ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಅಗತ್ಯವಿಲ್ಲ - ಶಾಗೆ ತಿಳಿಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರೊಂದಿಗಿನ ಸಭೆಯಲ್ಲಿ ನಾಗರಿಕರ ನೋಂದಣಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

Last Updated : Sep 19, 2019, 04:06 PM IST
ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಅಗತ್ಯವಿಲ್ಲ - ಶಾಗೆ ತಿಳಿಸಿದ ಮಮತಾ   title=
Photo courtesy: ANI

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರೊಂದಿಗಿನ ಸಭೆಯಲ್ಲಿ ನಾಗರಿಕರ ನೋಂದಣಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

19 ಲಕ್ಷ ಜನರಲ್ಲಿ ನಿಜವಾದ ಮತದಾರರು ಅಸ್ಸಾಂನ ಪೌರತ್ವ ನೋಂದಾವಣೆಯಿಂದ ಹೊರಗುಳಿದಿದ್ದಾರೆ ಎಂದು ಸೂಚಿಸಿದ ಅವರು, ಬಂಗಾಳದಲ್ಲಿ ಎನ್ಆರ್ಸಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರದ ಈ ನಡೆಗೆ ಅಸ್ಸಾಂನಲ್ಲಿ ಸ್ವತಃ ಆಡಳಿತ ಪಕ್ಷದ ನಾಯಕರ ಒಂದು ಗುಂಪು ಕೂಡ ಇದನ್ನು ಟೀಕಿಸಿದೆ. ಈ ಪಟ್ಟಿಯಲ್ಲಿ ಪಕ್ಷದ ಪ್ರಮುಖ ಮತದಾರರ ಗುಂಪಿನಲ್ಲಿದ್ದ ಹಲವಾರು ಬಂಗಾಳಿ ಹಿಂದೂಗಳನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಇಂದು ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜೀ 'ನಾನು ಅವರಿಗೆ ಪತ್ರವೊಂದನ್ನು ಹಸ್ತಾಂತರಿಸಿ ಎನ್ಆರ್ಸಿ ಪಟ್ಟಿಯಿಂದ ಹೊರಗುಳಿದ 19 ಲಕ್ಷ ಜನರಲ್ಲಿ ಹಲವರು ಹಿಂದಿ ಮಾತನಾಡುವವರು ಬಂಗಾಳಿ ಮಾತನಾಡುವವರು ಮತ್ತು ಸ್ಥಳೀಯ ಅಸ್ಸಾಮಿಗಳು ಸೇರಿದ್ದಾರೆ. ಅನೇಕ ನಿಜವಾದ ಮತದಾರರನ್ನು ಕೈ ಬಿಡಲಾಗಿದೆ, ಇದನ್ನು ಪರಿಶೀಲಿಸಬೇಕು ಎಂದು ನಾನು ಅಧಿಕೃತ ಪತ್ರದಲ್ಲಿ ಸಲ್ಲಿಸಿದ್ದೇನೆ' ಎಂದು ಹೇಳಿದರು.

ನಿನ್ನೆ ಮಮತಾ ಬ್ಯಾನರ್ಜೀ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಭಿವೃದ್ದಿ ಕುರಿತಾದ ಕಾರ್ಯಗಳ ಬಗ್ಗೆ ಚರ್ಚಿಸಿರುವುದಾಗಿ ಹೇಳಿದರು. ಆದರೆ ಅವರು ಈ ವೇಳೆ ಎನ್ಆರ್ಸಿ ಬಗ್ಗೆ ಯಾವುದೇ ರೀತಿ ಚರ್ಚೆ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ ತಾವು ಈಗಾಗಲೇ ಎನ್ಆರ್ಸಿ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವುದಾಗಿ ಹೇಳಿದರು.
 

Trending News