ತಾಜ್ ಮಹಲ್ ಪ್ರವೇಶ ಇನ್ನು ದುಬಾರಿ!

ತಾಜ್ ಮಹಲ್ ನಲ್ಲಿ ಟರ್ನ್ ಸ್ಟೈಲ್ ಗೇಟ್ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಈ ಗೇಟ್ ನಿರ್ಮಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ, ಟಿಕೆಟ್ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರಿಗೆ ತಾಜ್ ಮಹಲ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

Last Updated : Jun 12, 2019, 12:08 PM IST
ತಾಜ್ ಮಹಲ್ ಪ್ರವೇಶ ಇನ್ನು ದುಬಾರಿ! title=

ಆಗ್ರಾ: ಪ್ರೇಮದ ಸಂಕೇತವಾದ ತಾಜ್ ಮಹಲ್ ಅನ್ನು ನೋಡಬೇಕೆಂಬುದು ಪ್ರತಿಯೊಬ್ಬರ ಆಸೆ. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಪ್ರವೇಶಿಸುವುದು ಇನ್ನು ದುಬಾರಿಯಾಗಿದೆ. ತಾಜ್ ಮಹಲ್ನ ಪುರಾತತ್ತ್ವ ಶಾಸ್ತ್ರ ಇಲಾಖೆಯು ತಾಜ್ ಮಹಲ್ ಪ್ರವೇಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ತಾಜ್ ಮಹಲ್ ಪ್ರವೇಶಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ. ಇದಲ್ಲದೆ ತಾಜ್ ಮಹಲ್ ಪ್ರವೇಶಿಸುವ ರೀತಿಯನ್ನು ಸಹ ಬದಲಾಯಿಸಲಾಗಿದೆ.

ಟಿಕೆಟ್ ಸ್ಕ್ಯಾನ್ ನಂತರ ಪ್ರವೇಶ:
ತಾಜ್ ಮಹಲ್ ನಲ್ಲಿ ಟರ್ನ್ ಸ್ಟೈಲ್ ಗೇಟ್ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಈ ಗೇಟ್ ನಿರ್ಮಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ, ಟಿಕೆಟ್ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರಿಗೆ ತಾಜ್ ಮಹಲ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಶೀಘ್ರದಲ್ಲೇ ಕಾಂತೀಯ ನಾಣ್ಯ (ನಾಣ್ಯ)ವನ್ನು ಬಳಲಿ ತಾಜ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ನಾಣ್ಯ ಬಳಸಿ ತಾಜ್ ಮಹಲ್ ಪ್ರವೇಶಿಸುವ ಪ್ರವಾಸಿಗಳು ಕೇವಲ ಮೂರು ಗಂಟೆಗಳು ಮಾತ್ರ ತಾಜ್ ಮಹಲ್ ಒಳಗೆ ಇರಲು ಅವಕಾಶವಿದೆ.

ಟೋಕನ್ ಅನ್ನು ನವೀಕರಿಸಬೇಕು:
ಒಂದುವೇಳೆ ಪ್ರವಾಸಿಗರು 3 ಗಂಟೆಗಿಂತ ಅಧಿಕ ಸಮಯವನ್ನು ತಾಜ್ ಮಹಲ್ ನಲ್ಲಿ ಕಳೆಯಬೇಕೆಂದಿದ್ದರೆ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಪ್ರವಾಸಿಗರಿಗೆ ನೀಡಲಾದ ನಾಣ್ಯವನ್ನು ಪುನಃ ರಿಚಾರ್ಜ್ ಮಾಡಬೇಕಾಗುತ್ತದೆ. ಇದಕ್ಕಾಗಿ ತಾಜ್ ಮಹಲ್ ಆವರಣದಲ್ಲಿ ರಾಯಲ್ ಗೇಟ್ ಬಳಿ ಒಂದು ಕೌಂಟರ್ ಇರುತ್ತದೆ. ಕಾಯಿನ್(ನಾಣ್ಯ) ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವ ಮೊದಲು ಕೆಲವು ಬದಲಾವಣೆಗಳನ್ನೂ ಮಾಡಲಾಗುತ್ತಿದೆ.  ಇದರ ನಂತರ ನಾಣ್ಯಗಳನ್ನು ನೀಡಲಾಗುವುದು. ಹೊರಬರುವಾಗ ಆ ನಾಣ್ಯಗಳನ್ನು ಹಾಕಲು ಟರ್ನ್ ಸ್ಟೈಲ್ ಗೇಟ್ ಬಳಿ ಬಾಕ್ಸ್ ಗಳನ್ನು ಇರಿಸಲಾಗುವುದು ಎಂದು ಎಎಸ್ಐ ಅಧಿಕಾರಿಗಳು ಹೇಳುತ್ತಾರೆ.

ಬೇರೆ-ಬೇರೆ ಬಣ್ಣದ ನಾಣ್ಯ:
ಭಾರತದ ಪುರಾತತ್ವ ವಿಭಾಗದಿಂದ ಪಡೆದ ಮಾಹಿತಿ ಪ್ರಕಾರ, ವಿದೇಶಿ ಪ್ರವಾಸಿಗಳಿಗೆ ನೀಲಿ ನಾಣ್ಯಗಳನ್ನು ನೀಡಲಾಗುವುದು. ಭಾರತೀಯ ಪ್ರವಾಸಿಗರಿಗೆ ಗ್ರೇ ಬಣ್ಣದ ನಾಣ್ಯ ಮತ್ತು  ಗಲ್ಫ್ ಮತ್ತು ಸಾರ್ಕ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಹಳದಿ ಬಣ್ಣದ ನಾಣ್ಯಗಳನ್ನು ನೀಡಲಾಗುವುದು. ಈ ವೇಳೆ ಐದು ವರ್ಷದ ಒಳಗಿನ ಮಕ್ಕಳಿಗೆ ಝೀರೋ ವ್ಯಾಲ್ಯೂ ಟಿಕೆಟ್ ಮುಂದುವರೆಯಲಿದೆ ಎನ್ನಲಾಗಿದೆ.
 

Trending News