಯೇ ಚದುರುವ ಲಕ್ಷಣಗಳು ಗೋಚರಿಸತೊಡಗಿವೆ. ಇದೀಗ ಅಜೀತ್ ಪವಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.   

Written by - Nitin Tabib | Last Updated : Apr 22, 2023, 02:26 PM IST
  • ಆದರೆ, ಅಜಿತ್ ಪವಾರ್ ತಮ್ಮ ಈ ಹೇಳಿಕೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
  • ಇದಾದ ಬಳಿಕ ಅಜಿತ್ ಪವಾರ್ ಅವರಿಗೆ ನೀವು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಂತೆ
  • ಸಿಎಂ ಆಗಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಯಿತು.
ಚದುರಿಹೋಗಲಿದೆಯೇ ಮಹಾ ವಿಕಾಸ್ ಆಘಾಡಿ? ಭಾರಿ ಕುತೂಹಲಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ title=

Maharashtra Politics: ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಅಜಿತ್ ಪವಾರ್ ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದು ರಾಜ್ಯ ರಾಜಕೀಯದಲ್ಲಿ ಇದೀಗ ಭಾರಿ ಕುಗೂಹಲಕ್ಕೆ ಕಾರಣವಾಗಿದೆ. ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬ ಊಹಾಪೋಹಗಳಿಗೆ ಇದೀಗ ಮತ್ತಷ್ಟು ಬಲ ಸಿಕ್ಕಂತಾಗಿದೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಊಹಾಪೋಹಗಳ ಮಧ್ಯೆ, ಅಜಿತ್ ಪವಾರ್ ಅವರು 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಯದೆ ಮಹಾರಾಷ್ಟ್ರದ ಸಿಎಂ ಹುದ್ದೆಗೆ ತಮ್ಮ ಪಕ್ಷವು ಇನ್ನೂ ಹಕ್ಕು ಸಾಧಿಸಬಹುದು ಎಂದು ಹೇಳಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ತಾವು ನೂರಕ್ಕೆ ನೂರರಷ್ಟು ಮಹಾರಾಷ್ಟ್ರದ ಸಿಎಂ ಆಗುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. 2004ರಲ್ಲಿ ಎನ್‌ಸಿಪಿ ತನ್ನ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾಗ ಎನ್ ಸಿ ಪಿ ಪಕ್ಷದ ಆಗಿನ ತಮ್ಮ ಸಹವರ್ತಿ ದಿವಂಗತ ಆರ್‌ಆರ್ ಪಾಟೀಲ್ ಸಿಎಂ ಆಗಬಹುದಿತ್ತು, ಆದರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಗಲಿದೆ ಎಂಬ ಸಂದೇಶ ದೆಹಲಿಯಿಂದ ಬಂದಿತ್ತು ಎಂದು ಅಜಿತ್ ಪವಾರ್ ಬಹಿರಂಗಪಡಿಸಿದ್ದಾರೆ.

ಸಿಎಂ ಸ್ಥಾನಕ್ಕೇರಲು ಅಜಿತ್ ಪವಾರ್ ರೆಡಿ!
ಜೂನ್ 2022 ರಲ್ಲಿ, ಶಿವಸೇನೆಯಲ್ಲಿನ ಬಂಡಾಯಕ್ಕೆ ಮುಂಚೆಯೇ, ಏಕನಾಥ್ ಶಿಂಧೆ ಅತೃಪ್ತರಾಗಿದ್ದಾರೆ ಎಂದು ನಾನು ಕೇಳಿದ್ದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಅವನ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಎಂಬುದು ತಮಗೆ ಗೊತ್ತಿತ್ತು ಎಂದು ಅವರು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ ಸಿಎಂ ಸ್ಥಾನವನ್ನು ಪಡೆದುಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, ಅಜಿತ್ ಪವಾರ್, 2024 ಏಕೆ, ತಾವು ಇಂದೂ ಕೂಡ ಸಿಎಂ ಸ್ಥಾನವನ್ನು ಪಡೆಯಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆಗೆ ಎನ್‌ಸಿಪಿ ಏಕೆ ಅಂಟಿಕೊಂಡಿದೆ?
ಆದರೆ, ಅಜಿತ್ ಪವಾರ್ ತಮ್ಮ ಈ ಹೇಳಿಕೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದಾದ ಬಳಿಕ ಅಜಿತ್ ಪವಾರ್ ಅವರಿಗೆ ನೀವು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಂತೆ ಸಿಎಂ ಆಗಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಜಿತ್ ಪವಾರ್, ಹೌದು, ನಾನು ನೂರಕ್ಕೆ ನೂರು ಸಿಎಂ ಆಗಲು ಬಯಸುತ್ತೇನೆ ಎಂದಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆಗೆ ಎನ್‌ಸಿಪಿ ಏಕೆ ಇಷ್ಟೊಂದು ಅಂಟಿಕೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2004 ರಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಒಟ್ಟಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು ಮತ್ತು ಎನ್‌ಸಿಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತ್ತು ಎಂದಿದ್ದಾರೆ.

ಇದನ್ನೂ ಓದಿ-Eid 2023: 'ಪ್ರಾಣ ಬೇಕಾದರೂ ಕೊಡುವೆ, ಆದರೆ ದೇಶ ವಿಭಜನೆಗೆ ಅವಕಾಶ ಕೊಡಲ್ಲ' ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ದಾದರು ಏಕೆ?

2004ರಲ್ಲಿ ಮುಖ್ಯಮಂತ್ರಿಯಾಗಲು ಏಕೆ ಸಾಧ್ಯವಾಗಲಿಲ್ಲ?
ಈ ಪ್ರಶ್ನೆಗೆ ಉತ್ತರಿಸಿದ ಎನ್‌ಸಿಪಿ ಮುಖಂಡ ಅಜಿತ್ ಪವಾರ್, 2004 ರ ವಿಧಾನಸಭೆ ಚುನಾವಣೆಯಲ್ಲಿ ನಾವು 71 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಕೇವಲ 69 ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ತವಾಗಿತ್ತು. ಆಗ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಎನ್‌ಸಿಪಿಯಿಂದಲೇ ಯಾರಾದರೊಬ್ಬರು ಸಿಎಂ ಆಗುತ್ತಾರೆ ಎಂದು ಭವಿಸಿದ್ದರು. ಆದರೆ ಉನ್ನತ ಮಟ್ಟದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಎನ್‌ಸಿಪಿಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಕಾಂಗ್ರೆಸ್ ಗೆ ಸಿಎಂ ಸ್ಥಾನ ಸಿಗಲಿದೆ ಎಂಬ ಸಂದೇಶ ದೆಹಲಿಯಿಂದ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ: 68 ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್ 

ಆಗ ತಮ್ಮ ಸಹೋದ್ಯೋಗಿ ಪಾಟೀಲ್ ಅವರು ಸದನದ ಮುಖಂಡರಾಗಿದ್ದರು ಮತ್ತು 2004 ರಲ್ಲಿ ಎನ್‌ಸಿಪಿ ಸಿಎಂ ಸ್ಥಾನ ಪಡೆದಿದ್ದರೆ ಅವರು ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಅಜಿತ್ ಪವಾರ್ ಹೇಳಿದ್ದಾರೆ. ನಂತರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎನ್‌ಸಿಪಿಗಿಂತ ಹೆಚ್ಚು ಸ್ಥಾನಗಳು ಬಂದಿದ್ದರಿಂದ ಸಿಎಂ ಹುದ್ದೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವುದಾಗಿ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News