'ನಮ್ಮ ರಾಜ್ಯದಲ್ಲಿ NRC ಜಾರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ'

SC ಮತ್ತು ST ಪಂಗಡಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಮುಂದಿನ 10 ವರ್ಷಗಳಿಗೆ ಹೆಚ್ಚಿಸಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ. ಬಿಹಾರ್ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ NRCಗೆ ಸಂಬಂಧಿಸಿದಂತೆ ಗಂಭೀರ ಹೇಳಿಕೆ ನೀಡಿದ್ದಾರೆ.

Written by - Nitin Tabib | Last Updated : Jan 13, 2020, 02:33 PM IST
'ನಮ್ಮ ರಾಜ್ಯದಲ್ಲಿ NRC ಜಾರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' title=

ಪಟ್ನಾ: ಬಿಹಾರ ವಿಧಾನ ಮಂಡಲದ ಎರಡೂ ಸದನಗಳ ವಿಶೇಷ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಈ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ NRC ಜಾರಿ ಕುರಿತು ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ನಿತೀಶ್ ಕುಮಾರ್, ಬಿಹಾರ ರಾಜ್ಯದಲ್ಲಿ NRC ಜಾರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. NRC ಬಂದಿದ್ದೇಲ್ಲಿ? ಕೇಂದ್ರದಲ್ಲಿ ರಾಜೀವ್ ಗಾಂಧಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಆಸ್ಸಾಂ ನಾಗರಿಕರ ಜೊತೆಗೆ ಈ ಕುರಿತು ಚರ್ಚಿಸಲಾಗಿತ್ತು ಹಾಗೂ ದೇಶಾದ್ಯಂತ ಇದನ್ನು ಜಾರಿಗೊಲಿರುವ ಔಚಿತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಕೂಡ ಸ್ಪಷ್ಟವಾಗಿ ಹೇಳಿಕೆ ನೀಡಿದ್ದು, NRC ಕೇವಲ ಅಸ್ಸಾಂಗೆ ಸಂಬಂಧಿಸಿದ್ದು ಎಂದಿದ್ದಾರೆ ಎಂದು ನಿತೀಶ್ ಹೇಳಿದ್ದಾರೆ. CAA ಕುರಿತೂ ಕೂಡ ತಾವು ಸದನದಲ್ಲಿ ಸುದೀರ್ಘ ಚರ್ಚೆ ನಡೆಸುವುದಾಗಿ ಹೇಳಿರುವ ನಿತೀಶ್ ಕುಮಾರ್, 2010ರಲ್ಲಿ NPR ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಈ ಬಾರಿ ಇತರೆ ಕೆಲವು ವಿಷಯಗಳ ಕುರಿತು ಕೂಡ ಕೇಳಲಾಗುತ್ತಿದೆ ಎನ್ನಲಾಗಿದೆ.

ಸದ್ಯ ರಾಜ್ಯದಲ್ಲಿ 'ಹಸಿರು ಯೋಜನೆ' ಆರಂಭಗೊಂಡಿದ್ದು, ತಾವು ತಮ್ಮ ಸಂಪೂರ್ಣ ಗಮನ ಈ ಯೋಜನೆಯ ಮೇಲೆ ಕೇಂದ್ರೀಕರಿಸಿದ್ದು, ಸದನದಲ್ಲಿ NPR ಅಷ್ಟೇ ಅಲ್ಲ ಯಾವುದೇ ವಿಷಯದ ಮೇಲೂ ಕೂಡ ಚರ್ಚೆ ನಡೆಯಬೇಕು ಎಂದಿದ್ದಾರೆ. ಜನಗಣತಿಯ ಕುರಿತು ಹೇಳಿಕೆ ನೀಡಿರುವ ಅವರು ಜಾತಿಯ ಆಧಾರದ ಮೇಲೆಯೂ ಜನಗಣತಿ ನಡೆಯಬೇಕು ಎಂಬುದು ತಮ್ಮ ಪಕ್ಷದ ನಿಲುವು . ಈ ಹಿಂದೆ 1930 ರಲ್ಲಿ ಈ ರೀತಿಯ ಜನಗಣತಿ ನಡೆದಿತ್ತು, ಆ ಬಳಿಕ ಜಾತಿಯ ಆಧಾರದ ಮೇಲೆ ಜನಗಣತಿ ನಡೆದಿಲ್ಲ ಎಂದಿದ್ದಾರೆ. 2010 ರಲ್ಲಿಯೂ ಕೂಡ ಇದಕ್ಕೆ ಸಂಬಂಧಿಸಿದಂತೆ ಕೂಗುಗಳು ಕೇಳಿಬಂದಿದ್ದವು. ಆದರೆ, ಕೇವಲ ಅಂಕಿ-ಅಂಶಗಳು ಮಾತ್ರ ಬಹಿರಂಗಗೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ. ವಿಭಿನ್ನ ಧರ್ಮಗಳನ್ನು ಆಚರಿಸುವ ಜನರ ಗಣತಿ ನಡೆಯುತ್ತದೆ ಆದರೆ, ಇತರೆ ಜಾತಿಗಳ ಗಣತಿ ಮಾತ್ರ ನಡೆಯುವುದಿಲ್ಲ. ನಮ್ಮ ಅನಿಸಿಕೆಗಳನ್ನು ನಾವು ಕೇಂದ್ರ ಸರ್ಕಾರಕ್ಕೂ ಕೂಡ ಮನವರಿಕೆ ಮಾಡೋಣ ಎಂದು ನಿತೀಶ್ ಹೇಳಿದ್ದಾರೆ.

Trending News