ಆಧುನಿಕ ಭಾರತೀಯ ಜಾಹೀರಾತುಗಳ ಪಿತಾಮಹ ಆಲಿಕ್ ಪಡಮ್ಸೆ ನಿಧನ

 ಖ್ಯಾತ ರಂಗಭೂಮಿ ತಜ್ಞ  ಮತ್ತು ಜಾಹೀರಾತು ಗುರು ಎಂದೇ ಖ್ಯಾತಿ ಪಡೆದಿದ್ದ  ಆಲಿಕ್ ಪಡಮ್ಸೆ(90) ಅನಾರೋಗ್ಯದಿಂದ ಶನಿವಾರದಂದು ನಿಧನರಾಗಿದ್ದಾರೆ. 

Last Updated : Nov 17, 2018, 12:37 PM IST
ಆಧುನಿಕ ಭಾರತೀಯ ಜಾಹೀರಾತುಗಳ ಪಿತಾಮಹ ಆಲಿಕ್ ಪಡಮ್ಸೆ ನಿಧನ  title=

ನವದೆಹಲಿ: ಖ್ಯಾತ ರಂಗಭೂಮಿ ತಜ್ಞ  ಮತ್ತು ಜಾಹೀರಾತು ಗುರು ಎಂದೇ ಖ್ಯಾತಿ ಪಡೆದಿದ್ದ  ಆಲಿಕ್ ಪಡಮ್ಸೆ(90) ಅನಾರೋಗ್ಯದಿಂದ ಶನಿವಾರದಂದು ನಿಧನರಾಗಿದ್ದಾರೆ. 

ಆಸ್ಕರ್ ಪ್ರಶಸ್ತಿ ವಿಜೇತ್ ಹಾಲಿವುಡ್ ಚಿತ್ರ 'ಗಾಂಧಿ' (1982)ಯಲ್ಲಿ ಅವರು ಮುಹಮ್ಮದ್ ಅಲಿ ಜಿನ್ನಾ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ಮತ್ತು ನಿರ್ಮಾಪಕನಾಗಿದ್ದಲ್ಲದೆ   ರಂಗಭೂಮಿ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾಹೀರಾತು ಕಂಪನಿ ಲಿಂಟಾಸ್ ಬಾಂಬೆಗೆ ನೇತೃತ್ವ ವಹಿಸಿ ಮುಂದೆ  ಭಾರತೀಯ ಜಾಹಿರಾತುಗಳ ಪಿತಾಮಹ ಅಥವಾ ಗುರು ಎಂದೇ ಅವರು ಪ್ರಖ್ಯಾತಿಯನ್ನು ಪಡೆದಿದ್ದರು. ಜಲಪಾತದಲ್ಲಿ ಲಿರಿಲ್ ಜೊತೆ ಬಾಲಕಿ. ಹಮಾರಾ ಬಜಾಜ್, ಕಾಮಸೂತ್ರದ ದಂಪತಿಗಳು ಇವು ಅವರು ನೀಡಿರುವ ಜಾಹಿರಾತು ಜಗತ್ತಿಗೆ ನೀಡಿರುವ ಕೊಡುಗೆಗಳು. 

ಈ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 2000 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಟಾಗೋರ್ ರತ್ನ ಪ್ರಶಸ್ತಿಯನ್ನು  ಸಹ ಅವರು ಪಡೆದರು. ಒಮ್ಮೆ ಲಿಂಟಾಸ್ಗಾಗಿ ಕೆಲಸ ಮಾಡಿದ್ದ ನಿರ್ದೇಶಕ ಶ್ಯಾಮ್ ಬೆನೆಗಲ್, "ದೇಶದಲ್ಲಿನ ಅತ್ಯಂತ ಅಸಾಧಾರಣ ವ್ಯಕ್ತಿಗಳಲ್ಲಿ ಇವರು ಒಬ್ಬರು" ಎಂದು ಪಡಮ್ಸಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆಲಿಕ್ ಪಡಮ್ಸೆ ಅವರ ನಿಧನಕ್ಕೆ ರಾಷ್ಟ್ರಪತಿ,ಪ್ರಧಾನಿ  ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Trending News